ಶನಿದೋಷದಿಂ‌ದ‌ ಮುಕ್ತಿ ಪಡೆಯಲು ಇಲ್ಲಿದೆ‌ ನೋಡಿ‌ ಸರಳ‌ ಪರಿಹಾರ

Date:

ಹಿಂದು ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿಷ್ಯದಲ್ಲಿನ ೯ ಪ್ರಥಮ ದಿವ್ಯ ನವಗ್ರಹಗಳಲ್ಲಿ ಶನಿಯು ಒಬ್ಬನು.. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ.. ಶನಿಯು ಶನಿವಾರದ ದೇವರು.. ಭಾರತೀಯ ಭಾಷೆಯಲ್ಲಿ ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ..

ಶನಿದೇವ ಯಾರನ್ನು ಬಿಡುವುದಿಲ್ಲ.. ಮಾಡಿದ ತಪ್ಪಿಗೆ ಶಿಕ್ಷೆಯನ್ನ ನೀಡೋದು, ಮನಪರಿವರ್ತನೆ ಮಾಡುವುದರ ಜೊತೆಗೆ ಸದ್ಗುಣ ಮಾರ್ಗದೆಡೆಗೆ ನಡೆಸೋದು ಶನಿದೇವನ ಕರ್ತವ್ಯ.. ದೇವಾನೂ ದೇವತೆಗಳನ್ನ ಬಿಡಲಿಲ್ಲ ಈ ಶನಿದೇವಅಂತಹದರಲ್ಲಿ ಯಕಶ್ಚಿತ್ ಮಾನವರು ನಾವ್ಯಾವ ಲೆಕ್ಕ..

ಯಾವುದೇ ರಾಶಿಗೆ ಶನಿ ಗ್ರಹವು ಗೋಚಾರದಲ್ಲಿ ರಾಶಿಯಿಂದ 12ನೇ ಮನೆಯಲ್ಲಿ ಹಾಗೂ ಅದೇ ರಾಶಿಯ ಜನ್ಮಸ್ಥಾನದಲ್ಲಿ ರಾಶಿಯಿಂದ 2ನೇ ಮನೆಯಲ್ಲಿ ಸಂಚರಿಸುವುದಕ್ಕೆ ಪ್ರತಿ ರಾಶಿಯಲ್ಲಿ ಎರಡು ವರುಷ ಆರು ತಿಂಗಳು ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಾನೆ. ಒಟ್ಟು ಮೂರು ರಾಶಿಯಲ್ಲಿ ಈ ಮೇಲಿನ ಸ್ಥಾನಗಳಲ್ಲಿ ಬಂದಾಗ ಮಾತ್ರ ಸಾಡೇಸಾತ್‌ ಅಥವಾ ಶನಿಕಾಟ ಎನ್ನುತ್ತಾರೆ. ಏಳೂವರೆ ವರ್ಷದ ಅವಧಿ ಜೀವಿತಾವಧಿಯಲ್ಲಿ ಮೂರು ಅಥವಾ ನಾಲ್ಕು ಸಲ ಬರುತ್ತದೆ.

ಮೊದಲೆರಡು ಬಾರಿ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಾನೆ. ಮೂರನೆಯ ಬಾರಿ ಭಯಂಕರ ತೊಂದರೆ, ಕಷ್ಟಗಳನ್ನು ಕೊಡುತ್ತಾನೆ. ಒಂದೊಮ್ಮೆ ನಾಲ್ಕನೆಯ ಬಾರಿ ಪ್ರವೇಶಿಸಿದರೆ ಬದುಕಿದ್ದೂ ಉಪಯೋಗವಿಲ್ಲದಂತೆ ಮಾಡುತ್ತಾನೆ. ಆದರೆ ಕೊನೆಯಲ್ಲಿ ಬಿಟ್ಟು ಹೋಗುವಾಗ ರಾಜಯೋಗ ಕೊಡುತ್ತಾನೆ. ಸಾಡೇಸಾತಿ ಎಲ್ಲರನ್ನೂ ಕಾಡುವುದಿಲ್ಲ. ಕೆಲವರನ್ನು ಮಾತ್ರ ಕಾಡುತ್ತದೆ.

ಸಾಡೇಸಾತಿ ದೋಷದಿಂದ ಬಳಲುವವರು ಸಂಕಷ್ಟ ಪರಿಹಾರಕ್ಕಾಗಿ, ಪ್ರತಿ ಶನಿವಾರ ಕೋತಿಗಳಿಗೆ ಬಾಳೆಹಣ್ಣನ್ನು ಮತ್ತು ನಾಯಿಗಳಿಗೆ ಸಿಹಿ ಪದಾರ್ಥವನ್ನು ನೀಡಬೇಕು. ಆಲದ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಪ್ರತಿ ಶನಿವಾರ ಹಚ್ಚಬೇಕು. ಆಂಜನೇಯ ಸ್ವಾಮಿಯ ದೇಗುಲದಲ್ಲಿ ಮೂರು ಕರಿ ಎಳ್ಳಿನ ಬತ್ತಿಯ ದೀಪವನ್ನು ಬೆಳಗಬೇಕು.

ಸಾಡೇಸಾತಿ ಶುರುವಾದಾಗ ಯಾವುದಾದರೂ ಒಂದು ಅಮಾವಾಸ್ಯೆಯಂದು ಕರಿ ಎಳ್ಳು, ಕರಿ ಬಟ್ಟೆ, ಕಬ್ಬಿಣದ ಬಾಣಲೆ, ಎಳ್ಳೆಣ್ಣೆ, ಬಾಳೆಹಣ್ಣನ್ನು ದಾನವಾಗಿ ಕೊಡಬೇಕು. ಆಂಜನೇಯ ಹಾಗೂ ಶನಿದೇವರ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಉತ್ತಮ ಫಲ ಕಾಣಬಹುದು.

 

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...