ಯಶಸ್ಸಿನ ಸರಳ ಸೂತ್ರಗಳು..!

1
135

ಸಾಧಕರನ್ನು ಕಂಡು ನಾವು ಅವರಂತೆ ಆಗ್ಬೇಕು…ಏನಾದರೂ ಸಾಧಿಸಲೇ ಬೇಕು ಎಂದುಕೊಳ್ಳುತ್ತಿರುತ್ತೇವೆ. ಯಶಸ್ಸಿನ ಹುಡುಕಾಟದಲ್ಲಿರುವ ನಾವು ನಮ್ಮ ಕೈಯಲ್ಲೇ ಯಶಸ್ಸು ಇರುತ್ತದೆ ಎಂಬುದನ್ನು ಮರೆತಿರುತ್ತೇವೆ. ನಾವು ಬೇರೊಬ್ಬರನ್ನು ಅವಲಂಭಿಸುವುದಕ್ಕಿಂತ ಯಶಸ್ಸಿನ ಅಸ್ತ್ರ ನಮ್ಮಲ್ಲೇ ಇದೆ ಎನ್ನೋದನ್ನು ಅರಿಯಬೇಕು.


ಹೌದು ನಮ್ಮ ಯಶಸ್ಸಿನ ಮೊದಲ ಅಸ್ತ್ರ ನಮ್ಮ ವ್ಯಕ್ತಿತ್ವ‌. ನಮ್ಮ ವ್ಯಕ್ತಿತ್ವ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಾವು ಸಮಾಜದಲ್ಲಿ ನಾಲ್ಕು ಜನರ ನಡುವೆ ಹೇಗಿರುತ್ತೇವೆ. ನಮ್ಮ ವರ್ತನೆ ಹೇಗಿರುತ್ತೆ ಅನ್ನೋದು ಸಹ ಮುಖ್ಯ. ನಮ್ಮ ಕೈಯಲ್ಲೇ ಇದೆ ನಮ್ಮ ಯಶಸ್ಸು…!

ನಾವು ಮಾಡುವ ಕೆಲಸ, ಅದರಲ್ಲಿ ನಮಗಿರುವ ಆಸಕ್ತಿ. ಅದಕ್ಕಾಗಿ ನಾವು ಪಡೋ ಪರಿಶ್ರಮ‌ ಯಶಸ್ಸಿಗೆ ಬೇಕಾದ ಪ್ರಮುಖಾಂಶ.

ಸಮಯಪ್ರಜ್ಞೆ ಯಶಸ್ಸಿನ ಮತ್ತೊಂದು ಗುಟ್ಟು. ನಾವು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಸಿಕ್ಕ ಸಮಯವನ್ನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಗ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ.

ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತಾ ಮುಂದೆ ಸಾಗಬೇಕು .‌ ತಪ್ಪಿನಿಂದ ತಪ್ಪಿಸಿಕೊಳ್ಳುವುದಲ್ಲ, ಅದನ್ನು ಸರಿಪಡಿಸಿಕೊಳ್ಳಬೇಕು. ಅವಶ್ಯಕವಿದ್ದಲ್ಲಿ ನಾವು ಒಳ್ಳೆಯ ರೀತಿಯಲ್ಲಿ ಬದಲಾಗಲೇ ಬೇಕು. ಆಗ ಯಶಸ್ಸ ಸಿಗಲಿದೆ.


ಗುರಿಯ ಕಡೆಗೆ ಗಮನ ಕೊಡಬೇಕು. ಗುರಿ ಇದ್ದರೆ ಸಾಲದು. ಅದನ್ನು ತಲುಪವ ತನಕ ಹಠ ಬಿಡಬಾರದು. ಮರಳಿ ಯತ್ನವ ಮಾಡುತ್ತಲೇ ಇರಬೇಕು.‌ ಅದೃಷ್ಟವನ್ನು ನಂಬುವುದಕ್ಕಿಂತ ನಮ್ಮ ಸಾಮಾರ್ಥ್ಯ ಮತ್ತು ಪ್ರತಿಭೆಯ ಬಗ್ಗೆ ಭರವಸೆ ಇಡಬೇಕು.

 

*ಸಂಗೀತ, ಬಟ್ಟೆ, ತಿನಿಸುಗಳಲ್ಲಿ ನಿಮ್ಮ ಅಭಿರುಚಿ ಒಂದೇ ಇದೆ ಎಂದ ಮಾತ್ರಕ್ಕೆ ಎಲ್ಲಾ ಕೂಡ ಒಂದೇ ಆಗಿರುತ್ತದೆ ಎಂಬ ಭ್ರಮೆ ಬೇಡ. ಅಭಿರುಚಿಯೇ ಸಂಬಂಧಗಳ ಮಾನದಂಡವಲ್ಲ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಜೀವನ ಸಂಗಾತಿಯಿಂದ ಮಾತ್ರ ಕೊನೆಯ ತನಕ ಖುಷಿ ಖುಷಿಯಲ್ಲಿ ಜೀವನ ನಡೆಸಬಹುದು.

* ಮುನಿಸಿಕೊಂಡು ದೂರ ಉಳಿಯುವುದಕ್ಕಿಂತ ಪರಸ್ಪರ ವಾದ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎನ್ನುತ್ತದೆ ಒಂದು ಸಂಶೋಧನೆ. ಸುಮ್ಮನೆ ಅನುಮಾನ ಬಗೆಹರಿಸಿಕೊಳ್ಳದೇ ದಿನಾ ಜಗಳ ಮಾಡುವುದಕ್ಕಿಂತ, ಕೊರಗುವುದಕ್ಕಿಂತ ಪರಸ್ಪರ ವಾದ ಮಾಡಿ,.ಒಬ್ಬರ ಮನಸ್ಸನ್ನು ಇನ್ನೊಬ್ಬರು ಗೆಲ್ಲಿ.
* ಲವ್ ಮ್ಯಾರೇಜ್ ಓಕೆ…ಅದಕ್ಕಿಂತ ಅರೆಂಜ್ ಮ್ಯಾರೇಜ್ ಕಡೆಯೇ ಹೆಚ್ಚು ಗಮನ ಕೊಡಿ..ಕೆಲವೊಮ್ಮೆ ನೀವು ಅಂದುಕೊಂಡಿರುವ ಪ್ರೀತಿ ಕೇವಲ ಆಕರ್ಷಣೆಯೂ ಆಗಿರಬಹುದು. ಆದ್ದರಿಂದ ಅರೆಂಜ್ ಮ್ಯಾರೇಜ್ ಕಡೆ ಗಮನಕೊಡಿ. ನಿಮ್ಮ ಕುಟುಂಬವೂ ನಿಮ್ಮ ಬೆಂಬಲಕ್ಕೆ ಇರುತ್ತದೆ.


*ಪರಸ್ಪರ ಒಬ್ಬರನೊಬ್ಬರು ಗೌರವಿಸಿ.. ಅಹಂ ಇಬ್ಬರ ಹತ್ತಿರವೂ ಸೋಕುವುದು ಬೇಡ. ಒಬ್ಬರಾದರೂ ಸೋಲಿ,… ನಮ್ಮವರ ಎದುರು ನಾವು ಸೋತರೆ ನಷ್ಟವೇನೂ ಇಲ್ಲ.. ಗೆಲ್ಲುವುದು ಪ್ರೀತಿ, ಉಳಿಯುವುದು ಸಂಬಂಧ.
* ಎಲ್ಲಾಕ್ಕಿಂತ ಮುಖ್ಯವಾಗಿ ಸಂಬಂಧಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸಂಬಂಧಗಳ ಮೌಲ್ಯ ತಿಳಿಯಿರಿ. ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಿ. ಅನುಮಾನದ ಹುತ್ತ ಕಟ್ಟದಂತೆ ಜೋಪಾನವಾಗಿರಿ. ಒಬ್ಬರ ಮೇಲೆ ಇನ್ನೊಬ್ಬರಿಗೆ ಗೌರವಿರಲಿ.

ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳುವುದು ಹೇಗೆ? 

ಗೆಲುವು, ಯಶಸ್ಸಿಗೆ ಮುಖ್ಯವಾದುದು ಆತ್ಮವಿಶ್ವಾಸ.‌ಆದ್ರೆ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇಲ್ದೆ ಇದ್ರೆ ಅದು ನಮ್ಮ ಸೋಲಿಗೆ ಕಾರಣ‌. ಆತ್ಮವಿಶ್ವಾಸವೇ ಗೆಲುವಿನ ಮೊದಲ ಹಾದಿ. ಹಾಗಾದ್ರೆ ಈ ಆತ್ಮವಿಶ್ವಾಸ, ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

* ಮೊದಲು ನಾವು ಕಂಫರ್ಟ್ ಆಗಿರ್ಬೇಕು. ನಮಗೆ ಒಪ್ಪುವ ,ಹಿಡಿಸುವ ಡ್ರೆಸ್ ಹಾಕ್ಬೇಕು.

*ನಿಮಗಾದಷ್ಟು ಮಟ್ಟಿಗೆ ಇನ್ನೊಬ್ಬರಿಗೆ ಸಹಾಯ ಮಾಡಿ.‌ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚೋದು ಕನ್ಫರ್ಮ್.

* ವ್ಯಾಯಾಮದಿಂದ ಮಾನಸಿಕ ಆರೋಗ್ಯ ಕೂಡ ವೃದ್ಧಿಸುತ್ತದೆ. ಆರೋಗ್ಯವಾಗಿದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ‌.

*ನಿಮ್ಮ ಸಾಮಾರ್ಥ್ಯ ಮತ್ತು ದೌರ್ಬಲ್ಯ ತಿಳಿದು‌ ಪಟ್ಟಿ ಮಾಡಿಕೊಳ್ಳಿ ‌. ದೌರ್ಬಲ್ಯವನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಳ್ಳಿ. ಆಗ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಬಂದೇ ಬರುತ್ತದೆ.

* ಕೇಳಿಸಿಕೊಳ್ಳುವುದು, ಅಧ್ಯಯನ ಹೊಸತನ, ಕಲಿಕೆ ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ.

ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಪ್ಲೇ ಆಫ್ಸ್‌ಗೆ ಕಾಲಿಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡ ಇದೀಗ ಮೊದಲ ಕ್ವಾಲಿಫೈಯರ್ ಮ್ಯಾಚ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಗೆದ್ದ ತಂಡ ನೇರ ಫೈನಲ್‌ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ.
ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

MI :ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್, ಕ್ರುಣಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ಡಿಸಿ : : ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್‌), ಮಾರ್ಕಸ್ ಸ್ಟೋಯ್ನಿಸ್‌, ಡೇನಿಯಲ್ ಸ್ಯಾಮ್ಸ್, ಆಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಎನ್ರಿಕ್ ನಾರ್ಟ್ಜ್.

ದೆವ್ವ, ಭೂತ, ಪಿಶಾಚಿಯನ್ನು ನಂಬದ ಜನರಿದ್ದಾರೆ.‌ನಂಬದವರಿಗಿಂತ ನಂಬುವವರ ಸಂಖ್ಯೆಯೇ ಜಾಸ್ತಿ.‌ ಆದರೆ, ಕೆಲವೊಂದು ಘಟನೆಗಳು ಆದಾಗ ನಂಬದೇ ಇರುವವರೂ ಕೂಡ ನಂಬುತ್ತಾರೆ.

ನಿಮಗೆ ಇಲ್ಲಿ ಎರಡು ದೆವ್ವದ ಮನೆಗಳ ಪರಿಚಯ ಮಾಡಿಕೊಡುತ್ತೇವೆ. ಇದು ಎಷ್ಟು ಸುಳ್ಳೋ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಜನ ವಿಪರೀತ ನಂಬಿದ್ದಾರೆ. ‌ಜನರ ನಂಬಿಕೆ ಸತ್ಯಕ್ಕೆ ದೂರವಾದುದು ಎಂದೂ ಕೂಡ ಹೇಳಲಾಗದು.
ಇಲ್ಲಿ ಎರಡು ದೆವ್ವದ ಮನೆಗಳನ್ನು ‌ಪರಿಚಯ ಮಾಡಿಕೊಡುತ್ತೇವೆ.


ಮೊದಲನೆಯದಾಗಿ, ಡಿ ಮೆಲ್ಲೋ ಮನೆ ಎಂದು. ಇದು ಗೋವಾದ ಸ್ಯಾಂಟೆಮಾಲ್ ಪ್ರದೇಶದಲ್ಲಿರುವ ಹಳೆ ಬಂಗಲೆ. ರಾತ್ರಿ ವೇಳೆ ಈ ಮನೆಯಿಂದ ಮಹಿಳೆಯೊಬ್ಬಳು ಕಿರುಚಾಡುವುದು ಹಾಗೂ ಕಿಟಕಿ ಬಾಗಿಲು ಬಡಿಯುವ ಸದ್ದು ಕೇಳಿಸುತ್ತದೆ. ಈ ಬಂಗಲೆಯಲ್ಲಿ ಸಹೋದರರಿಬ್ಬರು ವಾಸವಿದ್ದು, ಆಸ್ತಿ ವಿಷಯಕ್ಕೆ ಜಗಳವಾಡಿ ಸಾವನ್ನಪ್ಪಿದ್ದಾರಂತೆ. ಆದರೆ, ಈ ಮನೆ ಮಾರಾಟ ಮಾಡಲು ಸಹ ಸಾಧ್ಯವಾಗಿಲ್ಲವಂತೆ‌.

ಎರನೇಯದು ರಾಡ್ರಿಗಸ್ ಎಂದು‌. ಇದು ನೋಡಲು ಸಾಮಾನ್ಯ ಮನೆಯಂತೆ ಕಾಣುತ್ತದೆ. ಅದರೆ ರಾತ್ರಿ ಆಗುತ್ತಿದ್ದಂತೆ ಕಿಟಕಿ ಬಾಗಿಲು ಬಡಿದುಕೊಳ್ಳುತ್ತವೆಯಂತೆ. ಮನೆ ಹತ್ತಿರ ಹೋಗುತ್ತಿದ್ದಂತೆ ಬಿರುಗಾಳಿಯಂತೆ ಗಾಳಿ ಬೀಸುತ್ತದೆ ಎಂದು ಹೇಳುತ್ತಾರೆ. ಈ ಬಗ್ಗೆ ಸಾಕಷ್ಟು ಸುದ್ದಿಗಳಾಗಿವೆ.‌ ಇದು ಕೂಡ ಇರುವುದು ಗೋವಾದಲ್ಲಿ.

ಏನೂ ಇಲ್ಲದಿದ್ದವರು ಏನೇನೋ ಆದರು..! ನಿಮಗಿದು ಖಂಡಿತಾ ಸ್ಫೂರ್ತಿ

ಸೆಲೆಬ್ರಿಟಿಗಳೆಂದರೆ ಹೆಚ್ಚಾಗಿ ತನ್ನ ಕ್ಷೇತ್ರದ ಹಿನ್ನೆಲೆಯಿಂದಲೇ ಬಂದಿರುತ್ತಾರೆ. ಇನ್ನೂ ಕೆಲವರು ಹೆತ್ತವರ ಹೆಸರು ಹೇಳಿಕೊಂಡು ಎತ್ತರಕ್ಕೆ ಬೆಳೆದಿರುತ್ತಾರೆ. ಆದರೆ ಕೆಲವರು ಮಾತ್ರ ಕಷ್ಟದಲ್ಲೇ ಬೆಳೆದು ಎತ್ತರಕ್ಕೆ ಏರಿರುತ್ತಾರೆ. ಅದರಲ್ಲೂ ಈ ಕೆಳಗಿನ 10 ಜನರ ಸ್ಟೋರಿ ಕೇಳಿದ ಮೇಲೆ ನಿಮಗೆ ಆ ಮಾತು ನಿಜ ಎನ್ನಿಸುತ್ತದೆ.

1. ಕಣ್ಣಿಲ್ಲದವಳು ಇತಿಹಾಸ ಸೃಷ್ಠಿಸಿದಳು..!

1

ಆಕೆಗೆ ಕಣ್ಣಿಲ್ಲ. ತನ್ನ ಪರಿಸ್ಥಿತಿಯನ್ನು ಕಂಡು ಮರಗುವ ಮನಸ್ಸೂ ಆಕೆಗಿರಲಿಲ್ಲ. ಆದ್ದರಿಂದ ಐ.ಎಫ್.ಎಸ್ (ಇಂಡಿಯನ್ ಫಾರಿನ್ ಸರ್ವಿಸ್) ಇತಿಹಾಸದಲ್ಲೇ ಮೊದಲ ಬಾರಿಗೆ 100 ಪರ್ಸೆಂಟ್ ಅಂಕ ಪಡೆದ ಸಾಧನೆ ಮಾಡಿದ್ದಾಳೆ. ಯೆಸ್.. ಕಣ್ಣೇ ಕಾಣದ ಬೆನೋ ಝೆಫಿನ್ ಎಂಬ ಯುವತಿ ಈ ಸಾಧನೆ ಮಾಡಿ ಇಡೀ ಭಾರತವನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿದ್ದಾಳೆ. ಇಷ್ಟಕ್ಕೂ ಈಕೆ ಪರೀಕ್ಷೆ ಬರೆದಿದ್ದು ಬ್ರೈಲ್ ಲಿಪಿ ಬಳಸಿ..!

2. ಕೈಕಾಲು ಇಲ್ಲದವನ ಸಾಧನೆ ಕಂಡಿರಾ..?

2

ಆತನ ಹೆಸರು ರಾಜಾ ಮಹೇಂದ್ರ ಪ್ರತಾಪ್ ಅಂತ. 5ನೇ ವಯಸ್ಸಿನಲ್ಲೇ ಕೈಕಾಲುಗಳೆರಡನ್ನೂ ಕಳೆದುಕೊಂಡಿದ್ದ. ಆದರೆ ಛಲವನ್ನಲ್ಲ ಎಂಬುದನ್ನು ಇಂದು ಆತ ಮಾಡಿತೋರಿಸಿದ್ದಾನೆ. ಕೈ ಬೆರಳುಗಳಿಲ್ಲದೆಯೇ ಎಂ.ಬಿ.ಎ ಪರೀಕ್ಷೆ ಪಾಸಾದ ಈತ ಇಂದು ಅಹ್ಮದಾಬಾದ್ ನ ಓ.ಎನ್.ಜಿ.ಸಿ.ಯಲ್ಲಿ ಫೈನಾನ್ಸ್ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ..!

3. ಸ್ಫೂರ್ತಿ ಸೆಲೆ ಅಕ್ಕೈ

3

ಆಕೆ ಅಕ್ಕೈ ಪದ್ಮಸಾಲಿ.. ಆಗಿನ್ನು ವಯಸ್ಸು 12. ತನ್ನನ್ನು ಹಿಜಡಾ ಎಂದು ಕರೆಯುತ್ತಿದ್ದ ಜನರನ್ನು ಕಂಡು ರೋಸಿ ಹೋಗಿದ್ದ ಆಕೆ, ಆತ್ಮಹತ್ಯೆಗೂ ಯತ್ನಿಸಿದಳು. ಅದು ಫಲಿಸಲಿಲ್ಲ. ಆದರೆ ಇಂದು ಆಕೆಯ ಮಾತುಗಳನ್ನು ಕೇಳಲು ದೇಶ-ವಿದೇಶಗಳಿಂದ ಆಹ್ವಾನ ಬರುತ್ತಿವೆ. ಹಿಜಡಾ ಎಂದವರೇ ಪ್ರೀತಿಯಿಂದ ಅಕ್ಕೈ ಎನ್ನುತ್ತಿದ್ದಾರೆ. ಇಷ್ಟಕ್ಕೂ ಅಕ್ಕೈನ ಮಾತುಗಳಿಂದ ಪ್ರೇರೇಪಿತವಾಗಿದ್ದ ಜಪಾನಿಗರು 2014ರಲ್ಲಿ ಆಕೆಯನ್ನು ಟೋಕಿಯೋದಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಬಾರ್ ಅಸೋಷಿಯೇಷನ್ ನಲ್ಲಿ ಮಾತನಾಡಲು ಆಹ್ವಾನಿಸಿತ್ತು ಎಂದರೆ ಅಕ್ಕೈನ ಮಾತುಗಳಿಗೆ ಎಂಥಾ ಬೆಲೆಯಿದೆ ಎಂಬುದು ಅರ್ಥವಾಗುತ್ತದೆ.

4. ಬಲು ಎತ್ತರಕ್ಕೇರಿದ ಕುಳ್ಳಿ

Poonam-Shroti

ಆಕೆ ನೋಡಲು ತುಂಬಾ ಕುಳ್ಳಗಿದ್ದಾಳೆ. ಆದರೆ ಎಂಬಿಎ ಪದವಿ ಮುಗಿಸಿ ಒಂದು ದೊಡ್ಡ ಸೊಸೈಟಿಯಲ್ಲಿ ಉದ್ಯೋಗ ಮಾಡುತ್ತಿದ್ದಾಳೆ. ಅದರಲ್ಲೂ 6 ವರ್ಷಗಳ ಆಕೆಯ ಸಾಧನೆಯನ್ನು ಗುರುತಿಸಿ ಆ ಸಂಸ್ಥೆಯು ಕೆಲಸ ನೀಡಿದೆ ಎಂದರೆ ಆಕೆ ಎಷ್ಟೊಂದು ಬುದ್ದಿಶಾಲಿ ಎಂಬುದು ಅರ್ಥವಾಗುತ್ತದೆ. ಇಷ್ಟಕ್ಕೂ ಆಕೆಯ ಹೆಸರು ಪೂನಮ್ ಶ್ರೋತಿ ಅಂತ.

5. ಬಾಲ್ಯ ವಿವಾಹ ಕಂಡಲ್ಲಿ ಹಾಜರಾಗ್ತಾಳೆ ರೋಶ್ನಿ..!

6

ಆಕೆಗೆ ಕೇವಲ 14ನೇ ವರ್ಷಕ್ಕೆ ಮದುವೆ ಮಾಡಲಾಯಿತು. ಬಾಲ್ಯ ವಿವಾಹದಿಂದ ಆಕೆ ಸಂಕಷ್ಟವನ್ನೂ ಅನುಭವಿಸಿದಳು. ಗಂಡ ಎನಿಸಿಕೊಂಡವನ ಕಿರುಕುಳ ಕಂಡು, ತನ್ನಂತೆ ಬೇರೆ ಹುಡುಗಿಯರು ಸಂಕಷ್ಟ ಅನುಭವಿಸಬಾರದು ಎಂಬ ನಿಧರ್ಾರಕ್ಕೆ ಬಂದಿದ್ದಾಳೆ ರೋಶ್ನಿ ಭೈರ್ವಾ ಅನ್ನೋ ಯುವತಿ. ಆದ್ದರಿಂದ ತನ್ನ ಊರಿನಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯುತ್ತಿದ್ದರೂ ಕೂಡಾ ಅಲ್ಲಿಗೆ ರೋಶ್ನಿ ಹಾಜರಾಗುತ್ತಾಳೆ. ಬಾಲ್ಯ ವಿವಾಹವನ್ನೂ ತಡೆಯುತ್ತಾಳೆ. ಅಲ್ಲದೇ ಹುಡುಗಿಯರಿಗೆ ವಿದ್ಯಾಭ್ಯಾನ ನೀಡುವಂತೆ ಒತ್ತಿ ಹೇಳುತ್ತಾಳೆ. ಸ್ವತಃ ರೋಶ್ನಿಯೂ ಕೂಡಾ ಬಿಎ ಪದವಿ ಪಡೆದಿದ್ದಾಳೆ.

6. ರೈತನ ಮಗ ಚಾರಿತ್ರಿಕ ದಾಖಲೆ ಸೃಷ್ಟಿಸಿದ..!

8

ಶ್ರೀಮಂತರ ಕ್ರೀಡೆ ಎಂದು ಕರೆಯಲ್ಪಡುವ ಆಟಗಳಲ್ಲಿ ಗಾಲ್ಫ್ ಗೂ ಒಂದು ಸ್ಥಾನವಿದೆ. ಆದರೆ ಕರ್ನಾಟಕದ ರೈತನ ಮಗ ಚಿಕ್ಕರಂಗಪ್ಪ ಕೇವಲ 11ನೇ ವಯಸ್ಸಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದ್ದ. ಗಾಲ್ಫ್ ಲೋಕದ ಗಮನವನ್ನು ತನ್ನೆಡೆಗೆ ಸೆಳೆದಿದ್ದ. ಇಷ್ಟಕ್ಕೂ ಆತ ಗಾಲ್ಫ್ ಅಭ್ಯಾಸ ಆರಂಭಿಸಿದ್ದು ತನ್ನ ತಂದೆ ಕೆಲಸ ಮಾಡುತ್ತಿದ್ದ ಯಜಮಾನನ ಬಳಿ..! ಅಲ್ಲಿಂದಲೇ ಆರಂಭವಾದ ಗಾಲ್ಫ್ ಜರ್ನಿ ಇಂದಿಗೂ ನಿರಾತಂಕವಾಗಿ ಮುಂದುವರೆದಿದೆ.

7. ಬೋಡೋ ಉಗ್ರರೊಂದಿಗೆ ಕಾದಾಡುವ ಲೇಡಿ ಐಪಿಎಸ್..!

SANJUKTA PARASHAR(IPS Officer, Dedicated Career Woman, Wife and Mother)
ಅಸ್ಸಾಂನಲ್ಲಿ ಬೋಡೋ ಉಗ್ರರ ಹಾವಳಿ ಸದಾ ಹೆಚ್ಚಾಗಿರುತ್ತದೆ. ಅಂತಹ ಪ್ರದೇಶದಲ್ಲಿ ಸಂಜುಕ್ತಾ ಪರಾಶರ್ ಎಂಬ ಐಪಿಎಸ್ ಒಬ್ಬರು ಧಿಟ್ಟತನದಿಂದ ಹೋರಾಡುತ್ತಿದ್ದಾರೆ. ಅಲ್ಲದೇ ರಾತ್ರಿ ಪಾಳಿ ಕೆಲಸವನ್ನೂ ಮಾಡುವ ಮೂಲಕ ಉಗ್ರರ ಹೋರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ವಿಶೇಷವೆಂದರೆ ಸಂಜುಕ್ತಾರವರು ಯು.ಪಿ.ಎಸ್.ಸಿಯಲ್ಲಿ 87ನೇ ರ್ಯಾಂಕ್ ಪಡೆದಿದ್ದಾರೆ. ಅಲ್ಲದೇ ಜವಾಹರಲಾಲ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿಯನ್ನೂ ಪಡೆದಿದ್ದಾರೆ.

8. ಎರಡು ಸೋಲುಗಳೇ ಗೆಲುವಿನ ಸೋಪಾನವಾದವು..!

12

ಆತನ ಹೆಸರು ಸಂದೀಪ್ ಮಹೇಶ್ವರಿ ಅಂತ. ಓದು ತಲೆಗೆ ಹತ್ತಲೇ ಇಲ್ಲ. ಸತತ ಮೂರು ವರ್ಷ ಪರೀಕ್ಷೆಯಲ್ಲಿ ಈತ ದುಮ್ಕಿ ಹೊಡೆದ. ಆಗ ಓದು ಬೇಡವೆನಿಸಿ ಸ್ನೇಹಿತರೊಂದಿಗೆ ಸೇರಿ ಒಂದು ಬಿಸಿನೆಸ್ ಆರಂಭಿಸಿದ. ಆದರೆ ಅದು ಅಟ್ಟರ್ ಫ್ಲಾಪ್ ಆಯಿತು. ಆರು ತಿಂಗಳ ಬಳಿಕ ಕನ್ಸಲ್ಟಿಂಗ್ ಸಂಸ್ಥೆ ಆರಂಭಿಸಿದ. ಅದೂ ಫ್ಲಾಪ್ ಲಿಸ್ಟ್ಗೆ ಸೇರಿತು. ಆದರೂ ಸಂದೀಪ್ ಸೋಲೊಪ್ಪಿಕೊಳ್ಳಲಿಲ್ಲ. ಬದಲಿಗೆ ಇಮೇಜಸ್ಬಜಾರ್.ಕಾಂ ಎಂಬ ವೆಬ್ ಸೈಟ್ ಸ್ಥಾಪಿಸಿದ. ಆದರೆ ಈ ಬಾರಿ ಸಂದೀಪ್ ಸೋಲಲಿಲ್ಲ. ಅಚ್ಚರಿ ಎಂದರೆ ಆ ವೆಬ್ ಸೈಟ್ ಇಂದು ವರ್ಷಕ್ಕೆ ಬರೋಬ್ಬರಿ 10 ಕೋಟಿ ವ್ಯಾಪಾರ ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು.

9. ಪ್ರೀತಿ ಬಲಿಪಡೆದ ಬೆಟ್ಟವನ್ನೇ ಕಡಿದ ವೀರ

4

ದಶರಥ್ ಮಾಂಝಿ. ಬಿಹಾರದ ಬಡಪಾಯಿ ಕಾರ್ಮಿಕ. ಒಂದು ಕಾಲದಲ್ಲಿ ತನ್ನ ಪತ್ನಿ ಫಲ್ಗುಣಿ ದೇವಿ ನೀರು ಹೊತ್ತು ಬೆಟ್ಟದಿಂದ ಇಳಿಯುತ್ತಿದ್ದಾಗ ಅಕಸ್ಮಾತಾಗಿ ಕಾಲು ಜಾರಿ ಬಿದ್ದು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದಳು. ಫಲ್ಗುಣಿ ದೇವಿಯನ್ನು ಕಂಡು ಯಾರೋ ಒಬ್ಬರು ಮಾಂಝಿಗೆ ಸುದ್ದಿ ಮುಟ್ಟಿಸಿದರು. ಆದರೆ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಸಬೇಕೆಂದರೆ ಸುಮಾರು 70 ಕಿಲೋ ಮೀಟರ್ ಸುತ್ತುವರೆದು ಹೋಗುವುದು ಅನಿವಾರ್ಯವಾಗಿತ್ತು. ಆದ್ದರಿಂದ ಮಾಂಝಿ 70 ಕಿಲೋ ಮೀಟರ್ ಬೆಟ್ಟವನ್ನು ಸುತ್ತವರೆದು ಫಲ್ಗುಣಿ ದೇವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ವೈದ್ಯರಿಂದ ಬಂದ ಉತ್ತರ `ನಿನ್ನ ಪತ್ನಿ ಬದುಕಿಲ್ಲ’ ಎಂಬುದಾಗಿತ್ತು. ಇದರಿಂದ ತೀವ್ರವಾಗಿ ನೊಂದ ಮಾಂಝಿ, ತನ್ನ ಪತ್ನಿಗಾದ ಸ್ಥಿತಿ ಯಾರಿಗೂ ಬರಬಾರದು ಎಂದು ನಿರ್ಧರಿಸಿದ. ಬೃಹತ್ ಬೆಟ್ಟವನ್ನು ಕಡಿದು ರಸ್ತೆ ನಿರ್ಮಿಸಲು ಮುಂದಾದ. ಪ್ರಾರಂಭದಲ್ಲಿ ಮಾಂಝಿ ಸಾಹಸ ಕಂಡು ಊರಿನವರು ನಕ್ಕಿದ್ದರು. ಆದರೆ ದಿನಗಳೆದಂತೆ ಮಾಂಝಿಯು ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸಿದ್ದ. ನೂರಾರು ಜನರಿಗೆ ದಾರಿ ಒದಗಿಸಿದ್ದ. ಅಂದು ತೆಗಳಿದ್ದವರೇ ಹೊಗಳುವಂತೆ ಮಾಡಿದ. ಇಷ್ಟಕ್ಕೂ ಬೆಟ್ಟ ಕಡಿಯಲು ಮಾಂಝಿ 22 ವರ್ಷ ಶ್ರಮಿಸಿದ್ದ ಎಂದರೆ ನಂಬಲಸಾಧ್ಯ ಅಲ್ಲವೇ..? ಆದ್ದರಿಂದ ಮಾಂಝಿ ಸಾಹಸವನ್ನು ಕಂಡು ಸರ್ಕಾರವೇ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

10. ಯಾರಿಗೂ ಬೇಡವಾದಾತನ ಬೆಲೆ ಈಗ ಹೇಗಿದೆ ಗೊತ್ತಾ..?

15

ಆತ ಕಷ್ಟಪಟ್ಟು ಮೇಲೆದ್ದು ಬಂದ. ಪ್ರಾರಂಭದಲ್ಲಿ ನಿರ್ದೇಶಕ, ನಿರ್ಮಾಪಕರು ನೀನು ನೋಡಲು ಚೆನ್ನಾಗಿಲ್ಲ, ಕಲರ್ ಇಲ್ಲ, ಹೈಟ್ ಇಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದರು. ಆದರೆ ಚಿತ್ರದಲ್ಲಿ ನಟಿಸುವ ಆಸೆಯನ್ನು ಮಾತ್ರ ಬಿಟ್ಟಿರಲಿಲ್ಲ. ಇಂದು ಅದೇ ನಿರ್ಮಾಪಕರು, ನಿರ್ದೇಶಕರು ಆತನ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸಹ ಇವರ ಜೊತೆ ನಟಿಸುವ ಆಸೆ ಇದೆ ಎಂದಿದ್ದಾರಂತೆ, ಇಷ್ಟಕ್ಕೂ ಆತ ಬೇರೆ ಯಾರೂ ಅಲ್ಲ. ಬಾಲಿವುಡ್ ನ ಬಹುಬೇಡಿಕೆಯ ನಟ ನವಾಜುದ್ದಿನ್ ಸಿದ್ದಿಕಿ. ಯೆಸ್.. ಇಂದು ನವಾಜುದ್ದಿನ್ ಸಿದ್ದಿಕಿ ನಟನೆಯನ್ನು ಕಂಡು ಬರ್ಲಿನ್ ಫಿಲ್ಮ್ ಫೆಸ್ಟಿವಲ್, ರೋಜರ್ ಎಬರ್ಟ್ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ನಾಲ್ಕೈದು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಇನ್ನೂ ಕೆಲ ಚಿತ್ರಗಳು ಚಿತ್ರೀಕರಣಗೊಳ್ಳುತ್ತಿವೆ. ಇಷ್ಟು ಸಾಕಲ್ಲವೇ ನವಾಜುದ್ದೀನ್ ಸಿದ್ದಿಕಿ ಬಗ್ಗೆ..?

 

 

1 COMMENT

LEAVE A REPLY

Please enter your comment!
Please enter your name here