ಸೆಟ್ಟೇರಿತು ರಮೇಶ್ ಅರವಿಂದ್-ಗಣೇಶ್ ಹೊಸ ಸಿನಿಮಾ… !

Date:

ಕನ್ನಡ ಚಿತ್ರರಂಗದ ತ್ಯಾಗರಾಜರು ಅಂತಾನೇ ಖ್ಯಾತಿ ಪಡೆದಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಹೊಸ ಸಿನಿಮಾ ಸೆಟ್ಟೇರಿದೆ. ಗೌರಿ ಹಬ್ಬದ ಶುಭ ದಿನವಾದ ಇಂದು ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿಂದು ಮುಹೂರ್ತ ನೆರವೇರಿದೆ. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ.


ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your’s sincerely ರಾಮ್ ಎಂಬ ಕ್ಲಾಸ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ.

ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ. ಇದು ನಿಮ್ಮ ಮೊದಲ ಪಯಣ. ಸತ್ಯ ವಿಖ್ಯಾತ್.ಇಬ್ಬರಲ್ಲಿ ಬಹಳ ಉತ್ಸವವಿದೆ. ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಗೌರಿ ಹಬ್ಬದ ದಿನ your’s sincerely ರಾಮ್. ಗಣೇಶ್ ಹಬ್ಬದ ದಿನ ರಾಮ್ ನೆನಪು ಮಾಡಿಕೊಂಡಿದ್ದೇವೆ. ಚಿಕ್ಕ ಗ್ಲಿಂಪ್ಸ್ ನೋಡಿದಿರಿ. ಇಬ್ಬರ ನಡುವಿನ ಸಂಬಂಧ. ಬೇರೆ ರೀತಿ ಫೀಲ್, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ಸೀನ್, ಸ್ಕ್ರೀನ್ ಪ್ಲೇ ಎಕ್ಸ್ ಪಿರಿಯನ್ಸ್ ಆಗಿರುತ್ತದೆ. ಬಹಳ ಖುಷಿ ಇದೆ. ರಮೇಶ್ ಸರ್ ಜೊತೆ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅದ್ಭುತ ನಟ, ಟೆಕ್ನಿಷಿಯನ್ ರಮೇಶ್ ಸರ್. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿ ಎಂದರು.

 

ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ‌ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...