ವಿಶ್ವೇಶ್ವರ ಭಟ್ ಲೇಖನದ ಸ್ಫೂರ್ತಿಯಿಂದ ಬರುತ್ತಿರುವ ತನುಜಾ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ

Date:

ರಾಜಕೀಯ ಚಟುವಟಿಕೆಗಳಲ್ಲಿ ಸದಾ ಕಾಲ ಬ್ಯುಸಿ ಆಗಿರುವ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಅವರು ಕೊಂಚ ಬಿಡುವು ಮಾಡಿಕೊಂಡು ಸಿನಿಮಾ ಮಂದಿಯ ಕಡೆಗೆ ಗಮನ ನೀಡಿದ್ದಾರೆ. ಹೊಸದೊಂದು ಕನ್ನಡ ಸಿನಿಮಾದ ಫಸ್ಟ್‌ಲುಕ್‌ ಲಾಂಚ್‌ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಕೈಯಿಂದ ಫಸ್ಟ್‌ಲುಕ್‌ ಅನಾವರಣ ಮಾಡಿಸಿಕೊಂಡ ಈ ಸಿನಿಮಾ ಹೆಸರು ‘ತನುಜಾ’.

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. 2016-17ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಭಾಜನವಾಗಿದ್ದ ‘ಅಂತರ್ಜಲ’ ಚಿತ್ರವನ್ನು ನಿರ್ದೇಶಿಸಿದ್ದ ಹರೀಶ್ ಎಂ.ಡಿ. ಹಳ್ಳಿ ಅವರಿಗೆ ಇದು ಎರಡನೇ ಚಿತ್ರ. ‘ಸ.ಹಿ.ಪ್ರಾ. ಶಾಲೆ: ಕಾಸರಗೋಡು’ ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತಾ ಪಾವೂರ್‌ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ ‘ತನುಜಾ’ ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ.


ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಇನ್ನೂ ಮದುವೆ ಆಗಿಲ್ಲ. ಆದರೆ ಹಲವರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಅನೇಕ ನಟಿಯರ ಜೊತೆ ಅವರ ಹೆಸರು ಕೇಳಿಬರುತ್ತಲೇ ಇದೆ. ಅದರಲ್ಲಿ ಪಾಕಿಸ್ತಾನ ಮೂಲದ ಸೋಮಿ ಅಲಿ ಕೂಡ ಒಬ್ಬರು. ತಮ್ಮ 16ನೇ ವಯಸ್ಸಿನಲ್ಲಿಯೇ ಸಲ್ಮಾನ್‌ ಖಾನ್‌ ಮೇಲೆ ಅವರಿಗೆ ಕ್ರಶ್‌ ಆಗಿತ್ತು. ಹಾಗಾಗಿ ಅವರು ಮನೆ ಬಿಟ್ಟು ಮುಂಬೈಗೆ ಬಂದಿದ್ದರು.
ಸಲ್ಮಾನ್‌ರನ್ನು ಮದುವೆ ಆಗಬೇಕು ಎಂಬ ಉದ್ದೇಶ ಹೊಂದಿದ್ದ ಸೋಮಿ, ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಶುರುಮಾಡಿದರು. ಆದರೆ ಅವರಿಗೆ ನಟನೆಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ರಿಹರ್ಸಲ್‌ಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ನಿರ್ದೇಶಕರಿಗೆ ಸೋಮಿ ಅಲಿಯ ಈ ಗುಣಗಳು ಇಷ್ಟ ಆಗುತ್ತಿರಲಿಲ್ಲವಂತೆ. ಹಾಗೋ ಹೀಗೋ 1999ರವರೆಗೆ ಒಂದಷ್ಟು ಸಿನಿಮಾಗಳಲ್ಲಿ ಸೋಮಿ ನಟಿಸಿದರು. ಜೊತೆಗೆ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ ಕೂಡ ಮಾಡಿದ್ದರು ಎಂಬ ಮಾತಿಗೆ.
ಕೊನೆಗೂ ಸಲ್ಮಾನ್‌ ಖಾನ್‌ ಜೊತೆ ಮದುವೆ ಆಗಲು ಸೋಮಿಗೆ ಸಾಧ್ಯವಾಗಲೇ ಇಲ್ಲ. ‘ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ನಾನು ತುಂಬ ತಪ್ಪು ಮಾಡಿದೆ. ಕೊನೆಗೂ ಅದು ನನಗೆ ಸಿಗಲೇ ಇಲ್ಲ. ಹಾಗಂತ ನನಗೆ ಪಶ್ಚಾತ್ತಾಪ ಇಲ್ಲ. ಯಾಕೆಂದರೆ ಅದನ್ನೆಲ್ಲ ನಾನು ಮನಸಾರೆ ಮಾಡಿದ್ದೆ. 16ರಿಂದ 24ನೇ ವಯಸ್ಸಿನವರೆಗೆ ನನ್ನ ಜರ್ನಿ ತುಂಬ ಏಳು-ಬೀಳುಗಳಿಂದ ಕೂಡಿತ್ತು. ನಾನು ಯಾರಿಗಾಗಿ ಮುಂಬೈಗೆ ಬಂದಿದ್ದೆನೋ ಅವರ ಜೊತೆ ನನ್ನ ಸಂಬಂಧ ಕಡಿದುಕೊಂಡು 1999ರಲ್ಲಿ ಭಾರತ ಬಿಟ್ಟು ಬಂದೆ’ ಎಂದಿದ್ದಾರೆ ಸೋಮಿ. ಈಗ ಅವರು ಅಮೆರಿಕದಲ್ಲಿ ಎನ್‌ಜಿಓ ನಡೆಸುತ್ತಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...