No menu items!
11.1 C
Munich
Wednesday, April 29, 2026

ಯಾರು ಗೊತ್ತಾ ಡೇವಿಡ್ ಮಿಲ್ಲರ್ ನೆಚ್ಚಿನ ಕ್ರಿಕೆಟಿಗ?

Must read

ಡೇವಿಡ್ ಮಿಲ್ಲರ್ ಪ್ರಸ್ತುತ ಕ್ರಿಕೆಟ್ ಜಗತ್ತಿನ ಸ್ಫೋಟಕ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಮಿಲ್ಲರ್ ಮೈದಾನದಲ್ಲಿ ಇರುವವರೆಗೂ ಯಾವುದೇ ಕ್ಷಣದಲ್ಲಿ ಬೇಕಾದರೂ ಪಂದ್ಯದ ದಿಕ್ಕನ್ನು ಬದಲಿಸಬಲ್ಲರು. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅತ್ಯಂತ ಅಪಾಯಕಾರಿ ಆಟವನ್ನಾಡುವ ಡೇವಿಡ್ ಮಿಲ್ಲರ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಉತ್ತಮ ಆಟವನ್ನಾಡಿದರು.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿರುವ ಡೇವಿಡ್ ಮಿಲ್ಲರ್ 102 ರನ್ ಬಾರಿಸಿದ್ದಾರೆ. ಸೀಮಿತ ಓವರ್ ಪಂದ್ಯಗಳಲ್ಲಿ ಅತಿ ಹೆಚ್ಚಾಗಿ ಮಿಂಚಿರುವ ಡೇವಿಡ್ ಮಿಲ್ಲರ್ ಇತ್ತೀಚಿಗಷ್ಟೆ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ ಯಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಹೌದು ಟ್ವಿಟರ್‌ನಲ್ಲಿ #AskMiller ಎಂಬ ಟ್ಯಾಗ್‌ನ ಅಡಿಯಲ್ಲಿ ಡೇವಿಡ್ ಮಿಲ್ಲರ್ ತಮ್ಮ ಅನುಯಾಯಿಗಳ ಜೊತೆ ಸಂವಾದವನ್ನು ನಡೆಸಿದರು. ಈ ವೇಳೆ ಸಾಲು ಸಾಲು ಪ್ರಶ್ನೆಗಳನ್ನು ಕ್ರೀಡಾಭಿಮಾನಿಗಳು ಕೇಳಿದರು. ಹೀಗೆ ನೆಟ್ಟಿಗನೊಬ್ಬ ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ನಿಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾನೆ. ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ಮಿಲ್ಲರ್ ವಿರಾಟ್ ಕೊಹ್ಲಿ ಅಲ್ಲದೆ ಮತ್ಯಾರು ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ಡೇವಿಡ್ ಮಿಲ್ಲರ್ ಪ್ರಸ್ತುತ ಕ್ರಿಕೆಟ್ ಯುಗದಲ್ಲಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ ಎಂದು ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article