ತಂತ್ರಜ್ಞಾನ ಎಷ್ಟರ ಮಟ್ಟಿಗೆ ಮುಂದುವರಿಯುತ್ತಿದೆಯೋ ಅಷ್ಟರಮಟ್ಟಿಗೆ ಅನನುಕೂಲಗಳು ಸಹ ಅದರ ಜೊತೆಯಲ್ಲಿಯೇ ಬೆಳೆಯುತ್ತಿವೆ. ಉಪಯೋಗವಾಗಲಿ ಎಂದು ಹೊಸ ಹೊಸ ಅನ್ವೇಷಣೆಯನ್ನು ಮಾಡುತ್ತಿದ್ದರೆ ಅದರ ಜೊತೆಗೆ ದುರ್ಬಳಕೆ ಸಹ ಉಚಿತವಾಗಿ ಬಂದುಬಿಡುತ್ತದೆ. ಹೌದು ಹೊಸ ಹೊಸ ಅಪ್ಲಿಕೇಷನ್ ಗಳನ್ನು ಕಂಡು ಹಿಡಿದು ಜನರು ಸಂಪರ್ಕ ಕಲ್ಪಿಸಿಕೊಳ್ಳಲು ಅಂತ ಅನ್ವೇಷಣೆಗಳನ್ನು ಮಾಡುತ್ತಿದ್ದರೆ ಹ್ಯಾಕಿಂಗ್ ಎನ್ನುವ ಕುತಂತ್ರದಿಂದ ಈ ಅಪ್ಲಿಕೇಷನ್ ಗಳ ದುರ್ಬಳಕೆ ಹೆಚ್ಚಾಗುತ್ತಿದೆ.
ಅದರಲ್ಲಿಯೂ ಸೆಲೆಬ್ರಿಟಿಗಳ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ಗಳನ್ನು ಹ್ಯಾಕ್ ಮಾಡಲಾಗುತ್ತಿತ್ತು ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಹ್ಯಾಕರ್ ಗಳು ನಟಿಯೊಬ್ಬಳ ವಾಟ್ಸಪ್ ಅನ್ನೇ ಹ್ಯಾಕ್ ಮಾಡಿಬಿಟ್ಟಿದ್ದಾರೆ. ಹೌದು ತೇಜಸ್ವಿ ಪ್ರಕಾಶ್ ಎಂಬ ನಟಿಯ ವಾಟ್ಸಾಪ್ ಅನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದು ಇದರಿಂದ ಆಕೆಯ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಜನರಿಗೆ ಅಶ್ಲೀಲ ವಿಡಿಯೋ ಮತ್ತು ಪ್ರೀತಿಯ ಸಂದೇಶಗಳ ಕಳುಹಿಸಲಾಗುತ್ತಿದೆಯಂತೆ. ಇನ್ನು ಈ ವಿಷಯ ಗೊತ್ತಾದ ನಂತರ ತೇಜಸ್ವಿ ಪ್ರಕಾಶ್ ಅವರು ಪೊಲೀಸರಿಗೆ ದೂರನ್ನು ನೀಡಿದ್ದು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.