No menu items!
12.4 C
Munich
Wednesday, April 29, 2026

ಕಾನ್ಸ್ ಟೇಬಲ್ ಮೇಲೆ ಹಲ್ಲೆ ! ಸ್ಥಳದಲ್ಲೆ ಆರೋಪಿಗೆ ಗುಂಡೇಟು ನೀಡಿದ ಪಿಎಸ್ಐ ವಿನಯ್

Must read

ನಿನ್ನೆ ರಾತ್ರಿ ಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವೀರಭದ್ರನಗರ ಸಿಗ್ನಲ್ ಬಳಿ ನಟೋರಿಯೆಸ್ ರೌಡಿಶೀಟರ್ ವಿಜಯ್ ಕುಮಾರ್ ( ಗೊಣ್ಣೆವಿಜಿ ) ಎಂಬಾತನ ಕಾಲಿಗೆ ಗುಂಡೇಟು ,ಗಿರಿನಗರ ಸಬ್ ಇನ್ಸ್ಪೆಕ್ಟರ್ ವಿನಯ್ ಆರೋಪಿ ಎಡಗಾಲಿಗೆ ಫೈರಿಂಗ್ ಮಾಡಿದ್ದಾರೆ ವಿಜಯ್ ಕುಮಾರ್ (ಗೊಣ್ಣೆ ವಿಜಿ ) ಮೇಲೆ ಕೊಲೆ ಕೊಲೆಯತ್ನ ಧಮ್ಕಿ ದರೋಡೆ ಸೇರಿ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಕಳೆದ ಒಂದು ವಾರದ ಹಿಂದೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಜೈಲಿನಿಂದ ಹೊರಬಂದ ಕೂಡಲೇ 307 ಕೇಸ್ ಮಾಡಿಕೊಂಡಿದ್ದ ಹಾಗು ಗಿರಿನಗರದಲ್ಲಿ ವ್ಯಕ್ತಿಯೊಬ್ಬರಿಗೆ ಡ್ಯಾಗರ್ ನಿಂದ ಹಲ್ಲೆ ಮಾಡಿದ್ದ,

ನಿನ್ನೆ ರಾತ್ರಿ ಆರೋಪಿ ವೀರಭದ್ರನಗರ ಬಳಿ ಬರೋ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ PSI ವಿನಯ್ & ಟೀಂ ಆರೋಪಿಗೆ ಶರಣಾಗುವಂತೆ ತಿಳಿಸಿದರು ಆದರೆ ಪೊಲೀಸರಿಗೆ ಸರೆಂಡರ್ ಆಗದೇ ಆತ ಪೊಲೀಸ್ ಕಾನ್ಸ್ ಟೇಬಲ್ ಮಧು ಎಂಬುವವರ ಎಡಭುಜಕ್ಕೆ ಡ್ಯಾಗರ್ ನಿಂದ ಹಲ್ಲೆ ಮಾಡಿದ ಕಾರಣ ಕಡೆಗೆ ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪಿ.ಎಸ್.ಐ ವಿನಯ್ ಗಾಯಾಳು ಪೊಲೀಸ್ ಕಾನ್ಸ್ ಟೇಬಲ್ ಮಧು ಹಾಗೂ ಗುಂಡೇಟು ತಿಂದ ಆರೋಪಿಗೆ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು ನಿನ್ನೆ ಈ ಘಟನೆ ಗಿರಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೆಡೆದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article