ವಿರಾಟ್ ದಾಖಲೆ ಆಟ – ಭಾರತಕ್ಕೆ ವಿರೋಚಿತ ಜಯ

0
350

ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯ ಆಟದ ನೆರವಿನಿಂದ ಟೀಮ್ ಇಂಡಿಯಾ 2 ನೇ ಏಕದಿನ ಪಂದ್ಯದಲ್ಲೂ ಪ್ರವಾಸಿ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದಿದೆ.
ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ ಅವರ ಶತಕ (116) ಹೊರತಾಗಿಯೂ 48.2 ಓವರ್ ಗಳಲ್ಲಿ ಕೇವಲ‌ 250 ರನ್ ಗಳಿಸಿ ಆಲ್ ಔಟ್ ಆಯ್ತು. 40 ನೇ ಶತಕ ಸಿಡಿಸಿದ ಕೊಹ್ಲಿ ಅತಿವೇಗವಾಗಿ (159 ಇನ್ನಿಂಗ್ಸ್) 9 ಸಾವಿರ ರನ್ ಪೂರೈಸಿದ ನಾಯಕ ಎಂಬ ಅಪರೂಪದ ದಾಖಲೆ ಬರೆದರು.
ಕೊಹ್ಲಿ ಹೊರತುಪಡಿಸಿದರೆ‌ ವಿಜಯ್ ಶಂಕರ್ 46 ರನ್ ಗಳಿಸಿದರು. ರೋಹಿತ್ ಶರ್ಮಾ ಮತ್ತು ಧೋನಿ ಶೂನ್ಯ ಸಂಪಾದಿಸಿ ನಿರಾಸೆ ಮೂಡಿಸಿದರು. ಧವನ್ 21,ಜಡೇಜಾ 21 ಕೇದರ್ ಜಾಧವ್ 11 ರನ್ ಕೊಡುಗೆ ನೀಡರು.
ಗುರಿ ಬೆನ್ನತ್ತಿದ ಆಸೀಸ್ ಗೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ (37) ಖವಾಜ (38) ಉತ್ತಮ ಆರಂಭ ಒದಗಿಸಿದರು. ಆದರೆ, ತಂಡದ ಮೊತ್ತ 83 ರನ್ ಆಗಿದ್ದಾಗ ಇಬ್ಬರೂ ಔಟಾದರು. ಬಳಿಕ ಹ್ಯಾಂಡ್ಸ್ ಕಂಬ್ (48) ಸ್ಟೋಯಿನ್ಸ್ (52) ರನ್ ಗಳಿಸಿ ಗೆಲವು ತಂದುಕೊಡುವ ಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ 49.3 ಓವರ್ ಗಳಲ್ಲಿ 242 ರನ್ ಗಳಿಗೆ ಆಸೀಸ್ ಆಲೌಟ್ ಆಗುವುದರೊಂದಿಗೆ ಭಾರತಕ್ಕೆ 8 ರನ್ ಗಳ ಜಯ ದೊರೆಯಿತು‌‌.‌ಇದು ಭಾರತದ 500ನೇ ಏಕದಿನ ಗೆಲುವು.

LEAVE A REPLY

Please enter your comment!
Please enter your name here