ರಾಜಮೌಳಿ ಎಲ್ಲಿ? ಪ್ರಶಾಂತ್ ನೀಲ್ ಎಲ್ಲಿ? ಮೌಳಿ ರೇಂಜೇ ಬೇರೆ!

0
60

ಪ್ರಶಾಂತ್ ನೀಲ್ ಉಗ್ರಂ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿರ್ದೇಶಕ. ತನ್ನ ಪ್ರತಿಭೆಯ ಮೂಲಕ ಮೊದಲ ಚಿತ್ರದಲ್ಲಿಯೇ ದೊಡ್ಡ ಮಟ್ಟದ ಹೆಸರು ಮಾಡಿದ ಪ್ರಶಾಂತ್ ನೀಲ್ ಎರಡನೇ ಚಿತ್ರಕ್ಕೆ ನೂರಾರು ಕೋಟಿ ಕಲೆಕ್ಷನ್ ಮಾಡುವಂತಹ ಸಿನಿಮಾ ಕಟ್ಟಿಕೊಟ್ಟರು. ಹೌದು ಕೆಜಿಎಫ್ ಮೂಲಕ ಪ್ರಶಾಂತ್ ನೀಲ್ ದೇಶವ್ಯಾಪಿ ಪ್ರಸಿದ್ಧರಾದರು. ಕೆಜಿಎಫ್ ಕೋಟಿ ಕೋಟಿ ಗಳಿಸುವುದು ಮಾತ್ರವಲ್ಲದೆ ಪ್ರಶಾಂತ್ ನೀಲ್ ಗೆ ದೇಶದಾದ್ಯಂತ ಮಾರ್ಕೆಟ್ ಸೃಷ್ಟಿ ಮಾಡಿತ್ತು.

 

ಸದ್ಯ ಇಡೀ ದೇಶವೇ ಕೆಜಿಎಫ್ ಎರಡನೇ ಭಾಗಕ್ಕೆ ಕಾಯುತ್ತಿದ್ದು ಪ್ರಶಾಂತ್ ನೀಲ್ ನಿರ್ದೇಶನ ಕ್ಕೆ ದೊಡ್ಡ ಮಾರ್ಕೆಟ್ ಹುಟ್ಟುಕೊಂಡಿದೆ. ಈ ಕಾರಣಕ್ಕಾಗಿಯೇ ತೆಲುಗು ಮಂದಿ ಪ್ರಶಾಂತ್ ನೀಲ್ ಅವರನ್ನು ನಮ್ಮ ಬ್ಯಾನರ್ ನಲ್ಲಿ ಚಿತ್ರ ಮಾಡಿ ನಮ್ಮ ಹೀರೋಗೆ ಚಿತ್ರ ಮಾಡಿ ಎಂದು ಸಾಲು ಸಾಲು ಬೇಡಿಕೆಗಳನ್ನು ಇಟ್ಟಿದ್ದಾರೆ. ಹೀಗಾಗಿಯೇ ಪ್ರಭಾಸ್ ಜೊತೆ ಸಲಾರ್ ಎಂಬ ಸಿನಿಮಾವನ್ನು ಪ್ರಶಾಂತ್ ನೀಲ್ ಮಾಡುತ್ತಿದ್ದಾರೆ. ಇನ್ನೂ ಸಲಾರ್ ಚಿತ್ರೀಕರಣ ಮುಗಿಯದೆ ಇರುವಾಗಲೇ ತಮ್ಮ ಮುಂದಿನ ಚಿತ್ರವನ್ನು ತೆಲುಗಿನ ಎನ್ಟಿಆರ್ ಜತೆ ಪ್ರಶಾಂತ್ ನೀಲ್ ಮಾಡುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

 

 

ಪ್ರಶಾಂತ್ ನೀಲ್ 2 ಕನ್ನಡ ಚಿತ್ರಗಳ ಬಳಿಕ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿ ಹಣಕ್ಕೋಸ್ಕರ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಕೆಜಿಎಫ್ ಚಿತ್ರ ನಿರ್ದೇಶಿಸುವ ಮುನ್ನ ನಾನೊಬ್ಬ ಕನ್ನಡ ನಿರ್ದೇಶಕ ಕನ್ನಡ ಚಿತ್ರಗಳನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದ ಪ್ರಶಾಂತ್ ನೀಲ್ ಈಗ ಅಕ್ಷರಶಃ ಉಲ್ಟಾ ಹೊಡೆದಿದ್ದಾರೆ. ಕೆಜಿಎಫ್ ಎರಡನೇ ಭಾಗದ ನಂತರ ಬೇರಾವುದೇ ಕನ್ನಡ ಚಿತ್ರವನ್ನು ಪ್ರಶಾಂತ್ ನೀಲ್ ಘೋಷಣೆ ಮಾಡಿಲ್ಲ. ಹೀಗಾಗಿಯೇ ಇವರನ್ನು ಎರಡನೇ ರಶ್ಮಿಕಾ ಮಂದಣ್ಣ ಎಂದೆಲ್ಲ ಟೀಕಿಸಲಾಗುತ್ತಿದೆ.

 

 

ಅಷ್ಟೇ ಅಲ್ಲದೆ ಪ್ರಶಾಂತ್ ನೀಲ್ ಅವರನ್ನು ರಾಜಮೌಳಿಗೆ ಹೋಲಿಸಿ ಮಾತನಾಡಲಾಗುತ್ತಿತ್ತು. ಆದರೆ ಇದೀಗ ರಾಜಮೌಳಿ ರೇಂಜೇ ಬೇರೆ ಗುರು ಅವರ ಜೊತೆ ಪ್ರಶಾಂತ್ ನೀಲ್ ಅವರನ್ನು ಹೋಲಿಸಲೇ ಬೇಡಿ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ಇದಕ್ಕೆ ಕಾರಣ ರಾಜಮೌಳಿ ಅವರಿಗೆ ತೆಲುಗು ಭಾಷೆಯ ಮೇಲಿರುವ ಭಾಷಾಭಿಮಾನ. ರಾಜಮೌಳಿ ಕರ್ನಾಟಕದವರಾದರೂ ಸಹ ಅವರ ನಿರ್ದೇಶನಕ್ಕೆ ತಕ್ಕ ಬೆಲೆಯನ್ನು ಕೊಟ್ಟಿದ್ದು ತೆಲುಗು ಚಿತ್ರರಂಗ. ಹೀಗಾಗಿಯೇ ತನ್ನನ್ನು ಗುರುತಿಸಿ ಬೆಳೆಸಿದ ತೆಲುಗು ಚಿತ್ರರಂಗವನ್ನು ಬಿಟ್ಟು ರಾಜಮೌಳಿ ಬೇರೆ ಯಾವುದೇ ಚಿತ್ರರಂಗಕ್ಕೂ ಹೋಗಿ ಬೇರೆ ಭಾಷೆಯ ನಟರಿಗೆ ಚಿತ್ರವನ್ನು ಮಾಡಲು ಮುಂದಾಗಿಲ್ಲ. ಮಗಧೀರ, ಈಗ, ಬಾಹುಬಲಿ ಭಾಗಗಳು ದೇಶವ್ಯಾಪಿ ಅತಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದವು.

 

ನಿಜ ಹೇಳಬೇಕೆಂದರೆ ದಕ್ಷಿಣ ಭಾರತದ ಪ್ರಸ್ತುತ ತಲೆಮಾರಿನ ಯಾವ ನಿರ್ದೇಶಕನೂ ಸಹ ಇದುವರೆಗೂ ರಾಜಮೌಳಿ ನೋಡದೆ ಇರುವಂತಹ ಸಕ್ಸಸ್ ನೋಡಿಲ್ಲ. ರಾಜಮೌಳಿ ಸಿನಿಮಾಗಳು ಮಾಡಿರುವಂತಹ ಕಲೆಕ್ಷನ್ ಅನ್ನು ಯಾವ ಚಿತ್ರಗಳಿಗೂ ಸಹ ಮುರಿಯಲಾಗಿಲ್ಲ. ಇಷ್ಟೆಲ್ಲಾ ಸಾಧನೆ ಮಾಡಿರುವ ರಾಜಮೌಳಿಯವರಿಗೆ ಹಿಂದಿಯಿಂದ ಸಾಕಷ್ಟು ಆಫರ್ ಗಳು ಬಂದರೂ ಸಹ ಅವರು ತೆಲುಗು ಚಿತ್ರವನ್ನೇ ಮಾಡುತ್ತಿದ್ದಾರೆ. ನನ್ನನ್ನು ಬೆಳೆಸಿದ್ದು ತೆಲುಗು ಚಿತ್ರರಂಗ ಹೀಗಾಗಿ ನಾನು ತೆಲುಗು ಚಿತ್ರರಂಗಕ್ಕಾಗಿ ದುಡಿಯುತ್ತೇನೆ ತೆಲುಗು ನಟರನ್ನೇ ಬೆಳೆಸುತ್ತೇನೆ ಎಂದು ಪಣ ತೊಟ್ಟಿರುವ ರಾಜಮೌಳಿಯವರು ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ.

 

 

ಆದರೆ ಕೆಜಿಎಫ್ ಮೂಲಕ ದೇಶದಾದ್ಯಂತ ಹೆಸರು ಮಾಡಿಕೊಂಡಿರುವ ಪ್ರಶಾಂತ್ ನೀಲ್ ಹಾಗಲ್ಲ, ಒಂದೇ ಒಂದು ಚಿತ್ರ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡ ಕೂಡಲೇ ತಮಗೆ ದೊಡ್ಡ ಮಟ್ಟದ ಮಾರ್ಕೆಟ್ ಸೃಷ್ಟಿಯಾದ ಕೂಡಲೇ ತನ್ನನ್ನು ಗುರುತಿಸಿ ಬೆಳೆಸಿದ ಕನ್ನಡ ಚಿತ್ರರಂಗವನ್ನು ಬಿಟ್ಟು ತೆಲುಗು ಚಿತ್ರರಂಗಕ್ಕೆ ಹಾರಿ ಬಿಟ್ಟಿದ್ದಾರೆ. ರಾಜಮೌಳಿ ಹೇಗೆ ತೆಲುಗು ಚಿತ್ರದಲ್ಲಿ ಗುರುತಿಸಲ್ಪಟ್ಟು ತೆಲುಗು ಹೀರೋಗಳನ್ನು ಬೆಳೆಸಿದರು ಆ ರೀತಿ ಕನ್ನಡ ಚಿತ್ರರಂಗದಲ್ಲಿ ಹುಟ್ಟಿದ ಪ್ರಶಾಂತ್ ನೀಲ್ ಮಾತ್ರ ಕನ್ನಡದ ಹೀರೋಗಳನ್ನು ಬೆಳೆಸುವ ಕಾರ್ಯಕ್ಕೆ ಕೈ ಹಾಕುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕಾರಣಕ್ಕೂ ಪ್ರಶಾಂತ್ ನೀಲ್ ಅವರನ್ನು ರಾಜಮೌಳಿಯವರಿಗೆ ಹೋಲಿಸಬೇಡಿ ರಾಜಮೌಳಿಯವರಿಗೆ ತನ್ನನ್ನು ಬೆಳೆಸಿದ ಚಿತ್ರರಂಗ ಮತ್ತು ನಟರ ಮೇಲೆ ಅಪಾರ ಗೌರವವಿದೆ ಆದರೆ ಪ್ರಶಾಂತ್ ನೀಲ್ ಅವರಿಗೆ ಆ ಮನೋಭಾವನೆ ಇಲ್ಲವೇ ಇಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

 

 

LEAVE A REPLY

Please enter your comment!
Please enter your name here