ಇಂದು ಇಡೀ ದೇಶ ಕಾಯುತ್ತಿದ್ದ ಅಯೋಧ್ಯೆ ತೀರ್ಪನ್ನು ಸುಪ್ರೀಂ ಕೋರ್ಟ್ ಹೊರಹಾಕಿದ್ದ. ಶತಮಾನದ ತೀರ್ಪು ಎಂದೇ ಹೆಸರನ್ನು ಪಡೆದುಕೊಂಡಿದ್ದ ಅಯೋಧ್ಯೆ ತೀರ್ಪು ಇಂದು ಹೊರಬಿದ್ದಿದ್ದು ರಾಮ ಲಲ್ಲಾಗೆ ಅಯೋಧ್ಯೆಯ 2.77 ಎಕರೆ ಜಾಗದ ಮೇಲೆ ಸಂಪೂರ್ಣ ಹಕ್ಕು ಇದೆ ಎಂದು ತೀರ್ಪನ್ನು ಹೊರಡಿಸಲಾಗಿದೆ. ಅದು ಅಯೋಧ್ಯೆಯಲ್ಲಿನ ಈ ಒಂದು ಜಾಗ ಮುಸ್ಲಿಮರಿಗೆ ಸೇರಬೇಕು ಎಂದು ಮುಸ್ಲಿಮರು ವಾದ ಮಾಡಿದರೆ , ಇಲ್ಲ ಇದು ಹಿಂದೂಗಳಿಗೆ ಸೇರಬೇಕು ಎಂದು ಹಿಂದೂಗಳು ವಾದ ಮಾಡುತ್ತಿದ್ದರು.
ಇನ್ನು ಈ ಜಾಗ ಯಾರಿಗೆ ಸೇರಬೇಕು ಎಂಬುದರ ಕುರಿತು ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಹೊರಡಿಸಿದ್ದು ಆ ಜಾಗ ಹಿಂದೂಗಳಿಗೆ ಸೇರಬೇಕು ಎಂದು ತೀರ್ಪನ್ನು ನೀಡಿದೆ. ಇನ್ನು ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿಯೇ ಪ್ರತ್ಯೇಕ ಐದು ಎಕರೆ ಜಮೀನನ್ನು ಸಹ ಕೊಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ. ಈ ಮೂಲಕ ಹಿಂದೂಗಳಿಗೆ 2.77 ಎಕರೆ ಜಾಗ ದೊರೆತಿದ್ದು ಮುಸ್ಲಿಮರಿಗೆ ಬೇರೆ ಐದು ಎಕರೆ ಜಾಗ ಸಿಕ್ಕಿದೆ.