‘ರೇಣುಕಾಚಾರ್ಯ ಲೆವೆಲ್ ಬೇರೆ, ನನ್ನ ಲೆವೆಲ್ಲೇ ಬೇರೆ’ ಎಂದ್ರು ಎಂ,ಬಿ ಪಾಟೀಲ್ ! ಯಾಕೆ ಗೊತ್ತಾ ?!

Date:

ರೇಣುಕಾಚಾರ್ಯ ಲೆವೆಲ್ ಬೇರೆ, ನನ್ನ ಲೆವೆಲ್ ಬೇರೆ. ಹೀಗಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಂ.ಬಿ.ಪಾಟೀಲ್ ಓರ್ವ ಭ್ರಷ್ಟ ಎಂದು ರೇಣುಕಾಚಾರ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.ನಾನು ನನ್ನ ಲೆವೆಲ್‍ನಲ್ಲಿ ಇದ್ದವರೊಂದಿಗೆ ಪ್ರತಿಕ್ರಿಯಿಸುತ್ತೇವೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಗೆಲುವ ನಿಶ್ಚಿತವೆಂದು ಹೇಳಿದರು.

ಸಿಎಂ ಚರ್ಚೆ ಅಗತ್ಯವಿಲ್ಲ ಪರಮೇಶ್ವರ್  ಮುಖ್ಯಮಂತ್ರಿ ಸ್ಥಾನದಲ್ಲಿ ಈಗಾಗಲೇ ಕುಮಾರಸ್ವಾಮಿ ಇದ್ದಾರೆ.ಹೀಗಾಗಿ ಈ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಖ್ಯಮಂತ್ರಿಯಾಗಲು ಎಚ್.ಡಿ.ರೇವಣ್ಣನವರೂ ಅರ್ಹರಿದ್ದಾರೆ ಎಂಬ ಸಿದ್ದರಾಮಯ್ಯನವರ ಟ್ವೀಟ್‍ಗೆ ಅವರು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯನವರು ಎಚ್.ಡಿ.ರೇವಣ್ಣ ಇಬ್ಬರೂ ಆತ್ಮೀಯರು. ಯಾವ ಅರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲವೆಂದರು. ಬಿಎಸ್ ಯಡಿಯೂರಪ್ಪನವರು ನೂರು ಬಾರಿ ಜಪಿಸಿದರೂ ಮುಖ್ಯಮಂತ್ರಿಯಾಗಲ್ಲ. ಅವರದು ಹಗಲುಗನಸು ಎಂದರು.

Share post:

Subscribe

spot_imgspot_img

Popular

More like this
Related

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...