ಇತ್ತೀಚಿಗಷ್ಟೇ ಮೈಸೂರಿನ ಬೋಗಾದಿ ಹಿನಕಲ್ ರಿಂಗ್ ರೋಡ್ ನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಹೆದರಿ ಬೈಕ್ ಸವಾರ ಅಪಘಾತಕ್ಕೆ ತುತ್ತಾದ ವಿಷಯ ನಿಮಗೆಲ್ಲರಿಗೂ ತಿಳಿದಿರುವುದೇ.
ಈ ಬೈಕ್ ಆಕ್ಸಿಡೆಂಟ್ ನಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ನಂತರ ಅಲ್ಲಿಯೇ ಇದ್ದ ಸಾರ್ವಜನಿಕರು ಪೊಲೀಸ್ ಕಾರನ್ನು ಜಖಂಗೊಳಿಸಿ ನೀವು ತಡೆಯಲು ಯತ್ನಿಸಿದ್ದರಿಂದಲೇ ಆ ಯುವಕ ಹೀಗೆ ಸತ್ತಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಮಾತ್ರ ತಮ್ಮದು ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು ಮತ್ತು ಘಟನೆಯಲ್ಲಿ ಏಟು ತಿಂದ ಪೊಲೀಸರಿಗೆ ಪ್ರಶಂಸನಾ ಪತ್ರವನ್ನು ನೀಡಿ ಮೈಸೂರಿನ ಪೊಲೀಸ್ ಆಯುಕ್ತ ಚಂದ್ರಗುಪ್ತ ಸನ್ಮಾನಿಸಿದರು.
ಈ ಕುರಿತು ಇದೀಗ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು , ಅನ್ಯಾಯವಾಗಿ ಯುವಕನನ್ನು ಸಾಯುವ ಹಾಗೆ ಮಾಡಿದ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡ್ತಿಯಾ ನೀನೆಂಥ ಕಮೀಶನರಯ್ಯಾ ಥೂ ನಿನ್ನ ಜನ್ಮಕ್ಕೆ ನಾಚಿಕೆಯಾಗ್ಬೇಕು ಎಂದು ಉಗಿದಿದ್ದಾರೆ. ಇನ್ನು ವಿಶ್ವನಾಥ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ.