ಸಕಲೇಶಪುರದ ದೋಣಿಗಲ್ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಸಂಜೆಯೇ ವಾಹನ ಸಂಚಾರ ಬಂದ್ ಆಗಿದ್ಧು . ಹಾಸನ ಜಿಲ್ಲಾಡಳಿತವು ಈ ಮಾರ್ಗದಲ್ಲಿ ಆ.12ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಚಾರ್ಮಾಡಿ ಘಾಟ್‌ನಲ್ಲೂ ಪದೇ ಪದೆ ಭೂಕುಸಿತ ಸಂಭವಿಸುತಿದೆ ಹಾಗಾಗಿ ಅಲ್ಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರಕ್ಕೆ ನಿಷೇಧಿಸಿದೇ . ಇನ್ನು ಕೊಡಗಿನ ಮೂಲಕ ಬೆಂಗಳೂರು ತಲುಪಲು ಇದ್ದ ಏಕೈಕ ಪ್ರಮುಖ ರಸ್ತೆಯಾದ ಮೈಸೂರು ರಸ್ತೆ ಹಾದು ಹೋಗುವ ಪಿರಿಯಾಪಟ್ಟಣ- ಕುಶಾಲನಗರ ಸಮೀಪ ಕಾವೇರಿ ನದಿ ಮೂರು ಅಡಿ ಎತ್ತರಕ್ಕೆ ಹರಿಯುತ್ತಿದ್ದು, ಈ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.