ರೋಹಿತ್ ದ್ವಿಶತಕ ಬಾರಿಸುವುದು ಪಕ್ಕಾ ಎಂದ ಪಾಕ್ ಕ್ರಿಕೆಟಿಗ

Date:

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು ಯಾವ ತಂಡ ಜಯ ಸಾಧಿಸಲಿದೆ ಎಂಬುದರ ಕುರಿತು ದೊಡ್ಡ ಮಟ್ಟದ ಚರ್ಚೆಗಳಾಗುತ್ತಿವೆ.


ಈ ವೇಳೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಜೂನ್ 18ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಭವಿಷ್ಯವನ್ನು ನುಡಿದಿದ್ದು ರೋಹಿತ್ ಶರ್ಮಾ ದ್ವಿಶತಕ ಸಿಡಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪರ ಆರಂಭಿಕ ಆಟಗಾರರಾಗಿ ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯಬೇಕೆಂದು ರಮೀಜ್ ರಾಜಾ ಹೇಳಿದ್ದಾರೆ. ‘ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರೆ, ಭಾರತ ತಂಡಕ್ಕೆ ಹೆಚ್ಚಿನ ಕಷ್ಟ ಮತ್ತು ಒತ್ತಡವಿರುವುದಿಲ್ಲ. ಈ ಇಬ್ಬರು ಆಟಗಾರರು ಆರಂಭವನ್ನು ಮಾಡಿದರೆ ಟೀಮ್ ಇಂಡಿಯಾ ಉತ್ತಮ ಮೊತ್ತವನ್ನು ದಾಖಲಿಸಿದ್ದು, ಒಂದುವೇಳೆ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿದರೆ ದ್ವಿಶತಕ ಬಾರಿಸುವುದು ಖಚಿತ’ ಎಂದು ರಮೀಜ್ ರಾಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...