ಬಿಗ್ ಬಾಸ್ ಮನೆಯೊಳಗೆ ಈ ಬಾರಿ ಪ್ರವೇಶ ಮಾಡಿರುವ ಸ್ಪರ್ಧಿಗಳ ಪೈಕಿ ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗರೆ ಮತ್ತು ದುನಿಯಾ ಚಿತ್ರದ ಮೂಲಕ ಪ್ರಸಿದ್ಧಿಯಾಗಿದ್ದ ರಶ್ಮಿ ಕೂಡ ಒಬ್ಬರು. ಇನ್ನು ದುನಿಯಾ ಬಿಡುಗಡೆಯಾದ ನಂತರ ರಶ್ಮಿ ಅವರ ಬಗ್ಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಬೆಳಗೆರೆ ಅವರು ಆರ್ಟಿಕಲ್ ವೊಂದನ್ನು ಬರೆದಿದ್ದರಂತೆ. ಹೌದು ದುನಿಯಾ ರಶ್ಮಿ ಅವರ ಫ್ಯಾಮಿಲಿ ಪ್ರಾಬ್ಲಮ್ ಬಗ್ಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಬೆಳಗೆರೆ ಆರ್ಟಿಕಲ್ ಬರೆದಿದ್ದರು ಎಂದು ಸ್ವತಃ ರಶ್ಮಿ ಅವರೇ ತಿಳಿಸಿದ್ದಾರೆ.
ಹೀಗೆ ರವಿ ಬೆಳಗೆರೆ ಅವರು ತಮ್ಮ ಬಗ್ಗೆ ಆರ್ಟಿಕಲ್ ಬರೆದಿದ್ದಕ್ಕೆ ರಶ್ಮಿ ಅವರು ರವಿ ಬೆಳಗೆರೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನು ಈ ಸಂಗತಿಯನ್ನು ರವಿ ಬೆಳಗೆರೆಯವರು ಇಷ್ಟು ವರ್ಷಗಳು ಕಳೆದರೂ ಸಹ ನೆನಪಿನಲ್ಲಿ ಇಟ್ಟುಕೊಂಡಿದ್ದನ್ನು ಕಂಡ ರಶ್ಮಿ ಅವರು ಶಾಕ್ ಆಗಿದ್ದಾರೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ರವಿ ಬೆಳೆಗೆರೆ ಅವರ ನಡವಳಿಕೆ ರಶ್ಮಿ ಅವರನ್ನು ಇಂಪ್ರೆಸ್ ಮಾಡಿದ್ದು ತುಂಬಾ ಒಳ್ಳೆಯ ವ್ಯಕ್ತಿ ಎಂಬ ಮಾತುಗಳನ್ನು ರಶ್ಮಿ ಅವರು ಆಡಿದ್ದಾರೆ.






