‘ವಿಕ್ರಾಂತ್ ರೋಣ’ನ ಮೊದಲ ರಿವ್ಯೂ!

Date:

ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ‘ವಿಕ್ರಾಂತ್ ರೋಣ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿವೆ. ಈಗಾಗಲೇ ದುಬೈನ ಬುರ್ಜ್ ಖಲೀಫಾದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ರಿಲೀಸ್ ಆಗಿ ವಿದೇಶದಲ್ಲಿ ಕೂಡ ಸೌಂಡ್ ಮಾಡಿತ್ತು. ಈಗ ಈ ಚಿತ್ರವನ್ನು ನೋಡಿರುವ ರವಿಶಂಕರ್ ಗೌಡ, ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟ್‌ನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರ. ಇಡೀ ಸಿನಿಮಾ ನೋಡ್ತಾ ಇದ್ದರೆ ಜೀವ ನಡುಗುತ್ತೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ, ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸರ್” ಎಂದು ನಟ ರವಿಶಂಕರ್ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.


‘ವಿಕ್ರಾಂತ್ ರೋಣ’ ಸಿನಿಮಾವನ್ನು 3ಡಿ ರೂಪದಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ಹೈದರಾಬಾದ್, ಬೆಂಗಳೂರು, ಕೇರಳ ಭಾಗದಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಸಿನಿಮಾಕ್ಕಿದೆ. ‘ವಿಕ್ರಾಂತ್ ರೋಣ’ ಹಾಗೂ ‘ಕೋಟಿಗೊಬ್ಬ 3’ ಸಿನಿಮಾಗಳ ನಡುವೆ ಯಾವ ಸಿನಿಮಾ ಮೊದಲು ರಿಲೀಸ್ ಆಗಲಿದೆ ಎಂದು ಕಾದು ನೋಡಬೇಕಿದೆ.


2019ರಲ್ಲಿ ರಿಲೀಸ್ ಆದ ‘ಪೈಲ್ವಾನ್‌’, ‘ದಬಂಗ್ 3’ ನಂತರ ಸುದೀಪ್ ಅವರ ಸಿನಿಮಾಗಳು ರಿಲೀಸ್ ಆಗಿಲ್ಲ. ಹೀಗಾಗಿ ಪ್ರೇಕ್ಷಕರು ಸುದೀಪ್ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈ ನಡುವೆ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋನಲ್ಲಿ ಕೆಲವೊಂದಿಷ್ಟು ವಾರ ಕಾಣಿಸಿಕೊಂಡರು. ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸುದೀಪ್ ಅವರು ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಕೊರೊನಾ ಕಾರಣಕ್ಕೆ ಅವರ ಸಿನಿಮಾಗಳು ರಿಲೀಸ್ ಆಗೋದು ತಡವಾಗುತ್ತಿದೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...