ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಿಂದ ಯಡಿಯೂರಪ್ಪ ರೇಸ್ ಕೋರ್ಸ್ ರಸ್ತೆಯ ನಂಬರ್ 2 ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಸಿಎಂ ವಾಸ್ತವ್ಯದ ಹಿನ್ನೆಲೆಯಲ್ಲಿ ಸಿಬ್ಬಂದಿಯಿಂದ ನಿವಾಸದ ಸ್ವಚ್ಛತೆ ಕಾರ್ಯ ಸೇರಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಯಡಿಯೂರಪ್ಪನವರಿಗೆ ಇದು ಅದೃಷ್ಟದ ಮನೆಯಾಗಿದೆ. 2004 ರಲ್ಲಿ ಇದೇ ನಿವಾಸದಲ್ಲಿದ್ದ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರು. ಬಳಿಕ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದರು. ಕಳೆದ ವರ್ಷ ಇದೇ ನಿವಾಸವನ್ನು ತಮಗೆ ನೀಡಬೇಕೆಂದು ಮುಖ್ಯಕಾರ್ಯದರ್ಶಿಗೆ ಅವರು ಪತ್ರ ಬರೆದಿದ್ದರೂ, ಅವರಿಗೆ ನಂಬರ್ 4 ನಿವಾಸ ನೀಡಿ, ನಂಬರ್ 2 ನಿವಾಸವನ್ನು ಸಾ.ರಾ ಮಹೇಶ್ ಅವರಿಗೆ ನೀಡಲಾಗಿತ್ತು. ಈಗ ಮನೆಗೆ ಯಡಿಯೂರಪ್ಪ ಅವರು ಶಿಫ್ಟ್ ಆಗಲು ನಿರ್ಧರಿಸಿದ್ದಾರೆ .