ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

0
604

ಅತ್ತೆಮಗಳು ನಮ್ ಗಿಂತ ಒಂದೋ ಎರಡೋ ವರ್ಷ ಚಿಕ್ಕವಳಾಗಿದ್ರೆ ಅವಳ ಜೊತೆ ಫ್ರೆಂಡ್ಲಿ ಆಗಿ ಇರುವಂಗೆ ಇಲ್ಲ ಕಣ್ರೀ! ಎಂಥಾ ಸಾವ ಇದು! ಅಪ್ಪ ಮಾಡಿಟ್ಟ ಆಸ್ತಿ ಇದ್ರೆ ಇಂಥಾ ಪ್ರಾಬ್ಲಮ್ಮೇ ಬರಲ್ಲ…! ಅತ್ತೆ, ಮಾವನೇ..”ಹೇ, ನಿನ್ನ ಮಾವನ ಮಗಕಣೇ, ಅವ್ನ ಜೊತೆ ಹೋಗೆ ಅಂತ ಎಲ್ಲಿಗೆ ಬೇಕಾದ್ರು ಕಳಿಸ್ತಾರೆ! ಇದು ದೇವ್ರಾಣೆಗೂ ನನಗಾದ ಅನುಭವವಲ್ಲ! ಇದು ಚಿಕ್ಕಮಗಳೂರಿನ ನವೀನ್ ಎಕ್ಸ್ ಪಿರಿಯೆನ್ಸ್! ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ! ಮಿಸ್ ಮಾಡ್ಕೊಳ್ಳದೆ ಓದಿ!

ಅವನು ನವೀನ್, ಅವನ ಅತ್ತೆ ಮಗಳು ಪ್ರಜ್ಞಾ! ಅವನಿಗಿಂತ ಎರಡು ವರ್ಷ ಚಿಕ್ಕವಳು! ಅಜ್ಜನಮನೆ, ಮಾವನ ಮನೆ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ಇವ್ಳಿಗೂ ಅಷ್ಟೆ ತನ್ನ ತಾಯಿ ತವರೆಂದರೆ ತುಂಬಾ ಇಷ್ಟ! ವರ್ಷಕ್ಕೆರಡು ಬಾರಿ ಬೆಂಗಳೂರಿಂದ ಚಿಕ್ಕಮಗಳೂರಿಗೆ ಬರ್ತಾ ಇದ್ಲು! ಚಿಕ್ಕಂದಿನಲ್ಲಿರುವಾಗ ಅವಳು ನವೀನ್ ಜೊತೆ ಆಟ ಆಡ್ತಾ ಇದ್ರೆ ಅವಳ ಅಮ್ಮ, ಅಪ್ಪ ಏನೂ ಹೇಳ್ತಾ ಇರ್ಲಿಲ್ಲ! ಅವಳಿಗೆ ಹದಿನೆಂಟು ಆಯ್ತು! ಇವನಿಗೆ ಇಪ್ಪತ್ತು ವರ್ಷವಾಯ್ತು ನೋಡಿ, ಮನೆಯವರಲ್ಲಾ ಇವರಿಬ್ಬರನ್ನ ಅನುಮಾನದ ಕಣ್ಣುಗಳಿಂದ ನೋಡೋಕೆ ಶುರುಮಾಡಿದ್ರು!
ಒಂದುದಿನ ಪ್ರಜ್ಞಾಳ ಅಮ್ಮಾ, ನವೀನ್ ನ ತಂದೆಗೆ ಫೋನ್ ಮಾಡ್ತಾರೆ “ನೋಡು, ಅಣ್ಣಾ, ನಿನ್ನಮಗ ನವೀನ್, ಪ್ರಜ್ಞಾ ಜೊತೆಯಲ್ಲಿ ಚಾಟ್ ಮಾಡ್ತಾ ಇರ್ತಾನೆ! ಗಂಟೆಗಟ್ಟಲೆ ಮಾತಾಡ್ತಾನೆ! ನೋಡು ಇವೆಲ್ಲ ಚೆನ್ನಾಗಿರಲ್ಲ! ನಮ್ ಮನೆ ಅವ್ರಿಗೆ ಗೊತ್ತಾಗಿ, ಸಿಕ್ಕಾಪಟ್ಟೆ ಅವ್ಳಿಗೆ ಬೈತಾ ಇದ್ದಾರೆ! ನಾವು, ನೀವು ಚೆನ್ನಾಗಿ ಇರ್ಬೇಕು ಅಂದ್ರೆ ನವೀನ್ ಪ್ರಜ್ಞಾ ಈ ರೀತಿ ಮಾಡ್ಬಾರ್ದು”! ಅಂತಾರೆ. “ಅಲ್ಲಾ, ದೀಪ, ಏನ್ ಆಯಗುತ್ತೆ? ಚಿಕ್ಕಂದಿನಿಂದಲೂ ಒಟ್ಟಿಗೆ ಆಡಿ ಬೆಳ್ದವರಲ್ಲವೇ? ಫ್ರೆಂಡ್ಲಿ ಆಗಿ ಮಾತಾಡ್ತಾರೆ! ಅಷ್ಟಕ್ಕೂ ನವೀನ್ ನನ್ನ ಮಗ ತಾನೆ? ಅವ್ನ ಜೊತೆ ನಿನ್ನ ಮಗಳು ಪ್ರಜ್ಞಾ ಮಾತಾಡಿದ್ರೆ, ನೀನು, ಭಾವ ಏಕೆ ಸಿಟ್ಟು ಮಾಡಿಕೊಳ್ತೀರಾ? ಎಂದು ನವೀನ್ ತಂದೆ ತನ್ನ ತಂಗಿಗೆ ಹೇಳ್ತಾರೆ! “ಓಹೋ, ಹೀಗೋ, ನಮ್ಮ ಒಬ್ಳೆ ಮಗಳು ಪ್ರಜ್ಞಾಳನ್ನು ನಿನ್ನ ಮಗ ನವೀನ ಓಡಿಸಿಕೊಂಡು ಹೋದ್ರೆ ಆಸ್ತಿ ಸಿಗುತ್ತೆ ಅಂತಾ ಅಲ್ವಾ? ಎಂದು ತವರಿನ ಸಂಬಂಧವನ್ನೇ ತೊರೆಯುವಂತೆ, ಪ್ರಜ್ಞಾಳ ಅಮ್ಮ ಮಾತನಾಡುತ್ತಾರೆ! ಇಂಥ ಉರಿ ಹತ್ತೋ ಮಾತಾಡಿದ್ರೆ ಯಾರಿಗೆ ತಾನೆ ಕೋಪ ಬರಲ್ಲ ಹೇಳಿ? ನವೀನ ತಂದೆಗೆ ಕೋಪವೂ ಬಂತು, ಒಡ ಹುಟ್ಟಿದ ತಂಗಿ ಈ ರೀತಿ ಮಾತಾಡ್ತಾಳೆ ಅಂತ ಕನಸು ಮನಸಿನಲ್ಲೂ ಎಣಿಸಿರಲಿಲ್ಲಾ ಅಂತ ಬೇಸರವೂ ಆಯ್ತು! ಏನು, ಏನೆಂದರೆ ಏನೂ ಮಾತನಾಡದೆ ಕಾಲ್ ಕಟ್ ಮಾಡಿದ್ರು!


ನವೀನ್ ಗೆ ಈ ವಿಚಾರ ಗೊತ್ತಾಯ್ತು! ಪ್ರಜ್ಞಾಳಿಗೆ ಫೋನ್ ಮಾಡಿದ್ರೆ ಸ್ವಿಚ್ ಆಫ್! ಸೀದಾ, ಅತ್ತೆ(ಪ್ರಜ್ಞಾಳ ಅಮ್ಮ) ಗೆ ಫೋನ್ ಮಾಡಿದ! “ಅತ್ತೆ, ನಾನು ಪ್ರಜ್ಞಾ ಮಾತಾಡೋದ್ರಿಂದ ನಿಮ್ಮಗಳಿಗೆ ಬೇಜಾರಾಗೋದಾದ್ರೆ ನನ್ನತ್ರನೇ ಹೇಳ್ಬಹುದಿತ್ತಲ್ಲಾ? ಯಾಕೆ ಅಪ್ಪನ ಹತ್ತಿರ ಜಗಳ ಮಾಡಿದ್ರಿ? ಅಷ್ಟಕ್ಕೂ ನಾನು ಮತ್ತು ಪ್ರಜ್ಞಾ ಮಾತಾಡಿದ್ರೆ ತಪ್ಪೇನು? ಅತ್ತೆ, ನೀವು ಅಂದುಕೊಂಡಂತೆ ನಾವಿಲ್ಲ! ನಾವಿಬ್ರು ಒಳ್ಳೆ ಫ್ರೆಂಡ್ಸ್” ಅಂದ! ಅದನ್ನೇ ಪ್ರಜ್ಞಾ ಅವಳ ಅಪ್ಪ ಅಮ್ಮನಿಗೆ ಹೇಳಿದ್ಲು! ಆದ್ರೂ ಅವರು ಇವಳ ಫೋನ್ ಅನ್ನ ಕಸಿದು ಕೊಂಡಿದ್ರು! ಇನ್ನು ಅವರು ಇವನ ಮಾತು ಕೇಳ್ತಾರ? ಇವ್ನಿಗೂ ಬೈತಾರೆ! ಸುಖಾಸುಮ್ನೆ ಸಂಬಂಧ ಹಾಳಾಗುತ್ತೆ!
ಫೋನ್ ಕಸಿದು ಕೊಂಡ್ರೆ ಏನು? ಫೇಸ್ ಬುಕ್ ಇದೆಯಲ್ಲಾ? ಇಬ್ಬರ ಹತ್ರನೂ ಲ್ಯಾಪ್ ಟಾಪ್ ಇತ್ತು! ಎಫ್ ಬಿಯಲ್ಲಿ ಚಾಟ್ ಶುರುಮಾಡಿದ್ರು.ಮತ್ತೆ ಮೀಟ್ ಆದ್ರು! ಅವತ್ತಿನ ತನಕ ಅವರಿಬ್ಬರ ತಲೆಯಲ್ಲೂ ಪ್ರೀತಿ-ಗೀತಿ ಇರ್ಲಿಲ್ಲ! ಯಾವಾಗ ಫೋನ್ ಕಸಿದುಕೊಂಡು ಇಬ್ರನ್ನ ದೂರ ಮಾಡ್ಬೇಕು ಅಂತ ಅರ್ಥವಿಲ್ಲದೆ ಪ್ರಯತ್ನ ಪಟ್ಟರೋ? ಆಗ್ಲೇ ಇವರಿಗೆ ಏನೇನೋ ಅನಿಸಿ ನಾವ್ಯಾಕೆ ಪ್ರೀತಿಸಬಾರ್ದು! ಅಂತ ಅನ್ಕೊಂಡ್ರು! ಆದ್ರೆ ಅವ್ನು ಪ್ರೀತಿ ನಿವೇಧನೆ ಮಾಡಿಕೊಳ್ಳಲಿಲ್ಲ! ಇವ್ಳು ಪ್ರೀತಿಸ್ತೀನಿ ಅಂತ ಹೇಳಲಿಲ್ಲ! ಎರಡು ವರ್ಷ ಫೇಸ್ ಬುಕ್ನಲ್ಲಿ ಚಾಟ್ ಮಾಡ್ತಾ ಮಾಡ್ತಾ, ಮೊದಲಿಗಿಂತಲೂ ಹತ್ತಿರ ಆಗಿದ್ರು!
ನವೀನ್ ಎಂಬಿಎ ಮುಗಿಸಿ ಬೆಂಗಳೂರಿಗೆ ಬಂದ! ಒಳ್ಳೆ ಕೆಲಸವೂ ಸಿಕ್ತು! ಪ್ರಜ್ಞಾಳ ಫ್ಯಾಮಿಲಿ ಇರೋದು ಕೂಡ ಬೆಂಗಳೂರಿನಲ್ಲೇ! ಇವನ ಎಂಬಿಎ ಮುಗಿಯುವಷ್ಟರಲ್ಲಿ ಇಂಜಿನಿಯರಿಂಗ್ ಮಾಡ್ತಾ ಇದ್ಲು ಪ್ರಜ್ಞಾ! ಇವಳ ಕೈಗೆ ಮೊಬೈಲ್ ಮರಳಿ ಸೇರಿತ್ತು! ಈಗ ಫೇಸ್ ಬುಕ್ ಅಲ್ದೆ ವಾಟ್ಸ್ ಅಪ್ ನಲ್ಲಿಯೂ ಚಾಟಿಂಗ್ ಚಾಟಿಂಗ್ ಚಾಟಿಂಗ್!


ಒಂದು ದಿನ ನವೀನ್ ಪ್ರೀತಿಯನ್ನು ನಿವೇಧಿಸಿಕೊಂಡ! ಅದನ್ನೇ ಚಾತಕ ಪಕ್ಷಿಯಂತೆ ಕಾಯ್ತಾ ಇದ್ದ ಪ್ರಜ್ಞಾ ಅವನ ಪ್ರೀತಿ ನಿವೇಧನೆಯನ್ನು ಸಮ್ಮತಿಸಿದಳು! ಮತ್ತೆರಡು ವರ್ಷ ನವೀನ್ ಕಷ್ಟಪಟ್ಟು ದುಡಿದ, ಹಣಗಳಿಸಿದ! ಇನ್ನೂ ಹೆಚ್ಚಿನ ಸಂಬಳ ಸಿಗುವ ಕಂಪನಿಗೆ ಸೇರಿದ! ಅವಳ ಇಂಜಿನಿರಿಂಗ್ ಮುಗಿಯಿತು! ಹೇಳದೆ, ಕೇಳದೆ ಮದುವೆಯೂ ಆದ್ರು! ಎರಡೂ ಮನೆಯಲ್ಲೂ ದಂಪತಿಗಳನ್ನು ಹೊರದಬ್ಬಿದ್ರು! ವಿದ್ಯೆ ಇದೆ, ದುಡಿಯುವ ಮನಸ್ಸಿದೆ, ತಮ್ಮ ಮೇಲೆ ತಮಗೆ ನಂಬಿಕೆ ಇದೆ, ನವೀನ್, ಪ್ರಜ್ಞಾ ಬೆಂಗಳುರಿನಲ್ಲಿ ಸಂಸಾರ ಜೀವನ ಆರಂಭಿಸಿದ್ರು! ಇಬ್ಬರಿಗೂ ಒಳ್ಳೆ ಕೆಲಸ! ನಾವು ಮೊದಲು ಹಣಗಳಿಸ ಬೇಕು ಆಮೇಲೆ ಮಕ್ಕಳು ಮರಿ ಅಂತ ಅದ್ರಿಂದನೂ ದೂರ ಇದ್ರು! ಗಂಡಹೆಂಡತಿ ಇಬ್ಬರೂ ದುಡಿದು ಲೈಫ್ನಲ್ಲಿ ಸೆಟಲ್ ಆಗಿದ್ದಾರೆ! ಈಗ ಅವರಿಗೆ ಕೇವಲ ಎರಡೇ ತಿಂಗಳ ಹೆಣ್ಣು ಪಾಪು ಇದೆ! ಇಬ್ಬರ ಕುಟುಂಬ ಕೂಡ ಒಂದಾಗಿದೆ!


ಫ್ರೆಂಡ್ಸ್ ಅವತ್ತು ಪ್ರಜ್ಞಾಳ ಮನೆಯಲ್ಲಿ ನವೀನ್ ಮತ್ತು ಪ್ರಜ್ಞಾಳ ಸ್ನೇಹವನ್ನು ಅನುಮಾನದ ಕಣ್ಣಿನಿಂದ ನೋಡ್ದೇ ಇದ್ದಿದ್ರೆ ಅವರಿಬ್ಬರೂ ಪ್ರೀತಿಸ್ತಾನೂ ಇರ್ಲಿಲ್ವೇನೋ? ಮದುವೆಯೂ ಆಗ್ತಾ ಇರ್ಲಿಲ್ವೇನೋ? ಆಗುವುದೆಲ್ಲಾ.. ಏನೇ ಆಗ್ಲಿ, ಎರಡು ಕುಟುಂಬಗಳು ಈಗ ಚೆನ್ನಾಗಿದೆಯಲ್ಲಾ ಸಾಕು ಗುರು! ಅದೇನೇ ಇರ್ಲಿ ಇವರಿಬ್ಬರು ತನ್ನ ಕಾಲಮೇಲೆ ತಾನು ನಿಂತು ಮದ್ವೆ ಆದ್ರಲ್ಲಾ! ಗ್ರೇಟ್ ಅಲ್ವೇನ್ರಿ?

 

 

 

LEAVE A REPLY

Please enter your comment!
Please enter your name here