ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಡುವೆ ಬಿನ್ನಾಬಿಪ್ರಾಯಾ ಇದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು . ಅದು ನಿಜಾ ಎಂಬ ರೀತಿಯಲ್ಲಿ ಇದೀಗ ಬಿಜೆಪಿ ಕಚೇರಿಯಿಂದ ಯಡಿಯೂರಪ್ಪನವರ ಮತ್ತೊಬ್ಬ ಆಪ್ತನಿಗೆ ಕೊಕ್ ನೀಡಲಾಗಿದೆ.
ಮಾಧ್ಯಮ ಸಂಚಾಲಕರಾಗಿದ್ದ ಶಾಂತರಾಮ್ ಅವರಿಗೆ ಈಗ ಕೊಕ್ ನೀಡಲಾಗಿದ್ದು, ಇವರು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದರು. ಯಡಿಯೂರಪ್ಪ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದೆ . ಇದರಿಂದಾಗಿ ಮತ್ತೊಮ್ಮೆ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ನಡುವೆ ಸಂಘರ್ಷ ಆರಂಭವಾಯಿತಾ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.