ಮೈತ್ರಿ ಸರ್ಕಾರದಿಂದ ಹೊರಬಂದ ಅತೃಪ್ತ ಶಾಸಕ ಬಿ ಸಿ ಪಾಟೀಲ್ ಅವರು ಉಪ ಚುನಾವಣೆಯ ಬಗ್ಗೆ ಮಾತನಾಡಿದರು .ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗುವುದಿಲ್ಲ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನನ್ನ ಕಾರ್ಯಕರ್ತರಲ್ಲಿ ಚರ್ಚಿಸಿ , ಬಿಜೆಪಿ ಸೇರುವ ಬಗ್ಗೆಯೂ ನಾನು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು .
ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕೆಲವರ ಮಾತು ಕೇಳಿ ಶಾಸಕರನ್ನು ಅನರ್ಹಗೊಳಿಸಿದ್ದು ಸರಿಯಲ್ಲ ,ಸುಪ್ರೀಂಕೋರ್ಟ್ ನಲ್ಲಿ ನ್ಯಾಯಕ್ಕಾಗಿ ಮೊರೆಹೋಗಿದ್ದೇವೆ. ನಮಗೆ ನ್ಯಾಯ ಸಿಗುವ ನಂಬಿಕೆಯಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಏನು ಬೇಕಾದರೂ ಮಾಡಲಿ, ಕಾಂಗ್ರೆಸ್ ನವರು ಮಾಡಿರುವ ಅನರ್ಹತೆಯನ್ನು ಮತದಾರರು ಅರ್ಹತೆಯಾಗಿ ಬದಲಿಸುತ್ತಾರೆಂಬ ನಂಬಿಕೆ ಇದೆ .