No menu items!
9.3 C
Munich
Wednesday, April 29, 2026

ಊಬರ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ ಅರ್ಜಿ ಸಲ್ಲಿಸಿ

Must read

ಆಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಉಬರ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈದರಾಬಾದ್ ಹಾಗೂ ಬೆಂಗಳೂರು ನಗರಗಳಲ್ಲಿ ನೇಮಕಾತಿ ನಡೆಯಲಿದೆ.

ಕೊರೊನಾ ಸಂಕಷ್ಟದಲ್ಲಿ ಉಬರ್ ಸೇವೆ ನಿರ್ಬಂಧಿತವಾಗಿ ಕೆಲ ನಗರಗಳಲ್ಲಿ ಲಭ್ಯವಿದೆ. ಬೆಂಗಳೂರಲ್ಲಿ ಸದ್ಯಕ್ಕೆ ಕ್ಯಾಬ್ ಸೇವೆಗೆ ಅನುಮತಿ ನೀಡಲಾಗಿದ್ದರೂ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿಶ್ವದಲ್ಲಿ 10,000ಕ್ಕೂ ಅಧಿಕ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಬರ್ ಭಾರತದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಸುಮಾರು 250ಕ್ಕೂ ಅಧಿಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕರೆ ನೀಡಿದೆ.

ಉಬರ್ ಈಟ್ಸ್, ಡಿಜಿಟಲ್ ಪೇಮೆಂಟ್, ಮೂಲ ಸೌಕರ್ಯ, ಸುರಕ್ಷತೆ, ತಂತ್ರಜ್ಞಾನ ಸೇರಿದಂತೆ ವಿವಿಧ ಅಂಶಗಳನ್ನು ಅಭಿವೃದ್ಧಿಪಡಿಸಲು ಉಬರ್ ಮುಂದಾಗಿದೆ. ಬಿ.ಟೆಕ್ ಅಥವಾ ಬಿ.ಇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಸಕ್ತ, ಅರ್ಹ ಅಭ್ಯರ್ಥಿಗಳು ಉಬರ್ ವೆಬ್ ತಾಣದಲ್ಲಿ ಅರ್ಜಿ ವಿವರ ಪಡೆದು ಅರ್ಜಿ ಸಲ್ಲಿಸಬಹುದು. (https://www.uber.com/global/en/careers/list/104412/)

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article