ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

0
1174

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ನಿಜವಾದ ಸಂತೋಷ, ಸುಖ, ನೆಮ್ಮದಿ ಎಲ್ಲಿ..? ಯಾವಾಗ..? ಸಿಗುತ್ತೆ..! ಸಂತಸ, ಸುಖ, ನೆಮ್ಮದಿಯ ಬದುಕು ಅಂದ್ರೆ ಯಾವುದು..?! ಲಕ್ಷಗಟ್ಟಲೆ ಸಂಬಳವನ್ನು ಪಡೆಯುವ ಕೆಲಸದಲ್ಲಿ ಅವುಗಳೆಲ್ಲಾ ಇವೆಯಾ..?! ವಿದೇಶದಲ್ಲಿ ನೌಕರಿಗಿಟ್ಟಿಸಿಕೊಂಡರೆ ಆರಾಮಾಗಿ ಇರ್ತೀವಾ..?! ಈ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರಗಳನ್ನು ಕೊಡ ಬಹುದು..! ಆದರೆ, ವಿದೇಶದಲ್ಲಿನ ಕೆಲಸ, ಒಳ್ಳೆಯ ಸಂಬಳವನ್ನೆಲ್ಲಾ ಬಿಟ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡ ಕೆಲವರು ಎಲ್ಲರಿಗೂ ಮಾದರಿಯಾಗಿ ನಿಲ್ತಾರೆ..! ಅಂತಹ ಕೆಲವರ ಬಗ್ಗೆ ಹೇಳ್ತಾ ಹೋಗ್ತೀನಿ..ಹಾಗೆ ಕೇಳಿ..!

1. `ಶುವಜಿತ್ ಪೇನ್’ :

ML_1

ಇವರು ಕೋಲ್ಕತ್ತ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪೂರೈಸಿದವರು..! ನಂತರ ಲಕ್ನೋದ ಐಐಎಂನಲ್ಲಿ ಫೈನೆನ್ಸ್ ಅಂಡ್ ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ ಪದವಿಯನ್ನು ಮುಗಿಸ್ತಾರೆ..! ನಂತರ ಲಂಡನ್ನಲ್ಲಿ ಕೆಲಸವನ್ನೂ ಗಿಟ್ಟಿಸಿಕೊಳ್ತಾರೆ..! ಇಷ್ಟೆಲ್ಲಾ ಆದ ಮೇಲೆ ಇವರಿಗೆ ನಾನು ಈ ಕ್ಷೇತ್ರದಲ್ಲಿ ಇಷ್ಟೊಂದು ಮಾಡಿರೋದು ಸಾಕು. ಇಷ್ಟಲ್ಲಾ ವಿದ್ಯಾಭ್ಯಾಸ, ಕೆಲಸಕ್ಕೆ ಬೆಲೆಬರಬೇಕಾದರೆ ನಾನೇನದರೂ ಒಳ್ಳೆಯ ಕೆಲಸವನ್ನು ಮಾಡಿದರೆ ಮಾತ್ರ ಇವೆಲ್ಲದಕ್ಕೂ ಬೆಲೆ ಬರೋದು ಅಂತ ಅಂದುಕೊಳ್ತಾರೆ..! `ಸ್ವಾವಲಂಭಿ ಗ್ರಾಮೀಣ ಭಾರತ’ ಇವರ ಕನಸಾಗಿದೆ..! ಅದಕ್ಕಾಗಿಯೇ ಲಂಡನ್ನಲ್ಲಿನ ಕೆಲಸವನ್ನು ಬಿಟ್ಟು ಭಾರತಕ್ಕೆ ಬಂದ ಇವರು ರೈತರ ಕಲ್ಯಾಣಕ್ಕಾಗಿ ಶ್ರಮಿಸ್ತಾ ಇದ್ದಾರೆ..! ಹಳ್ಳಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ…! ಶಿಕ್ಷಿತರನ್ನಾಗಿ ಮಾಡಿದಾಗ ರೈತರು ತಮ್ಮ ಪಾಲನ್ನು ನ್ಯಾಯೋಚಿತವಾಗಿ ಪಡೆಯುವಂತಾಗುತ್ತದೆಂದು ರೈತರ ಕಲ್ಯಾಣಕ್ಕಾಗಿ ಇಂಗ್ಲೆಂಡಿನಿಂದ ಬಂದಿದ್ದಾರೆ..!

2. ಅಭಿಷೇಕ್ ಸಿಂಘಾನಿಯಾ :

ML_2
ಮದ್ರಾಸಿನ ಇವರು ಲಾಭದಾಯಕ ಎಂಎನ್ಸಿಯಲ್ಲಿನ ಒಳ್ಳೆಯ ಕೆಲಸವನ್ನು ಬಿಟ್ಟು ಹಳ್ಳಿಗಳಲ್ಲಿ ಆಹಾರ ಭದ್ರತೆಗಾಗಿ ಕೆಲಸ ಮಾಡ್ತಾ ಇದ್ದಾರೆ..! ಪ್ರಸ್ತುತ ಖರಗ್ ಪುರ ಐಐಟಿಯಲ್ಲಿ ಆಹಾರ ಸಂರಕ್ಷಣೆ ಬಗ್ಗೆ ವಿಶ್ಲೇಷಕರಾಗಿ ಕೆಲಸ ಮಾಡ್ತಾ ಇದ್ದಾರೆ..!

3 ಪ್ರತಿಭಾ ಕೃಷ್ಣಯ್ಯ :

ML_3
ಥ್ಯಾಮ್ಸನ್ ರಾಯಿಟರ್ಸ್ ನಲ್ಲಿ ಸಿಕ್ಕ ಉದ್ಯೋಗವನ್ನು ಬಿಟ್ಟು, ಗ್ರಾಮೀಣ ಮಹಿಳೆಯರ ಸುಧಾರಣೆಗೆ ಮುಂದಾಗಿದ್ದಾರೆ..! “ಜೀವನದಲ್ಲಿ ಹಣವೇ ಮುಖ್ಯವಲ್ಲ. ನನ್ನ ಜಾಬ್ ಪ್ರೊಫೆಲ್ ಉತ್ತಮವಾಗಿತ್ತು..! ಆದರೂ ನನಗೆ ಹಳ್ಳಿ ಪ್ರದೇಶದಲ್ಲಿ ಕೆಲಸ ಮಾಡಬೇಕೆಂಬ ಆಸೆಯಾಯಿತು ಅದಕ್ಕಾಗಿ ಆ ಕೆಲಸವನ್ನು ಬಿಟ್ಟು ಇದನ್ನು ಆಯ್ಕೆ ಮಾಡಿಕೊಂಡೆನೆಂದು ಹೇಳ್ತಾರೆ..’!
ಆರಂಭದಲ್ಲಿ ಇವರಿಗೆ ನಗರ ಜೀವನಕ್ಕೆ ಹೋಲಿಸಿ ಕೊಂಡರೆ ಬೆಟ್ಟಗುಡ್ಡಗಳ ಕೊಂಪೆಯಲ್ಲಿ ವಾಸ ಮಾಡೋದು ಕಷ್ಟವೆಂದೆನಿಸಿತು..! ನಂತರದಲ್ಲಿ ಈ ಜೀವನಕ್ಕೆ ಹೊಂದಿಕೊಂಡಿದ್ದಾರೆ..! ಈಗ ನಿತ್ಯ 4.30 ಗೆ ಎದ್ದು ಬೆಟ್ಟವನ್ನತ್ತಿ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಭೇಟಿ ಆಗ್ತಾರೆ..! ಕೇಥಿಕನ್, ತಪ್ನಿ ಪಾಲ್, ದಾಟ್ ಹಳ್ಳಿಗಳಲ್ಲಿ ಮಹಿಳೆಯರಿಗೆ ದುಡಿಮೆ, ಉತ್ಪಾದನೆ ಬಗ್ಗೆ ಹೇಳ್ತಾರೆ..! ಕುಟುಂಬ ನಿರ್ವಹಣೆಗಾಗಿ, ಜೀವನ ಸಾಗಿಸೋ ಸಲುವಾಗಿ ಹತ್ತಿರದ ಪಟ್ಟಣಗಳಿಗೆ ಹೋಗಿ ದುಡಿಯೋದು ಹೆಂಗಂತ ಹೇಳಿಕೊಡ್ತಾರೆ..! ಸಲಹೆ ನೀಡ್ತಾರೆ..!

4. ವಿಶಾಲ್ ತಲ್ರೇಜ :

ML_4
ಬ್ಯಾಂಕರ್ ಆಗಿದ್ದ ಇವರು ಕೆಲಸವನ್ನು ಬಿಟ್ಟು ಸ್ವಯಂಸೇವಕರ ಜಾಲವನ್ನು ರಚಿಸಿಕೊಂಡು ಆ ಮೂಲಕ ದುರ್ಬಲ ಮಕ್ಕಳೂ ಸಾಮಾನ್ಯ ಮಕ್ಕಳಂತೆ ಬದುಕಲು ನೆರವಾಗ್ತಾ ಇದ್ದಾರೆ..! “ಡ್ರೀಮ್ ಎ ಡ್ರೀಮ್” ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಹೆಚ್ಐವಿ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ನರಳುತ್ತಿರೋ ಮಕ್ಕಳಿಗೋಸ್ಕರ ಹಣ ಸಂಗ್ರಹಿಸಿ, ಆ ಹಣವನ್ನು ಆ ಮಕ್ಕಳಿಗಾಗಿ ಬಳಸಿ ಅವರು ಸಾಮಾನ್ಯ ಮಕ್ಕಳಂತೆ ಜೀವನ ಸಾಗಿಸಲು ನೆರವಾಗ್ತಾ ಇದ್ದಾರೆ..!

5. ಶಾಲಿನಿ ಕೃಷ್ಣನ್ :

ML_5
ಕಾರ್ಪೋರೇಟ್ ಸಂಸ್ಥೆಯೊಂದರಲ್ಲಿ ಲಾಭದಾಯಕ ಕೆಲಸವನ್ನು ಬಿಟ್ಟು ಸಮಾಜ ಸೇವೆ ಮಾಡ್ತಾ ಇದ್ದಾರೆ..! ಒಮ್ಮೆ ಇವರು ಒರಿಸ್ಸಾದ ಹಳ್ಳಿಯೊಂದಕ್ಕೆ ಭೇಟಿಕೊಟ್ಟಾಗ ಅಲ್ಲಿನ ಮಕ್ಕಳಲ್ಲಿನ ಕಲಾತ್ಮಕತೆ, ಸೃಜನ ಶೀಲತೆಯನ್ನು ಕಂಡು ಬೆರಗಾದರು..! ಈ ಮಕ್ಕಳ ಪ್ರತಿಭೆ ಗುರುತಿಸಲು ಒಳ್ಳೆಯ ವೇದಿಕೆ ಸಿಕ್ತಾ ಇಲ್ಲ ಅನ್ನೋದನ್ನು ಮನಗಂಡ ಇವರು ಡಿಸೈನ್ ಸ್ಟೂಡಿಯೋವನ್ನು ತೆರೆದಿದ್ದಾರೆ..! ಇಂದು ಸುಮಾರು 20 ಬುಡಕಟ್ಟು ಜನಾಂಗದ ಮಕ್ಕಳಿಗೆ ವಿವಿಧ ವಿನ್ಯಾಸಗಳನ್ನು ಹೇಳಿಕೊಡ್ತಾ ಇದ್ದಾರೆ..! ಇವರೊಡನೆ ಇಬ್ಬರು ಶಿಕ್ಷಕರನ್ನೂ ಮಕ್ಕಳಿಗಾಗಿ ಇಟ್ಕೊಂಡಿದ್ದಾರೆ..!

6. ನೂಪುರ್ ಗೌಲಾನಿ :

ML_6
ಬಿಕಾಂ ಮುಗಿಸಿದ ಇವರು ಸಿಎ ಮಾಡೋಕೆ ಹೋಗ್ತಾರೆ. ಮೊದಲ ಹಂತದಲ್ಲಿ ಯಶಸ್ಸನ್ನು ಕಂಡು ಕಂಪನಿಯೊಂದರಲ್ಲಿ ಇಂಟರ್ನ್ ಶಿಪ್ ಮಾಡೋಕು ಅವಕಾಶ ಪಡೆಯುತ್ತಾರೆ. ಆದರೆ ಅವರ ಹೃದಯದಲ್ಲಿ ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿ ವಿಚಾರಗಳು ಮನೆ ಮಾಡಿದ್ದವು..! ನೂಪುರ ರಾಜಸ್ಥಾನದ ಹಳ್ಳಿಯೊಂದರಲ್ಲಿ ಕಟ್ಟಿಗೆ ಒಟ್ಟಾಗ್ತಾ ಇರೋದನ್ನು ನೋಡ್ತಾರೆ..! ಇದು ಪರಿಸರಕ್ಕೆ ತೊಂದರೆ.. ಅರಣ್ಯನಾಶವೂ ಆಗುತ್ತೆ, ಜೊತೆಗೆ ಮಾಲಿನ್ಯವೂ ಹೆಚ್ಚಾಗುತ್ತೆ ಅಂತ ಯೋಚನೆ ಮಾಡಿದ ಇವರು ಪರ್ಯಾಯ ಇಂಧನವನ್ನು ಕಂಡುಕೊಳ್ಳಬೇಕೆಂದು ತೀರ್ಮಾನಿಸ್ತಾರೆ..! ನಂತರ ಬೇರೆ ಬೇರೆ ಜನರನ್ನು ವಿಚಾರಿಸಿ, ಪುಸ್ತಕಗಳನ್ನು ಓದಿ. ಕಟ್ಟಿಗೆ ಬದಲಿಗೆ “ಒಣ ಎಲೆ” ಬಳಕೆ ಮಾಡುವಂತೆ ತೋರಿಸಿಕೊಟ್ಟರು.. ! ಇಂಥಹದ್ದೇ ಪರಿಸರವ ಸ್ನೇಹಿ ಆಲೋಚನೆಗಳನ್ನು ಮಾಡ್ತಾ ಇದ್ದಾರೆ..! ಹಳ್ಳಿ ಮನೆಗಳಿಗಾಗಿ ಪರಿಸರ ಸ್ನೇಹಿ ಇಂಧನ ಅಭಿವೃದ್ಧಿ ಮಾಡೋದೇ ಇವರ ಕಾಯಕವಾಗಿಬಿಟ್ಟಿದೆ..!

7. ಮಕ್ಕಳಿಗಾಗಿ ಗ್ರಂಥಾಲಯ ನಿರ್ಮಿಸಿರೋ ದಂಪತಿ :

ML_7

ಬೆಂಗಳೂರಿನ ಉಮೇಶ್ ಮತ್ತು ವಿಮಲಾ ಮಲಹೋತ್ರ ಐಟಿ ಹಿನ್ನೆಲೆಯಿಂದ ಬಂದವರು..! ವಿದೇಶದಲ್ಲಿನ ಗ್ರಂಥಾಲಯ ಸಂಸ್ಕೃತಿಯನ್ನು ಕಂಡು ಪ್ರೇರಿತರಾದರು..! ಆ ಪ್ರೇರಣೆಯಿಂದ ಹುಟ್ಟಿಕೊಂಡಿದ್ದೇ `ಹಿಪ್ಪೊಕ್ಯಾಂಪಸ್’..! ಹಿಪ್ಪೋ ಕ್ಯಾಂಪಸ್ ಒಂದು ಗ್ರಂಥಾಲಯ + ಮಕ್ಕಳ ಸ್ನೇಹಿ ಸ್ಥಳ ಕೂಡ..! ಇದು ಕೋರಮಂಗಲದಲ್ಲಿದೆ..! ಅನಾಥ ಮಕ್ಕಳೂ ಕೂಡ ಇದರ ಲಾಭ ಪಡೆದು ಕೊಳ್ತಾ ಇದ್ದಾರೆ..!

8. ಅನಿರುದ್ಧ್ ಪ್ರಸಾದ್ :

ML_8
ಇವರೊಬ್ಬ ಇಂಜಿನಿಯರ್.. ತಮ್ಮ ಕೆಲಸವನ್ನು ಬಿಟ್ಟು ತಮಿಳುನಾಡಿನ ಗ್ರಾಮೀಣ ರೈತರ ಬೆಂಬಲಕ್ಕೆ ಬಂದವರು..!
ಹೀಗೆ ನಾನಾ ಕ್ಷೇತ್ರದ ಒಳ್ಳೊಳ್ಳೆ ಕೆಲಸಗಳನ್ನು ಬಿಟ್ಟು ಸಮಾಜಮುಖಿ ಆಲೋಚನೆಗಳೊಂದಿಗೆ ಕೆಲಸ ಮಾಡುತ್ತಿರೋ ಇನ್ನೂ ಅನೇಕರಿದ್ದಾರೆ..! ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡ್ತಾ ಇರೋ ಇವರೆಲ್ಲಾ ನಮಗೆ ಮಾದರಿಯಲ್ಲವೇ..?!

LEAVE A REPLY

Please enter your comment!
Please enter your name here