ರೋರಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಉಗ್ರಂವೀರಂ ಅವತಾರದ ಅನಾವರಣ..!!
ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಉಗ್ರಂ ಬಳಿಕ ಕನ್ನಡ ಚಿತ್ರರಂಗದ ಮೋಸ್ಟ್ ಪ್ರೊಮಿಸಿಗ್ ನಟನಾಗಿ ಬೆಳೆದ ಈ ನಟ ಈಗ ಮೋಸ್ಟ್ ಬ್ಯಾಕ್ ಬಲ್ ನಾಯಕ..
ಮಾಸ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸುವಲ್ಲಿ ಬ್ಯೂಸಿಯಾಗಿರುವ ಶ್ರೀಮುರುಳಿ ಸದ್ಯ ಭರಾಟೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.. ಇಂದು ಸಂಜೆ ಭರಾಟೆ ಹಾಗೆ ಇವರ ಮುಂದಿನ ಸಿನಿಮಾ ಮದಗಜ ಟೈಟಲ್ ಲಾಂಚ್ ಸಹ ಆಗಲಿದೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುರುಳಿಗೆ ಸಾಥ್ ನೀಡಲ್ಲಿದ್ದು ಟೈಟಲ್ ಲಾಂಚ್ ಮಾಡಲ್ಲಿದ್ದಾರೆ..ಈ ನಡುವೆ ಈ ಎರಡು ಸಿನಿಮಾಗಳನ್ನ ಪಕ್ಕಕ್ಕಿಟ್ಟು ನೋಡಿದ್ರೆ, ಈ ಮದಗಜನ ಹೆಸರಿನಲ್ಲಿ ಸಿದ್ದವಾಗೋ ಹೊರಟಿದೆ ಕನ್ನಡದ ಪ್ರತಿಷ್ಠಿತ ಚಿತ್ರ.. ಅದೇ ಉಗ್ರಂ ವೀರಂ.. ಪ್ರಶಾಂತ್ ನೀಲ್ ಹಾಗೆ ಶ್ರೀಮುರುಳಿ ಕಾಂಬಿನೇಷನ್ನಲ್ಲಿ ಉಗ್ರಂ ಚಿತ್ರವಾದ ಬಳಿಕ ಸಿದ್ದವಾಗಬೇಕಿರುವ ಚಿತ್ರವಿದು.. ಕನ್ನಡದ ಹೈ ಬಜೆಟ್ ನ ಈ ಸಿನಿಮಾಗೆ ಶ್ರೀಸ್ವರ್ಣಲತಾ ಪ್ರೊಡೆಕ್ಷನ್ಸ್ ಅಡಿ ಕೃಷ್ಣ ಚೈತನ್ಯ ಅವರು ನಿರ್ಮಾಣ ಮಾಡಲ್ಲಿದ್ದಾರೆ.. ಸದ್ಯ ಬಿಡುಗಡೆಗೊಂಡಿರುವ ಫಸ್ಟ್ ಲುಕ್ ಪೋಸ್ಟರ್ ಸಿನಿಮಾದ ಖದರ್ ನ ಎತ್ತಿ ತೋರಿಸುತ್ತಿದೆ..
ರೋರಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಉಗ್ರಂವೀರಂ ಅವತಾರದ ಅನಾವರಣ..!!
Date: