ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

0
1363

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ವಿಶ್ವದಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವ ಹಣ್ಣುಗಳು ಯಾವುವು? ಇದಕ್ಕೆ ಉತ್ತರ ತಕ್ಷಣಕ್ಕೆ ನೇರಳೆ, ಸೇಬು, ದ್ರಾಕ್ಷಿ, ಮಾವು ಎಂದು ಉತ್ತರಿಸಬಹುದೇನೋ? ಆದರೆ ಇವುಗಳಿಗಿಂತಲೂ ಹೆಚ್ಚಿನ ಬೆಲೆಯ ಹಣ್ಣುಗಳಿವೆ! ಸಾಮಾನ್ಯವಾಗಿ ಇವು ನಮ್ಮ ಮಾರುಕಟ್ಟೆಯಲ್ಲಿ ಕಾಣುವುದು ವಿರಳ! ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣುಗಳಲ್ಲಿ 10ನೇ ಸ್ಥಾನದಲ್ಲಿರೋ ಒಂದು ಹಣ್ಣಿನ ಬೆಲೆಯೇ 602.68 ರೂಪಾಯಿಗಳು! ಈಗ ಲೆಕ್ಕಹಾಕಿ ಅತ್ಯಂತ ಹೆಚ್ಚು ಬೆಲೆಯ ನಂಬರ್ 1 ಹಣ್ಣಿನ ಬೆಲೆ ಎಷ್ಟಿರಬಹದು?
ಇಲ್ಲಿ ವಿಶ್ವದ ಅತೀಹೆಚ್ಚು ಬೆಲೆಯ ಹಣ್ಣುಗಳ ಪಟ್ಟಿಯನ್ನು ನೀಡಲಾಗಿದೆ! ನೋಡಿ, ಇಷ್ಟೊಂದು ಬೆಲೆಯ ಹಣ್ಣುಗಳಿವೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ!?

10) ಬುದ್ಧ ಆಕೃತಿ ಪೇರಳೆ :

Buddha-Shaped-Pears
ಚೀನದಲ್ಲಿ ಕಂಡುಬರುವ ಬುದ್ಧ ಆಕೃತಿಯ ಪೇರಳೆ ವಿಶ್ವದ ಶ್ರೀಮಂತ ಹಣ್ಣುಗಳಲ್ಲಿ 10ನೇ ಸ್ಥಾನ ಅಲಂಕರಿಸಿದೆ. ಈ ಪೇರಳೆಯ ಬೆಲೆ ಕೇವಲ ಒಂದು ಹಣ್ಣಿನ ಬೆಲೆ 602.68 ರೂಗಳು.

9) ಸೆಕಾಯ್ ಇಚಿ ಸೇಬು :

Sekai-Ichi-Apples
ಸೆಕಾಯ್ ಇಚಿ ಎಂದರೆ ವಿಶ್ವದ ನಂಬರ್ 1 ಎಂಬ ಅರ್ಥವಿದೆಯಂತೆ! ಈ ಸೇಬು ಮಾಮೂಲಿ ಸೇಬಿಗಿಂತ ಸ್ವಲ್ಪದೊಡ್ಡಗಾತ್ರದಲ್ಲಿದ್ದು, ಇದರ ಬೆಲೆ 1406.26 ರೂಪಾಯಿಗಳು

8)ಡೆಕೊಪನ್ ಸಿಟ್ರಸ್ :

Dekopon-Citrus

ಮ್ಯಾಂಡರಿಯನ್ ಕಿತ್ತಳೆ ಹೊಸತೇನಲ್ಲ. ಇದರಂತೆಯೇ ಇರುವ ಡೆಕೊಪನ್ ಸಿಟ್ರಿಸ್ ಹೊಸದು. ಇದನ್ನು 1972ರಿಂದ ಬೆಳೆಯಲಾರಂಭಿಸಲಾಗಿದೆ. ಈಗ ಇದೊಂದು ಬ್ರಾಂಡ್ ನೇಮ್ ಆಗಿದೆ. 6ಹಣ್ಣಿನ ಒಂದು ಪ್ಯಾಕ್‍ನ ಬೆಲೆ 5357.20 ರೂಗಳೆಂದರೆ ಇದು ಸುಲಭದಲ್ಲಿ ಕೈಗೆಟಕುವಂತಹದೇ?

7) ಸೆಂಬಿಕಿಯಾ ರಾಣಿ ಸ್ಟ್ರಾಬೆರಿಗಳು :

Senbikiya-Queen-Strawberries

ವಿಶ್ವದ 7ನೇ ಶ್ರೀಮಂತ ಹಣ್ಣು ಸೆಂಬಿಕಿಯಾ ರಾಣಿ ಸ್ಟ್ರಾಬೆರಿ. ಇವುಗಳ ಬೆಲೆ12ಹಣ್ಣಿನ ಒಂದು ಪ್ಯಾಕ್‍ಗೆ 5692.02 ರೂಪಾಯಿಗಳು!

6)ಸ್ಕೇರ್ ಕಲ್ಲಂಗಡಿ :

Square-Watermelon

ಕಲ್ಲಂಗಡಿ ಹಣ್ಣು ಕೂಡ ಶ್ರೀಮಂತ ಹಣ್ಣುಗಳ ಸಾಲಿನಲ್ಲಿದೆ. ಆದರೆ ಮಾಮೂಲಿ ಕಲ್ಲಂಗಡಿ ಅಲ್ಲ, ಚಚೌಕಾರಾದ, ಸ್ಕೇರ್ ಕಲ್ಲಂಗಡಿ ಹಣ್ಣಿನ ಬೆಲೆ ಒಂದು ಹಣ್ಣಿಗೆ ಬರೊಬ್ಬರಿ 53571.96 ರೂಪಾಯಿಗಳು! ಇದು ಜಪಾನ್‍ನಲ್ಲಿ ಬೆಳೆಯುತ್ತೆ.

5) ಪೈನಾಪಲ್/ ಅನಾನಸ್ :

Pineapples-From-The-Lost-Gardens-of-Heligan

ಯುಕೆಯ ಹೆಲಿಜನ್‍ನಲ್ಲಿ ಬೆಳೆಯುವ ಅನಾನಸ್ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತೆ. ಈ ಹಣ್ಣಿನ ಬೆಲೆ 107143.92 ರೂಪಾಯಿಗಳು!

4) ತೈಯೋ ನೋ ತಮ್ಗೋ ಮಾವು :

Taiyo-no-Tamago-Mangoes

ಸೂರ್ಯನ ಮೊಟ್ಟೆ ಎಂದು ಕರೆಯಲ್ಪಡುವ ತೈಯೋ ನೋ ತಮ್ಗೋ ಮಾವು ಜಪಾನಿನದು. ಇದರ ಒಂದು ಜೋಡಿಗೆ ಅಂದರೆ 2 ಹಣ್ಣುಗಳಿಗೆ 200894.85 ರೂಪಾಯಿಗಳು!

3) ರುಬಿ ರೋಮನ್ ದ್ರಾಕ್ಷಿ :

Ruby-Roman-Grapes

ಜಪಾನಿನ ರುಬಿ ರೋಮನ್ ದ್ರಾಕ್ಷಿಯನ್ನು ನೋಡಿದ್ದೀರಾ? ಇದುವೇ ವಿಶ್ವದ ಶ್ರೀಮಂತ ಹಣ್ಣುಗಳಲ್ಲಿ 3ನೇಯದು. ಇದರ ಬೆಲೆ ಒಂದು ಗೊಂಚಲಿಗೆ 267859.80ರೂಪಾಯಿಗಳು!

2) ಡೆನ್ಸುಕೆ ಕಲ್ಲಂಗಡಿ :

Densuke-Watermelon

ವಿಶ್ವದ ಅತೀ ಹೆಚ್ಚುಬೆಲೆಯ ಹಣ್ಣುಗಳಲ್ಲಿ 2ನೇ ಸ್ಥಾನದಲ್ಲಿರುವ ಡೆನ್ಸುಕೆ ಕಲ್ಲಂಗಡಿ ಇತರ ಕಲ್ಲಂಗಡಿಗಳಂತಲ್ಲ.ಇದು 24 ಪೌಂಡು ತೂಕ ಇರುವ ಈ ಹಣ್ಣು ಕಪ್ಪು ತೊಗಟೆಯನ್ನು ಹೊಂದಿದೆ. ಇದರ ಬೆಲೆ 408486.20 ರೂಪಾಯಿಗಳು!

1) ಯುಬಾರಿ ಮಿಲನ್ :

Yubari-Melon

ವಿಶ್ವದ ಅತೀ ಹೆಚ್ಚು ಬೆಲೆಯ ಹಣ್ಣುಗಳ ಪೈಕಿ ಯುಬಾರಿ ಮಿಲನ್ ನಂಬರ್ 1! ಇದರ ಜಪಾನ್‍ನಲ್ಲಿ ಶ್ರೀಮಂತರು ಇದುನ್ನು ಉಡುಗೊರೆಯಾಗಿ ನೀಡುತ್ತಾರೆ. ಒಂದು ಜೋಡಿ ಹಣ್ಣಿಗೆ ಅಂದರೆ 2 ಹಣ್ಣಿಗೆ 1540190.39 ರೂ!

LEAVE A REPLY

Please enter your comment!
Please enter your name here