ರಾಜ-ಮಹಾರಾಜ ಆಳ್ವೀಕೆ ಹೇಗಿತ್ತೋ? ಏನೋ? ನಮ್ಮಜ್ಜ, ನಮ್ ಅಪ್ಪನ ಕಾಲದವ್ರು ಕಂಡಿರೋ ಆ ವೈಭವ ಕಣ್ತುಂಬಿ ಕೊಳ್ಳೋ ಭಾಗ್ಯ ನಮಗಿಲ್ಲ.
ಅದೇನೇ ಇದ್ರು ರಾಜರಿಲ್ಲದ ಅರಮನೆಗಳನ್ನಂತೂ ನೋಡಬಹುದಲ್ಲವೇ?
ನಾವು ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇ ಬೇಕಾದ ಅರಮನೆಗಳು ಇಲ್ಲಿವೆ.
* ಮೈಸೂರು : ಮೊದಲಿಗೆ ನಮ್ ಮೈಸೂರೇ…ನಮ್ಮೂರು ನಮ್ಗೆ ಚಂದ ಅಲ್ವೇ? ನೀವು ಕೂಡ ಮೈಸೂರು ನೋಡಿರ್ತೀರಿ, ನೋಡ್ದೆ ಇದ್ರೆ ಆದಷ್ಟು ಬೇಗ ನೋಡಿ.
*ಚಿತ್ತೋರ್ ನ ಬೆಗು ಪೋರ್ಟ್ : ರಾಜ ರಾವತ್ ಸವಾಯಿ ಕಟ್ಟಿಸಿದ ಅರಮನೆ. ಇಲ್ಲಿ ನೀವು ರಾಜಮನೆತನದ ಕುಳಿತು ಊಟ ಮಾಡೋ ಸೌಲಭ್ಯ ಕೂಡ ಇಲ್ಲಿದೆ.
* ಉದಯಪುರದ ಆಶಿಯಾ ಅರಮನೆ : ಪಿನ್ ಚೊಲಾ ನದಿಯ ಪೂರ್ವ ತಟದಲ್ಲಿರುವ ಈ ಅರಮನೆಗೆ ಒಮ್ಮೆ ಮಿಸ್ ಮಾಡ್ದೆ ಹೋಗಿ.
ಬಾಳಸಿನೂರ್ ಗಾರ್ಡನ್ ಪ್ಯಾಲೇಸ್ ಹೆರಿಟೇಜ್ : ಅಹಮದಾಬಾದ್ ನಿಂದ ಸುಮಾರು 1 ಗಂಟೆ ಜರ್ನಿ ಇಲ್ಲಿಗೆ. ಬಾಳಸಿನೂರು ರಾಜಮನೆತನದ ಅರಮನೆ ಇದು.
ಜೈಪುರ್ ನ ಖಾಸ್ ಬಾಗ್ : ಜೈಪುರದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಇದು ಕೂಡ ದೇಶದ ಐತಿಹಾಸಿಕ ಅರಮನೆಗಳಲ್ಲೊಂದು.
ಕೊಚ್ಚಿನ್ ನ ರಾಯಲ್ ಹೋಮ್ ಸ್ಟೇ : ಕೊಚ್ಚಿನ್ ನ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಪ್ರಸಿದ್ಧ ಪಡೆದ ಕೊಚ್ಚಿನ್ ರಾಯಲ್ ಹೋಮ್ ಸ್ಟೇ ಗೂ ಹೋಗಿ ಬನ್ನಿ.
ಇವುಗಳಲ್ಲದೆ ಹತ್ತಾರು ಅರಮನೆಗಳಿವೆ. ಸಾಧ್ಯವಾದ್ರೆ ದೇಶದ ಸುಂದರವಾದ ಎಲ್ಲಾ ಅರಮನೆಗಳ ಪ್ರವಾಸ ಮಾಡಿ.