ಯಡಿಯೂರಪ್ಪ ಅವರ ವಿರುದ್ಧ ಆಡಿಯೋ ರೆಕಾರ್ಡ್ ಮಾಡಿದ್ದು ಯಾರು, ಬಿಡುಗಡೆ ಮಾಡಿದ್ದು ಯಾರು ಎಂಬುದನ್ನು ಮೊದಲು ಕಾಂಗ್ರೆಸ್ ಹೇಳಲಿ. ಆಮೇಲೆ ಟೀಕೆ ಮಾಡಲಿ. ಈ ರೀತಿ ಅಪಪ್ರಚಾರ ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದು ಬಿಜೆಪಿ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನಿರಂತರವಾಗಿ ನಡೆಯುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಸಿದ್ದರಾಮಯ್ಯನವರಿಗೆ ಬಿಜೆಪಿ ಬಗ್ಗೆ ಟೀಕೆ ಮಾಡುವುದಕ್ಕೆ ಯಾವುದೇ ವಿಷಯವಿಲ್ಲ ಹಾಗಾಗಿ ಅವರು ನಮ್ಮ ಸರ್ಕಾರದ ವಿರುದ್ಧ ಹೋರಾಡುವುದಕ್ಕೆ ವಿಷಯವಿಲ್ಲದ ಹಿನ್ನೆಲೆಯಲ್ಲಿ ಸುಳ್ಳು ಆಡಿಯೋ-ವಿಡಿಯೋ ಇಟ್ಟುಕೊಂಡು ಜನರ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ಜನ ಸ್ಪಂದಿಸುವುದಿಲ್ಲ. ಇದರಿಂದ ಕಾಂಗ್ರೆಸ್ ಇನ್ನೂ ಅಧೋಗತಿಗೆ ಹೋಗುತ್ತದೆ ಎಂದು ಹೇಳಿದರು.