ಚಾಮುಂಡೇಶ್ವರಿ ಸನ್ನಿಧಿಗೆ ಕೊಂಡುಕೊಂಡವರನ್ನು ಕರೆದುಕೊಂಡು ಬರುವಂತೆ ಅವರೆ ಹೇಳಿದ್ದಾರೆ. ನಾನು ಕರೆದುಕೊಂಡು ಬರುತ್ತೇನೆ ಎಂದು ಹೇಳಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ಹೆಚ್. ವಿಶ್ವನಾಥ್ ಆಣೆ-ಪ್ರಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು.ನಾನು ಯಾವುದೇ ಆಣೆ ಪ್ರಮಾಣ ಮಾಡಲ್ಲ. ಆಣೆ-ಪ್ರಮಾಣ ಮಾಡವುದಾಗಿ ನಾನು ಹೇಳಿಲ್ಲ. ನನ್ನ ಖರೀದಿಸಿದ ವ್ಯಕ್ತಿ ನೋಡಲು ಕಾಯುತ್ತಿದ್ದೇನೆ. ಆತನನ್ನು ಸ್ವಾಗತಿಸಲು ಬಂದಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.






