ಹೀಗೆಲ್ಲಾ ದುಡ್ಡು ಮಾಡ್ಬಹುದು..! ನೀವೇಕೆ ಟ್ರೈ ಮಾಡ್ಬಾರ್ದು?

0
884

ದುಡ್ಡು ಮಾಡೋದು ಹೆಂಗಪ್ಪಾ..! ಅನ್ನೋ ಚಿಂತೆ ಇಲ್ದೆ ಇರೋರು ಇದ್ದಾರೆಯೇ..? ದುಡ್ಡು ಇಲ್ಲದವನಿಗೂ ದುಡ್ಡು ಮಾಡೋ ಚಿಂತೆ.. ದುಡ್ಡು ಇದ್ದವನಿಗೆ ದುಡ್ಡನ್ನು ದುಪ್ಪಟ್ಟು ಮಾಡೋ ಚಿಂತೆ..! ಒಟ್ನಲ್ಲಿ ದುಡ್ಡಿನ ಚಿಂತೆ ಇಲ್ದೇ ಇರೋ ಜನರೇ ಇಲ್ಲ..! ದುಡ್ಡಿದ್ದವನೇ ದೊಡ್ಡಪ್ಪ..! ಸೋ, ನೀವು ಏನ್ ಮಾಡ್ತೀರೋ, ಬಿಡ್ತೀರೋ ದುಡ್ ಮಾತ್ರ ಮಾಡಿ..! ಹೆಂಗಪ್ಪಾ ದುಡ್ ಮಾಡೋದು ಅಂತ ತಲೆ ಕೆರೆದು ಕೊಳ್ತಾ ಇದ್ದೀರಾ..? ವೆರಿ ವೆರಿ ಸಿಂಪಲ್..! ಬಟ್ ಸ್ವಲ್ಪ ಮನಸ್ಸು ಮಾಡ್ಬೇಕು.. ಸ್ವಲ್ಪ ಪ್ರಯತ್ನನೂ ಪಡ್ಬೇಕು..! ನೀವು ಪ್ರಯತ್ನಪಡ್ತೀರಾ.., ದುಡ್ ಮಾಡ್ಕೊಳ್ತೀರ.., ನಿಮಗೆ ಒಳ್ಳೆಯದಾಗ್ಲಿ.., ನೀವು ಸಿಕ್ಕಾಪಟ್ಟೆ ದುಡ್ಡು ಮಾಡುವಂತಾಗಲಿ ಎಂಬ ಉದ್ದೇಶದಿಂದ ನಾವು ನಿಮಗೆ ಇವತ್ತು “ದುಡ್ಡು ಮಾಡೋದು ಹೇಗೆಂದು ತಿಳಿಸ್ತೀವಿ..! ದುಡ್ಡು ಮಾಡೋಕೆ ಸಿಕ್ಕಾಪಟ್ಟೆ ದಾರಿಗಳಿವೆ..! (ಅಡ್ಡದಾರಿ ಅಲ್ಲ ಗುರೂ..,)

1 ಫ್ರೀ ಲ್ಯಾನ್ಸ್ :
ಇವತ್ತು ಬೇಜಾನ್ ದುಡ್ಡು ಮಾಡ್ಬೇಕು ಅಂದ್ರೆ ನೀವು “ಫ್ರೀ ಲ್ಯಾನ್ಸರ್” ಆಗ್ಬೇಕು..! ನೀವು ಫ್ರೀ ಲ್ಯಾನ್ಸರ್ ಆಗಿ ಆರಂಭದಲ್ಲಿ ಸ್ವಲ್ಪ ಪ್ರಯತ್ನಪಟ್ಟರೆ,  ಮುಂದೆ ನೀವು ಫುಲ್ ಟೈಮ್ ವರ್ಕ್ ಗಿಂತ ತುಂಬಾ ಬ್ಯುಸಿ ಆಗ್ತೀರ..! ತುಂಬಾ ಬ್ಯುಸಿ ಆಗೋದ್ರಿಂದ ದುಡ್ಡು ಕೂಡ ನಿಮ್ಮ ಅಕೌಂಟ್ ಗೆ ಬಂದು ಬಿಳ್ತಾನೆ ಇರುತ್ತೆ..! ನಿಮ್ಮಲ್ಲಿ ಸ್ಕಿಲ್( ಕೌಶಲ್ಯ) ಇದ್ದೀದ್ದೇ ಆದ್ರೆ ಖಂಡಿತ ಫ್ರೀ ಲ್ಯಾನ್ಸಿಂಗ್ ಅಥವಾ ಹವ್ಯಾಸಿ ಕೆಲಸದಿಂದ ಬೇಜಾನ್ ದುಡ್ಡು ಮಾಡ್ಬಹುದು..! LinkedIn ಇದೊಂದು ಬ್ಯಸ್ನೆಸ್ ಒರಿಯನ್ಟೆಡ್ ಸೋಶಿಯಲ್ ನೆಟ್ ವರ್ಕ್..! ಇದರಲ್ಲಿ ನೀವು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುವುರಿಂದ ನಿಮಗೆ ಹೆಚ್ಚು ಹೆಚ್ಚು ಕಾಂಟೆಕ್ಟ್ ಬೆಳೆಯುತ್ತೆ..! ನೀವು ನಿಮ್ಮ ಕೌಶಲ್ಯಕ್ಕೆ ಅನುಗುಣವಾದ ಕೆಲಸ ಮಾಡಿ ದುಡ್ಡನ್ನು ಮಾಡಲು ಇದು ನೆರವಾಗುತ್ತೆ..! Mediabistro ಎಂಬ ಪತ್ರಿಕೋದ್ಯಮ ಸೈಟ್ ಇದೆ..! ಇದರಲ್ಲೂ ಫ್ರೀಲ್ಯಾನ್ಸ್ ಗೆ ಬಹಳಷ್ಟು ಅವಕಾಶವಿದೆ..! ಇದರಲ್ಲಿ ನಿಮ್ಮ ಅನುಭವ(ಎಕ್ಸಿಪಿರಿಯನ್ಸ್) ಒಳಗೊಂಡ ಪ್ರೊಫೈಲ್ ಅಪ್ ಲೋಡ್ ಮಾಡಿದ್ರೆ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ..! ನೀವು ಅತ್ಯುತ್ತಮ ವಿನ್ಯಾಸಗಾರರಾಗಿದ್ದರೆ 99Designs.com ಅಥವಾ Threadless ಸೈಟ್ ಗಳಿಗೆ ನಿಮ್ಮ ವಿನ್ಯಾಸವನ್ನು ಪೋಸ್ಟ್ ಮಾಡೋ ಮೂಲಕ ಹಣಗಳಿಸಲೂ ಅವಕಾಶವಿದೆ..!

  1. ಬ್ಲಾಗ್ :
    ಇಂದು ಬ್ಲಾಗ್ ಪತ್ರಿಕೋದ್ಯಮ ಬೆಳೆಯುತ್ತಿದೆ..! ನೀವು ನಿಮ್ಮದೇ ಆದ ಬ್ಲಾಗ್ ಮೂಲಕ.. ಉತ್ತಮ ಬರಹದೊಂದಿಗೆ ದುಡ್ಡನ್ನು ಮಾಡ್ಬಹುದು..! ನೀವು ನಿಮಗೆ ತೋಚಿದ್ದನ್ನು ಬ್ಲಾಗ್ ಗೋಡೆಯ ಮೇಲೆ ಗೀಚಿದರೂ ದುಡ್ಡು ಬರುತ್ತೆ..! ಆ ಬ್ಲಾಗ್ ನಲ್ಲಿ ಜಾಹಿರಾತುಗಳನ್ನು ಬಿತ್ತರಿಸುವುದರಿಂದ ಹಣಗಳಿಕೆ ಸಾಧ್ಯವಾಗುತ್ತದೆ…! ಜೆ. ಮನಿ ಎಂಬಾತ ಇಧೇ ಬ್ಲಾಗ್ ನಲ್ಲಿ ಸಾಮಾನ್ಯವಾದ ಬರಹಗಳನ್ನು ಗೀಚಿತ್ತಾ..ಕೇವಲ ಏಳೇ ವರ್ಷದಲ್ಲಿ $400,000 (26144180.00 Indian Rupee) ರಷ್ಟುಗಳಿಕೆ ಮಾಡಿದ್ದಾರೆ..! ಅದೇರೀತಿ ಪ್ಯಾಟ್ ಫೈನ್ ಎಂಬಾತ 3ಮಿಲಿಯನ್ ನಷ್ಟು  (19598985.00 Indian Rupee) ದುಡ್ಡು ಮಾಡಿಕೊಂಡಿದ್ದಾನೆ..! ಸಾರ್ ಇವರಂತೆ ನೀವೂ ದುಡ್ಡು ಮಾಡಿ..! ನೀವು ಯಾವುದೇ ಕೆಲಸ ಮಾಡ್ತಾ ಇರಿ.. ಆದ್ರೆ ಅದರ ಜೊತೆ ಜೊತೆಗೇನೇ ನಿಮ್ಮ ಬ್ಲಾಗ್ ನಲ್ಲಿ ಆ್ಯಕ್ಟಿವ್ ಆಗಿರೋ ಮೂಲಕ ಕೂಡ ದುಡ್ಡು ಮಾಡಿ..!

3.ಆ್ಯಡ್ ಫ್ಲೈ :
adf.ly ಇದೊಂದು ಲಿಂಕ್ ಶೇರಿಂಗ್ ಆ್ಯಡ್ ಕಂಪನಿ..! ಇದಕ್ಕೆ ನೀವು ಜಾಯಿನ್ ಆದ್ರೆ ನಿಮಗೆ ಲಿಂಕ್ ಗಳನ್ನು ಕಳುಹಿಸ್ತಾ ಇರ್ತಾರೆ! ಅವರು ಕಳುಹಿಸಿದ ಲಿಂಕ್ ಗಳನ್ನು ಶೇರ್ ಮಾಡಿದ್ರೆ ನಿಮಗೆ ದುಡ್ಡನ್ನೂ ಕೊಡ್ತಾರೆ.

4. ಡ್ರೈವರ್ :
ನೀವು ಡ್ರೈವರ್ ಆಗಿಯೂ ಬೇಜಾನ್ ದುಡ್ಡು ಮಾಡಲು ಸಾಧ್ಯವಿದೆ..! ನೋಡಿ, ಇವತ್ತು ಖಾಸಗಿ ಕ್ಯಾಬ್ ಗಳಿಗೆ ನಗರದಲ್ಲಿ ಬೇಡಿಕೆ ಇದೆ..! ನೀವು ಈ ಕ್ಯಾಬ್ ಗಳಿಗೆ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ರೆ ಕೈತುಂಬಾ ಸಂಬಳ + ಕೆಲವೊಮ್ಮೆ ಹಂಗೂ ಹಿಂಗೂ ಒಂದಷ್ಟು ದುಡ್ಡನ್ನು ಮಾಡಿಕೊಳ್ಳಲೂ ಬಹುದು..! ನಿಮ್ಮದೇ ಆದ ಕ್ಯಾಬ್ ಅನ್ನು ಮಾಡಿಕೊಂಡರೂ ದುಡ್ಡೋ ದುಡ್ಡೋ..!


5. ಬೇಬಿ ಸಿಟ್ಟರ್ :
ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ..! ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಅಜ್ಜ-ಅಜ್ಜಿಯೂ ಇಲ್ಲ..! ಆದ್ರಿಂದ ಬೇಬಿ ಸಿಟ್ಟರ್ ಗಳಿಗೆ ಭಾರಿ ಬೇಡಿಕೆ ಇದೆ..! ಮಕ್ಕಳ ಜೊತೆ ಕಾಲ ಕಳೆದಂಗೂ ಆಗುತ್ತೆ..! ದುಡ್ಡು ಮಾಡಿದಂಗೂ ಆಗುತ್ತೆ..! ವಾಟ್ ಆ್ಯನ್ ಐಡಿಯಾ ಸರ್.ಜಿ..! ಬೇಬಿ ಸಿಟ್ಟರ್ ಶುರುಮಾಡಿ ದುಡ್ಡು ಮಾಡ್ಕೊಳ್ಳಿ..

6. ಫೋಟೋಗ್ರಫಿ ಮತ್ತು ಹಾಡು :
ಮದುವೆ ಮುಂತಾದ ಸಮಾರಂಭಗಳಿಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಿಕೊಡುವ ಮೂಲಕವೂ ದುಡ್ಡನ್ನು ಮಾಡ್ಬಹುದು..! ಅಷ್ಟೇ ಅಲ್ಲ ಮದುವೆಯಲ್ಲಿ ಹಾಡು ಹೇಳಿ ದುಡ್ಡನ್ನು ಸಂಪಾದಿಸುವ ವರು ಇದ್ದಾರೆ..! ನೀವೂ ಯಾಕೆ ಟ್ರೈ ಮಾಡ್ಬಾರ್ದು..!

7ಸಾಫ್ಟ್ ವೇರ್ ವಿಮರ್ಶೆ :
ಇದು ಮಾಹಿತಿ ತಂತ್ರಜ್ಞಾನ ಯುಗ..! ಎಲ್ಲಾ ಕೆಲಸವಾಗುವುದು ಸಾಫ್ಟ್ ವೇರ್ ಮೂಲಕವೇ…! ಇಂತಹ ಸಾಫ್ಟ್ ವೇರ್ಸ್ ಬಗ್ಗೆ ತಿಳಿಯುವ ಕುತೂಹಲ ಜನರಿಗಿರುತ್ತೆ, ಆ ಸಾಫ್ಟ್ ವೇರ್ ಕಂಪನಿಗಳಿಗೆ ಫೀಡ್ ಬ್ಯಾಕ್ ಅಗತ್ಯ ಇರುತ್ತೆ..! ಆದ್ದರಿಂದ ನೀವು ಸಾಫ್ಟ್ ವೇರ್ ವಿಮರ್ಶೆ ಬರೆಯುವ ಮೂಲಕವೂ ದುಡ್ಡು ಮಾಡ್ಬಹುದು..! SoftwareJudge.com ಒರಿಜನಲ್ ರಿವ್ಯೂ ಗೆ ದುಡ್ಡು ಕೊಡುತ್ತೆ..!

8 ಟೂರಿಸ್ಟ್ ಗೈಡ್ :
ನಿಮಗೆ ನಿಮ್ಮ ಸ್ಥಳೀಯ ಪ್ರವಾಸಿತಾಣಗಳ ಪರಿಚಯವಿದ್ದರೆ, ಅಲ್ಲಿನ ಸಂಸ್ಕೃತಿ, ಕಲೆ, ಸಂಪ್ರದಾಯದ ಪರಿಚಯ ನಿಮಗಿದ್ದರೆ ಆರಾಮಾಗಿ ದುಡ್ಡು ಮಾಡ್ಬಹುದು..! ಕೆಲವು ಪ್ರವಾಸಿಗರು ನಿಮಗೆ ಆ ಪ್ರವಾಸಿತಾಣದ ಬಗ್ಗೆ ಮಾಹಿತಿ ನೀಡಲು ದುಡ್ಡು ಕೊಟ್ಟು ಕರೆಯುತ್ತಾರೆ..! ಮತ್ತೆ ಕೆಲವರು ಫೊಟೋಗ್ರಫಿಗಾಗಿಯೂ ನಿಮ್ಮನ್ನು ಕರೆಸಿಕೊಂಡು ನಿಮಗೆ ದುಡ್ಡು ನೀಡ್ತಾರೆ..!

9ವಿತರಕ ಅಥವಾ ಡೆಲುವರಿ ಪರ್ಸನ್ :
ನಗರ ಪ್ರದೇಶಗಳಲ್ಲಿ ಮನೆಮನೆಗೆ ಸರಕುಗಳನ್ನು ವಿತರಿಸುವ ಕೆಲಸಗಾರರಿಗೂ ಭಾರೀ ಬೇಡಿಕೆ ಇದೆ..! ಕೆಲವು ರೆಸ್ಟೋರೆಂಟ್ ಗಳಲ್ಲಿಯೂ ಕೆಲಸಕ್ಕೆ ನೀವು ಟ್ರೈ ಮಾಡ್ಬಹುದು..! ಅಥವಾ ಫೋಸ್ಟ್ ಮೇಟ್ಸ್ ನಂತಹ ಸರ್ವೀಸ್ ಗಳಲ್ಲಿಯೂ ಅವಕಾಶವಿದೆ..!

10. ಫೋಟೋ ಪೋಸ್ಟ್ ಮಾಡಿ ಹಣ ಮಾಡಿ ..! :
ನೀವೊಬ್ಬ ಒಳ್ಳೆಯ ಛಾಯಗ್ರಾಹಕ(ಫೋಟೋಗ್ರಾಫರ್) ಆಗಿದ್ದರೆ ಒಳ್ಳೆಯ ಫೋಟೋಗಳನ್ನು Shutterstock, Photoshelter, Fotolia, DreamsTime and/or iStock. ನಂತಹ ಆನ್ ಲೈನ್ ಸೈಟ್ ಗಳಿಗೆ ನೀಡಿದರೆ ಹಣಗಳಿಕೆ ಸಾಧ್ಯವಿದೆ..!

11. ಆನ್ ಲೈನ್ ಹುಡುಕಾಟ :
Qmee. ಆನ್ ಲೈನನಲ್ಲಿ ಹುಡುಕಾಟ ನಡೆಸುವುದರಿಂದಲೂ ದುಡ್ಡು ಮಾಡ್ಬಹುದು..! ಬಾರಿ ಸುಲಭ ಅಲ್ವೇನ್ರೀ..! ಕ್ಯೂಮಿ ತರಹದ ವೆಬ್ ಸೈಟ್ ಗಳಲ್ಲಿ ಹೀಗೆ ಹಣ ಮಾಡ್ಬಹುದಂತೆ..!

12. ಕೋಚಿಂಗ್ :
ನೀವು ಯಾವುದಾದರೂ ಕ್ಷೇತ್ರದಲ್ಲಿ ಪರಿಣಿತರಾಗಿದ್ದೀರಿಯೇ..? ಹಾಗಾದ್ರೆ ದುಡ್ ಮಾಡೋಕೆ ಯಾಕ್ರೀ ತಲೆ ಕೆಡಿಸಿಕೊಳ್ತಾ ಇದ್ದೀರಿ..! ನೀವು ಪರಿಣಿತರಾಗಿರೋ ಕ್ಷೇತ್ರದ ಬಗ್ಗೆ ಕೋಚಿಂಗ್ ಕೊಡ್ರೀ..! ಆ ಮೂಲಕ ಹಣಗಳಿಸ್ರಿ..!

13. ಆನ್ ಲೈನ್ ಟೀಚಿಂಗ್ :
ನಿಮಗಿಂತ ಕಡಿಮೆ ಜ್ಞಾನ ಇರೋರಿಗೆ ಪಾಠ ಮಾಡಿ ದುಡ್ಡು ಮಾಡ್ಬಹುದು..! ನೀವು “ಕಲ್ಪನಾ”ದಂತಹ ಸಂಸ್ಥೆಯೊಡನೆ ಸೇರಿ ಉಪಗ್ರಹ ಮೂಲಕ ಆಲ್ ಲೈನ್ ನಲ್ಲಿಯೇ ಪಾಠ ಮಾಡಿ ಕೂತಲ್ಲೇ ದುಡ್ಡು ಮಾಡ್ಬಹುದು..! ನಿಮ್ಮದೇ ಆದ ಆನ್ ಲೈನ್ ಕೋಚಿಂಗ್ ಕಂಪನಿಯನ್ನು ಸಣ್ಣದಾಗಿಯೇ ಹುಟ್ಟು ಹಾಕುವ ಮೂಲಕವೂ ದುಡ್ಡೇ ನಿಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡ್ಬಹುದು..! ಅಷ್ಟೇ ಅಲ್ದೆ.. Udemy or Skillshare. ನಂತಹ ಆನ್ ಲೈನ್ ಕೋಚಿಂಗ್ ಕ್ಲಾಸ್ ಗಳಲ್ಲಿ ಟೈಮ್ ಸಿಕ್ಕಾಗ ಪಾಠ ಮಾಡೋ ಮೂಲಕವೂ ದುಡ್ಡು ಮಾಡಲು ಸಾಧ್ಯವಿದೆ..!

ಹೀಗೆ ದುಡ್ಡು ಮಾಡೋಕೆ ಅನೇಕ ಒಳ್ಳೆಯ, ಸುಲಭದ ದಾರಿಗಳಿವೆ..! ಯಾವ ದಾರಿ ಆಯ್ಕೆ ಮಾಡಿಕೊಂಡ್ರೂ ದುಡ್ಡು ಮಾಡ್ಬಹುದು..! ಇನ್ನೂ ಕೇಳ್ಬೇಕು ಅಂದ್ರೆ ನೀವುಗಳು ಈಗ ಏನ್ ಕೆಲಸ ಮಾಡ್ತಾ ಇದ್ದೀರೋ ಆ ಕೆಲಸವನ್ನು ಮಾಡ್ತಾ ಮಾಡ್ತಾನೇ ನಾವು ಹೇಳಿದ ದುಡ್ಡಿನ ದಾರಿಯನ್ನೂ ಫಾಲೋ ಮಾಡಿದ್ರೆ…, ಅಂದ್ರೆ ಇದನ್ನು ಪಾರ್ಟ್ ಟೈಮ್ ಆಗಿ ಈ ಕೆಲಸವನ್ನು ಮಾಡ್ತಾ ನಿಮ್ಮ ಪರ್ಮನೆಂಟ್ ಕೆಲಸವನ್ನೂ ನಿಭಾಯಿಸ್ತೀರಾ ಅಂದ್ರೆ ನಿಮಗೇ ಡಬಲ್ ಧಮಾಕ..!

LEAVE A REPLY

Please enter your comment!
Please enter your name here