ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿಜಕ್ಕೂ ಕನ್ನಡದ ಆಸ್ತಿ. ಕನ್ನಡದ ಮಾಣಿಕ್ಯ, ರನ್ನ ಎಂದು ಸುದೀಪ್ ಅವರನ್ನು ಪ್ರೀತಿಯಿಂದ ಕರೆಯುವುದು, ಗರ್ವದಿಂದ ಕರೆಯುವುದು ನಿಜಕ್ಕೂ ಸೂಕ್ತ. ಸುದೀಪ್ ಸ್ಪರ್ಶ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಹಾಲುಗೆನ್ನೆಯ ಹುಡುಗ ಸುದೀಪ್ ಮಾಸ್ ಹಿರೋ ಆಗಿ ಬೆಳೆದಿದ್ದು ಇತಿಹಾಸವೇ ಬಿಡಿ. ಸುದೀಪ್ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇವತ್ತು ಬಾಲಿವುಡ್, ಟಾಲಿವುಡ್ನಲ್ಲೂ ಬಹು ಬೇಡಿಕೆಯನ್ನು ಹೊಂದಿದ್ದಾರೆನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ.
ಸುದೀಪ್ ಅವರ ಪೈಲ್ವಾನ್ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ ಅವರ ಅಭಿಮಾನಿಗಳಿಗೆ ಮತ್ತೊಂದು ಸ್ವೀಟ್ ನ್ಯೂಸ್ ಬಂದಿದೆ. ಎಲ್ಲರಿಗೂ ತಿಳಿದಿರುವಂತೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲೂ ಬರಲಿದೆ ಎನ್ನುವುದು ಕನ್ಫರ್ಮ್ ಆಗಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇಂದು ಈ ಎಲ್ಲಾ ಭಾಷೆಗಳ ಟೀಸರ್ ರಿಲೀಸ್ ಆಗಿದ್ದು ಸುದೀಪ್ ದರ್ಶನ ಪಡೆದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸಿನಿಮಾ ಅಕ್ಟೋಬರ್ 2ರಂದು ತೆರೆ ಕಾಣಲಿದೆ ಎಂದು ಟೀಸರ್ನ ಕೊನೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ ಎಂದೂ ಕೂಡ ಅಲ್ಲಿ ತಿಳಿಸಿದ್ದಾರೆ. ಹೀಗಾಗಿ ಸಿನಿಮಾ ಕನ್ನಡದಲ್ಲೂ ಬರುವುದು ಖಚಿತವಾಗಿದೆ.
ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಸಿನಿಮಾ ರಿಲೀಸ್ ಆಗಲಿದ್ದು, ಅಕ್ಟೋಬರ್ 2ಕ್ಕೆ ಸೈರಾ ರಿಲೀಸ್ ಆಗುವುದರಿಂದ ಸುದೀಪ್ ಅಭಿಮಾನಿಗಳಿಗೆ ಭಾರಿ ಹಬ್ಬ.
ಸೈರಾ ನರಸಿಂಹ ರೆಡ್ಡಿ ಕನ್ನಡದಲ್ಲಿ ಬರುವುದು ಕನ್ಫರ್ಮ್…ಸುದೀಪ್ ಫ್ಯಾನ್ಸ್ಗೆ ಹಬ್ಬ..!
Date: