ಬೆಂಗಳೂರು ರೇಸ್ ಕೋರ್ಸ್ ಸಂಸ್ಥೆಯನ್ನು ತೆರವುಗೊಳಿಸುವ ಕುರಿತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರು ನೀಡಿದ್ದ ವರದಿಗೆ ಸಂಬಂಧಿಸಿದಂತೆ ವಿಧಾನ ಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಇಂದಿನ ತನ್ನ ಸಭೆಯಲ್ಲಿ ಪರಿಶೀಲನೆಗೆ ಕೈಗೆತ್ತಿಕೊಂಡಿದೆ.

ಇಂಟ್ರೆಶ್ಟಿಂಗ್ ಸಂಗತಿಯೆಂದರೆ ರೇಸ್ ಕೋರ್ಸ್ ಗೆ ಮೊದಲೇ ಅತ್ಯಂತ ಕಡಿಮೆ ಬಾಡಿಗೆ ಇತ್ತು ಅದನ್ನೂ ಸಹ ಸರಿಯಾಗಿ ಕೊಟ್ಟಿಲ್ಲ ಎನ್ನಲಾಗುತ್ತಿದೆ ಅಲ್ಲದೇ 2009 ರಲ್ಲೇ ಲೀಸ್ ಅವಧಿ ಮುಗಿದಿರುವುದನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ವಿಧಾನ ಸಭೆಯ ಅತ್ಯಂತ ಪ್ರಮುಖ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ಅಡಿಟ್ ಆಕ್ಷೇಪಗಳನ್ನು ಪರಿಶೀಲಿಸಿ ಸುಧಾರಣಾತ್ಮಕ ಶಿಫಾರಸ್ಸುಗಳನ್ನು ಮಾಡುವ ಮತ್ತು ಶಿಫಾರಸ್ಸುಗಳ ಅನುಷ್ಠಾನವನ್ನು ಅನುಸರಣೆ ಮಾಡುವ ಗುರುತರವಾದ ಜವಾಬ್ದಾರಿಯನ್ನು ಹೊಂದಿದೆ.ಎಂದು ಹೇಳಲಾಗುತ್ತಿದೆ.






