ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಆರತಕ್ಷತೆಯ ಫೋಟೋ ಗ್ಯಾಲರಿ ; ಕುಣಿದು ಕುಪ್ಪಳಿಸಿದ ವಧು-ವರ ಮತ್ತು ಸ್ಟಾರ್ಸ್!

Date:

ಕಳೆದ ತಿಂಗಳು ಅಂದರೆ ಡಿಸೆಂಬರ್ ಕೊನೆಯ ವಾರದಲ್ಲಿ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ವಿವಾಹ ಕಾರ್ಯಕ್ರಮ ನಡೆದಿತ್ತು. ಕೊರೊನಾ ವೈರಸ್ ಕಾರಣದಿಂದಾಗಿ ವಿವಾಹವನ್ನು ಅತಿ ಸರಳವಾಗಿ ರಮೇಶ್ ಅರವಿಂದ್ ಅವರು ಆಯೋಜನೆ ಮಾಡಿದ್ದರು. ಇದೀಗ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆಯ ಕಾರ್ಯಕ್ರಮವನ್ನು ನಿನ್ನೆ (ಜ.17) ಅದ್ದೂರಿಯಾಗಿ ನಡೆಸಲಾಯಿತು.

 

 

ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಅವರ ಆರತಕ್ಷತೆಯ ಕಾರ್ಯಕ್ರಮಕ್ಕೆ ಸಿನಿಮಾ ಮತ್ತು ರಾಜಕೀಯ ರಂಗದ ಹಲವಾರು ಪ್ರಮುಖ ವ್ಯಕ್ತಿಗಳು ಆಗಮಿಸಿದ್ದರು. ಪುನೀತ್, ಶಿವರಾಜ್ ಕುಮಾರ್, ಯಶ್ -ರಾಧಿಕಾ, ಕಿಚ್ಚ ಸುದೀಪ್, ಹಂಸಲೇಖ, ಗುರುಕಿರಣ್, ವಿಜಯಪ್ರಕಾಶ್, ರಾಘಣ್ಣ, ರವಿಚಂದ್ರನ್, ಹಿರಿಯ ನಟ ಶಿವರಾಂ, ಶ್ರೀಮುರಳಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವಾರು ಸಿನಿಮಾರಂಗದ ಕಲಾವಿದರು ಕಾರ್ಯಕ್ರಮಕ್ಕೆ ಬಂದು ವಧುವರರಿಗೆ ಶುಭಾಶಯವನ್ನು ಕೋರಿದರು.

 

 

ರಮೇಶ್ ಅರವಿಂದ್ ಅವರ ಜೊತೆ ಕಿಚ್ಚ ಸುದೀಪ್ ಮತ್ತು ಯಶ್ ಅವರ ಡಾನ್ಸ್ ಎಲ್ಲರ ಮನಸ್ಸನ್ನು ಸೆಳೆಯಿತು. ಇನ್ನು ಈ ಡಾನ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

 

 

ಸಿನಿಮಾ ಹೊರತುಪಡಿಸಿ ರಾಜಕೀಯ ವ್ಯಕ್ತಿಗಳಾದ ಸುಧಾಕರ್, ಮುನಿರತ್ನ, ತೇಜಸ್ವಿ ಸೂರ್ಯ, ಡಿಕೆ ಶಿವಕುಮಾರ್, ಆರ್ ಅಶೋಕ್, ಧ್ರುವನಾರಾಯಣ್ ಮತ್ತು ಸುಮಲತಾ ಅಂಬರೀಶ್ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪಬ್ಲಿಕ್ ಟಿವಿ ರಂಗನಾಥ್ ಅವರು ಸಹ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ವಧುವರರಿಗೆ ಶುಭಾಶಯವನ್ನು ಕೋರಿದರು.  ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆಯ ಸಂತಸದ ಕ್ಷಣಗಳ ಚಿತ್ರಗಳು ಮುಂದೆ ಇವೆ ನೋಡಿ..

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...