ಬಾಲಿವುಡ್ ಬ್ಯಾಡ್ ಸಲ್ಮಾನ್ ಖಾನ್ ನಟನೆಯ ಬಹುಕೋಟಿ ವೆಚ್ಚದ ರಾಧೆ: ಯುವರ್ ಮೋಸ್ಟ್ ವಾಟೆಂಡ್ ಭಾಯ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಪ್ರಭುದೇವ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ನಡುವೆ ಸಿನಿಮಾ ಪೈರಸಿಯಾಗಿ ಸಾಕಷ್ಟು ಜನರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಪೈರಸಿ ವಿರುದ್ಧ ಹೋರಾಟ ನಡೆಸುತ್ತಿದ್ದ ಸಲ್ಲು ಈಗ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದ ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ವಿಮರ್ಶಕ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಾನಹಾನಿ ನೋಟೀಸ್ ಹಂಚಿಕೊಂಡಿರುವ ಕಮಾಲ್, ನಾನು ನನ್ನ ಫಾಲೋವರ್ಸ್ ಗೆ ವಿಮರ್ಶೆ ಮಾಡಿದ್ದೀನಿ ಮತ್ತು ಅದು ನನ್ನ ಕೆಲಸ. ನೀವು ನನ್ನನ್ನು ನಿಯಂತ್ರಿಸುವುದಕ್ಕಿಂತ ಉತ್ತಮ ಸಿನಿಮಾ ಮಾಡಿ’ ಎಂದಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ ಇನ್ಮುಂದೆ ಸಲ್ಮಾನ್ ಖಾನ್ ಸಿನಿಮಾದ ವಿಮರ್ಶೆ ಮಾಡುವುದಿಲ್ಲ ಎಂದಿದ್ದಾರೆ. ‘ನಾನು ಅನೇಕ ಬಾರಿ ಹೇಳಿದ್ದೇನೆಂದರೆ ಯಾವುದ್ ನಿರ್ಮಾಪಕ, ನಟನ ಚಿತ್ರಗಳನ್ನು ವಿಮರ್ಶೆ ಮಾಡಬೇಡಿ ಎಂದು ಕೇಳಿದರೆ ನಾನು ಅದನ್ನು ಮಾಡುವುದಿಲ್ಲ. ಸಲ್ಮಾನ್ ಖಾನ್ ಅವರ ರಾಧೆ ಸಿನಿಮಾ ವಿಮರ್ಶೆಗಾಗಿ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದರೆ ನನ್ನ ವಿಮರ್ಶೆ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನಾನು ಅವರ ಸಿನಿಮಾ ವಿಮರ್ಶೆ ಮಾಡುವುದಿಲ್ಲ. ಇದು ನನ್ನ ಕೊನೆಯ ವಿಡಿಯೋ’ ಎಂದಿದ್ದಾರೆ.