ಮೊಳಕೆಯೊಡೆದ ಆಲೂಗಡ್ಡೆ ಎಷ್ಟು ಅಪಾಯ!? ಈ ಬಗ್ಗೆ ನೀವು ತಿಳಿಯಲೇಬೇಕು!

Date:

ಮೊಳಕೆಯೊಡೆದ ಆಲೂಗಡ್ಡೆ ಎಷ್ಟು ಅಪಾಯ!? ಈ ಬಗ್ಗೆ ನೀವು ತಿಳಿಯಲೇಬೇಕು!

ಶಾಪಿಂಗ್ ಮಾಡುವಾಗ ರಿಯಾಯಿತಿ ದರದಲ್ಲಿ, ಆಫರ್ ಆಗಿ ನೀಡುವ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶವನ್ನು ನಾವು ಯಾವತ್ತೂ ಮಿಸ್ ಮಾಡೋದಿಲ್ಲ. ಅದು ಬಟ್ಟೆ, ಮನೆಯ ವಸ್ತುಗಳು ಅಥವಾ ಕಿರಾಣಿ ಶಾಪಿಂಗ್ ಆಗಿರಲಿ ಎಲ್ಲಾ ಖರೀದಿ ಮಾಡುತ್ತೇವೆ. ಕಿರಾಣಿ ಶಾಪಿಂಗ್ ಮಾಡುವಾಗ, ಆಲೂಗಡ್ಡೆಯ ದೊಡ್ಡ ಚೀಲ ಕಡಿಮೆ ಇದ್ದರೆ ಖರೀದಿಸುತ್ತೇವೆ. ಆದರೆ ದೀರ್ಘಕಾಲ ಬಳಸದೆ ಮತ್ತು ಗಮನಿಸದೆ ಬಿಟ್ಟಾಗ, ಈ ಆಲೂಗಡ್ಡೆ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುತ್ತವೆ ಹಾಗು ಮೊಳಕೆಯೊಡೆಯುತ್ತದೆ.

ವೈವಿಧ್ಯಮಯ ಖಾದ್ಯಗಳಲ್ಲಿ ಆಲೂಗೆಡ್ಡೆಯಿಂದ ಮಾಡಿದ ಚಿಪ್ಸ್, ಬಜ್ಜಿ ಯಾರಿಗೆ ತಾನೇ ಇಷ್ಟವಾಗೊಲ್ಲ, ಹೇಳಿ. ವೈವಿಧ್ಯಮಯ ಖಾದ್ಯಗಳಲ್ಲಿ ಆಲೂಗಡ್ಡೆ ಬಳಕೆ ಸಾಮಾನ್ಯ. ತನ್ನ ರುಚಿ, ಪೌಷ್ಟಿಕಾಂಶದ ಮೌಲ್ಯಕ್ಕಾಗಿ ಆಲೂಗಡ್ಡೆ ಹೆಚ್ಚು ಪ್ರಸಿದ್ಧಿ.

ಮಾರುಕಟ್ಟೆಯಿಂದ ಆಲೂಗಡ್ಡೆ ಖರೀದಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದು ನಿಮ್ಮ ಆರೋಗ್ಯಕ್ಕೆ ಅಪಾಯ ತರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಬಹುತೇಕ ಪ್ರತಿ ಅಡುಗೆ ಮನೆಯಲ್ಲಿಯೂ ಆಲೂಗಡ್ಡೆ ಇದ್ದೇ ಇರುತ್ತದೆ. ಏಕೆಂದರೆ ಅವು ಬೇಗನೆ ಹಾಳಾಗುವುದಿಲ್ಲ. ಜೊತೆಗೆ ಅವುಗಳನ್ನು ತುಂಬಾ ಸಮಯದ ವರೆಗೆ ಸಂಗ್ರಹಿಸಬಹುದಾಗಿದ್ದು ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಿ ಮನೆಗೆ ತರುತ್ತಾರೆ. ಆದರೆ ಕೆಲವು ದಿನಗಳ ನಂತರ ಆಲೂಗಡ್ಡೆ ಮೊಳಕೆಯೊಡೆಯುತ್ತದೆ. ಅನೇಕ ಜನರು ಅವುಗಳನ್ನು ತೆಗೆದು ಅಡುಗೆಗೆ ಬಳಸುತ್ತಾರೆ.

ಇದನ್ನು ಮಾಡುವುದು ತುಂಬಾ ಅಪಾಯಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ರೀತಿ ಮೊಳಕೆ ಬಂದ ಆಲೂಗಡ್ಡೆಯನ್ನು ಸೇವನೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಬೆಂಗಳೂರು ಮೂಲದ ವೈದ್ಯ ಡಾ. ದೀಪಕ್ ಆರಾಧ್ಯ ಎಚ್ಚರಿಸಿದ್ದಾರೆ. ಹಾಗಾದರೆ ಇದನ್ನು ಯಾಕೆ ಸೇವನೆ ಮಾಡಬಾರದು? ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ

ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ರೀತಿಯ ತಿಳಿ ಹಸಿರು ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೊನೈನ್ ಉತ್ಪತ್ತಿಯಾಗುತ್ತವೆ. ಇವುಗಳ ಸೇವನೆ ವಿಷಕಾರಿಯಾಗಬಹುದು. ಇದು ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಅಲ್ಲದೆ ಇದು ತಲೆನೋವು ಮತ್ತು ತಲೆ ತಿರುಗುವಿಕೆಯಂತಹ ನರವೈಜ್ಞಾನಿಕ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಡಾ. ದೀಪಕ್ ಹೇಳುತ್ತಾರೆ.

ಆದ್ದರಿಂದ ಇನ್ನು ಮುಂದೆ ಅಡುಗೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಂಡು ಆಲೂಗಡ್ಡೆಯನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ನೀವು ಬೇಡ ಎಂದರು ಬರುತ್ತದೆ

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...