No menu items!
12.4 C
Munich
Wednesday, April 29, 2026

ಎಣ್ಣೆಗೆ ಪೀಡಿಸ್ತಿದ್ದ ತಂದೆಯನ್ನು ಕೊಂದ ಮಗ..!

Must read

ಮದ್ಯಪಾನ ಮಾಡಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಅಬ್ಬಿಗೆರೆಯಲ್ಲಿ ಗುರುವಾರ ಸಂಜೆ ಘಟನೆ ನಡೆದಿದೆ. ಯಾದಗಿರಿ ಮೂಲದ ಹುಸೇನ್,‌ ಪುತ್ರ ಬಾಬರ್‌(29)ನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೂಲಿ ಕೆಲಸ ಅರಸಿ ಕೆಲ ವರ್ಷಗಳ ಹಿಂದೆ ಹುಸೇನ್‌ ಬೆಂಗಳೂರಿಗೆ ಬಂದು, ಪತ್ನಿ, ಮಗನ ಜತೆ ವಾಸವಿದ್ದರು. ಹುಸೇನ್‌ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಪುತ್ರ ಬಾಬರ್‌ ಗಾರೆ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿಯಾಗಿದ್ದ ಬಾಬರ್‌, ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪಾಲಕರ ಜತೆ ಜಗಳ ಮಾಡುತ್ತಿದ್ದ. ಹಣ ಕೊಡು ಎಂದು ಪೀಡಿಸುತ್ತಿದ್ದ. ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದರೂ ತನ್ನ ವ್ಯಸನ ಮುಂದುವರಿಸಿದ್ದ.

ಗುರುವಾರ ಸಂಜೆ ಎಂದಿನಂತೆ ಮದ್ಯಪಾನ ಮಾಡಿ ಮನೆಗೆ ಬಂದ ಬಾಬರ್‌, ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಕೊಡಲಿಯ ಹಿಂಭಾಗದಿಂದ ಮಗನ ಮೇಲೆ ಹುಸೇನ್‌ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಬಾಬರ್‌ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಹುಸೇನ್‌ನನ್ನು ಬಂಧಿಸಲಾಗಿದೆ ಎಂದು ಗಂಗಮ್ಮನಗುಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article