ರಾಧಿಕಾ ಮತ್ತು ಯಶ್ ದಂಪತಿಗೆ ಕಳೆದ ವರ್ಷ ಹೆಣ್ಣು ಮಗು ಆಯ್ರಾ ಜನಿಸಿದ್ದಳು. ಇನ್ನು ಆಯ್ರಾ ಜನಿಸಿದ ಕೆಲ ತಿಂಗಳುಗಳಲ್ಲಿಯೇ ರಾಧಿಕಾ ಪಂಡಿತ್ ಅವರು ಮತ್ತೆ ಗರ್ಭಿಣಿ ಎಂಬ ಸಂತಸದ ವಿಷಯವನ್ನು ಯಶ್ ಅವರು ಹಂಚಿಕೊಂಡಿದ್ದರು. ಇನ್ನು ಇತ್ತೀಚೆಗಷ್ಟೇ ಎರಡನೇ ಮಗು ಸಹ ಜನಿಸಿದ್ದು ಈ ಬಾರಿ ರಾಧಿಕಾ ಯಶ್ ಅವರು ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ಗಂಡು ಮಗುವಾದ ಖುಷಿಯಲ್ಲಿ ನಿನ್ನೆಯಷ್ಟೇ ಮೀಡಿಯಾ ಮುಂದೆ ತಮ್ಮ ಮಗುವನ್ನು ಕರೆತಂದ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ ತಮ್ಮ ಖುಷಿಯನ್ನು ಹಂಚಿಕೊಂಡರು.
ಇದೇ ವೇಳೆ ಮಾಧ್ಯಮದವರು ನಿಮ್ಮ ಮಗನಿಗೆ ಯಾವ ಹೆಸರು ಇಡ್ತೀರಿ ಎಂದು ಪ್ರಶ್ನೆಯನ್ನು ಕೇಳಿದಾಗ ಯಶ್ ಅವರು ಇದರ ಬಗ್ಗೆ ಮಾಹಿತಿಯನ್ನು ನೀಡಿದರು. ನನ್ನ ಮಗನಿಗೆ ಸದ್ಯಕ್ಕೆ ನಾಮಕರಣ ಮಾಡುವುದಿಲ್ಲ ನಮ್ಮ ಸಂಪ್ರದಾಯದ ಪ್ರಕಾರ ತುಂಬಾ ತಡವಾಗಿಯೇ ಮಕ್ಕಳಿಗೆ ನಾಮಕರಣ ಮಾಡುತ್ತೇವೆ ಮಗಳಿಗೂ ಸಹ ತುಂಬಾ ಲೇಟಾಗಿ ಹೆಸರನ್ನು ಇಟ್ಟಿದ್ದೆವು ಈಗ ಆಕೆಯ ತಮ್ಮನಿಗೂ ಸಹ ಸ್ವಲ್ಪ ತಡವಾಗಿಯೇ ನಾಮಕರಣ ಮಾಡಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇನ್ನು ಸದ್ಯಕ್ಕೆ ಆತನಿಗೆ ಯಾವ ಹೆಸರು ಇಲ್ಲ ಮಗನೆ ಎಂದೇ ಕರೆಯುತ್ತೇವೆ ಎಂದು ಯಶ್ ಹೇಳಿದರು.