ಕೋರೋನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸಹ ಸಚಿವರು, ಸಂಸದರ ಐಶಾರಾಮಿ ಬದುಕಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಿಲ್ಲ. ಇದರ ಮಧ್ಯೆಯೂ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಯಡಿಯೂರಪ್ಪ ಸಚಿವ ಸಂಪುಟದ 32 ಸದಸ್ಯರು ಹಾಗೂ ರಾಜ್ಯದ 28 ಸಂಸದರ ಬಳಕೆಗಾಗಿ ಅರವತ್ತು ಹೊಸ ಕಾರುಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ.ಪ್ರತಿಯೊಂದು ಕಾರಿಗೆ 23 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, 60 ಕಾರುಗಳ ಖರೀದಿಗೆ ಒಟ್ಟು 13.80 ಕೋಟಿ ರೂಪಾಯಿ ತಗುಲಲಿದೆ ಎಂದು ಹೇಳಲಾಗಿದೆ. ಆದರೆ ಈ ಸಮಯದಲ್ಲಿ ಇಂತ ನಿರ್ಧಾರ ಬೇಕಿತ್ತಾ ಎಂಬ ಪ್ರಶ್ನೆ ಎಲ್ಲೆಡೆ ಮುಡುತ್ತಿದೆ.