ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

Date:

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ದಸರಾ, ದೀಪಾವಳಿ, ಕಾರ್ತಿಕ ಮಾಸ, ಅಯ್ಯಪ್ಪ ದೀಕ್ಷೆ ಮುಂತಾದ ಹಬ್ಬಗಳಲ್ಲಿ ಹೂವುಗಳ ಬಳಕೆ ಅತಿ ಹೆಚ್ಚು. ಆದರೆ ಬಳಕೆಯ ನಂತರ ಅವು ತ್ಯಾಜ್ಯವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಹೂವುಗಳನ್ನು ಮರುಬಳಕೆ ಮಾಡಿ ಹೊಸ ರೂಪ ನೀಡಲಾಗುತ್ತಿದೆ. ಇದು ಆದಾಯದ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿಯೂ ಸಹಾಯಕವಾಗಿದೆ.

ಗೊಬ್ಬರ ತಯಾರಿಕೆ – ಹೂವನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಬೇರ್ಪಡಿಸಿದ ಬಳಿಕ ಅಡುಗೆ ತ್ಯಾಜ್ಯದೊಂದಿಗೆ ಕಾಂಪೋಸ್ಟ್‌ಗೆ ಸೇರಿಸಿದರೆ ಪೋಷಕಾಂಶಭರಿತ ಗೊಬ್ಬರ ಸಿದ್ಧವಾಗುತ್ತದೆ.

ಆಚರಣೆಗಳಲ್ಲಿ ಬಳಕೆ – ಪ್ಲಾಸ್ಟಿಕ್ ಮತ್ತು ಕಾಗದದ ಬದಲು ಹೂವನ್ನು ಬಳಸುವುದರಿಂದ ಪರಿಸರ ಸ್ನೇಹಿ ಆಚರಣೆ ಸಾಧ್ಯ.

ಅಲಂಕಾರಿಕ ಕಾಗದ – ಒಣಗಿದ ಹೂವನ್ನು ಕಾಗದದ ತಿರುಳಿಗೆ ಬೆರೆಸಿ ಸುಂದರ ಅಲಂಕಾರಿಕ ಕಾಗದ ತಯಾರಿಸಬಹುದು.

ನೈಸರ್ಗಿಕ ಕೀಟನಾಶಕ – ಚೆಂಡು, ಕ್ಯಾಮೊಮೈಲ್ ಹೂವನ್ನು ಕುದಿಸಿ ತಣ್ಣಗಾದ ನೀರನ್ನು ಸಿಂಪಡಿಸಿದರೆ ಕೀಟಗಳನ್ನು ದೂರ ಮಾಡಬಹುದು.

ನೈಸರ್ಗಿಕ ಬಣ್ಣಗಳು – ಹೂವನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಬಟ್ಟೆ, ಕಾಗದ, ಚಿತ್ರಕಲೆಗಳಿಗೆ ಬಣ್ಣಗಳನ್ನು ತಯಾರಿಸಬಹುದು.

ಮನೆ ಅಲಂಕಾರ – ಒಣಗಿದ ಹೂದಳಗಳನ್ನು ಗಾಜಿನ ಬಾಟಲಿಯಲ್ಲಿ ನೀರಿನೊಂದಿಗೆ ಇಟ್ಟರೆ ಮನೆಯಲ್ಲಿ ಪರಿಮಳ ಮತ್ತು ಆಕರ್ಷಕ ವಾತಾವರಣ ಸೃಷ್ಟಿಯಾಗುತ್ತದೆ.

ಮಾಲೆಗಳು – ಒಣಗಿದ ಹೂದಳಗಳಿಂದ ಮಾಡಿದ ಮಾಲೆಗಳು ಹಬ್ಬವನ್ನು ಹೆಚ್ಚು ದಿನ ಬಾಳಿಕೆ ಬರುವಂತೆ ಮಾಡುತ್ತವೆ.

ಹೀಗೆ ಹೂವನ್ನು ಮರುಬಳಕೆ ಮಾಡುವುದರಿಂದ ತ್ಯಾಜ್ಯ ಕಡಿಮೆ, ಪರಿಸರ ಸ್ನೇಹಿ ಹಬ್ಬ ಹಾಗೂ ಹೊಸ ಆದಾಯದ ಮಾರ್ಗಗಳು ಸಾದ್ಯವಾಗುತ್ತವೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...