ಮೈಸೂರಿನಲ್ಲಿ ಹುಣಸೂರು ಶಾಸಕ ಹೆಚ್ ವಿಶ್ವನಾಥ್ ಸುದ್ದಿಗಾರರ ಜೊತೆ ಮಾತನಾಡಿದರು. ಸಿಎಂ ಒಬ್ಬರು ಹಳ್ಳಿಗಳಿಗೆ ಬರುತ್ತಿರುವಾಗ ಸ್ವಾಗತ ಮಾಡಬೇಕು. ಅದನ್ನ ಬಿಟ್ಟು ಸುಮ್ಮನೆ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.
ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಅಡ್ಡಿಪಡಿಸಿದ್ದು ತಪ್ಪು, ರೀತಿ ಅಡ್ಡಿಪಡಿಸಬಾರದು. ಬಿಜೆಪಿಯವರ ಈ ನಡೆ ಸರಿಯಲ್ಲ ಎಂದು ಹೆಚ್, ವಿಶ್ವನಾಥ್ ಹೇಳಿದ್ದಾರೆ, ಸಿಎಂ ಮೋದಿಗೆ ಓಟು ಹಾಕಿ ಸಮಸ್ಯೆ ನಮಗೆ ಹೇಳ್ತಿರಾ ಎಂದು ಬೇಸರಗೊಂಡು ಆ ರೀತಿ ಹೇಳಿಕೆ ಕೊಟ್ಟಿದ್ದಾರೆ.