ತಮಿಳು ನಟ ವಿಜಯ್ ಕೇವಲ ತಮಿಳುನಾಡು ಮಾತ್ರವಲ್ಲದೆ ಪಕ್ಕದ ರಾಜ್ಯಗಳಾದ ಕೇರಳ , ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿಯೂ ಸಹ ಜನಪ್ರಿಯತೆಯನ್ನು ಗಳಿಸಿರುವಂತಹ ನಟ. ಇನ್ನು ಇವರ ಬಗ್ಗೆ ಬೇರೆ ರಾಜ್ಯದ ಜನ ಸಹ ಮಾತನಾಡುವಂತಹ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಆದರೆ ನಟಿ ತಮನ್ನಾ ಮಾತ್ರ ಇತ್ತೀಚೆಗೆ ಅವರ ಪೆಟ್ರೋಮ್ಯಾಕ್ಸ್ ಪ್ರಚಾರದ ವೇಳೆ ವಿಜಯ್ ಅವರ ಬಗ್ಗೆ ಮಾತನಾಡಿ ಎಂದಾಗ ವಿಜಯ್ ಅವರ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ಹೇಳುವುದರ ಮೂಲಕ ಹೊಸ ಕಾಂಟ್ರವರ್ಸಿ ಸೃಷ್ಟಿಸಿದ್ದಾರೆ.
ಅವರು ಈ ವೇಳೆ ವಿಜಯ್ ಅವರ ಬಗ್ಗೆ ಪತ್ರಕರ್ತರು ಕೇಳಿದಾಗ ವಿಜಯ್ ಅವರ ಜೊತೆ ಅಭಿನಯಿಸಿದಾಗ ನಾನು ತುಂಬಾ ಚಿಕ್ಕವಳು ಅವರ ಅಭಿಮಾನಿಯಾಗಿ ನಾನು ಅಭಿನಯಿಸಿದ್ದೇ ಆದರೆ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ತಮನ್ನಾ ಅವರ ಈ ಹೇಳಿಕೆ ಇದೀಗ ವಿಜಯ್ ಫ್ಯಾನ್ಸ್ ಗಳನ್ನು ಕೆರಳಿಸಿದ್ದು ತಮಿಳಿನ ಹಿರಿಯ ನಟರುಗಳ ನಂತರ ಪ್ರಸ್ತುತ ತಲೆಮಾರಿನ ಹೀರೋಗಳಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ನಟ ವಿಜಯ್ ಇಂತಹ ನಟನ ಬಗ್ಗೆಯೇ ಅವರ ಜೊತೆ ಅಭಿನಯಿಸಿದರೂ ಸಹ ಅವರು ಗೊತ್ತಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.