ಬಂಕ್ ಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಗೆ ಪೆಟ್ರೋಲ್ ತುಂಬಿಸಿಕೊಳ್ಳೋದು ತಪ್ಪು…! ಯಾಕೆ ಗೊತ್ತಾ?

0
728

ಮಾರ್ಗಮಧ್ಯದಲ್ಲಿ ಪೆಟ್ರೋಲ್ ಕಾಲಿಯಾಗಿ ನಿಮ್ಮ ಗಾಡಿ ಕೈ ಕೊಡುತ್ತೆ. ಆಗ ನೀವು ನಿಮ್ಮ ಬಳಿಯ ಕಾಲಿ ನೀರಿನ ಬಾಟಲಿಲಿ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತುಂಬಿಸಿಕೊಳ್ತೀರಿ. ಆದರೆ, ನಿಮಗೆ ಗೊತ್ತೇ? ಕಾಲಿ ನೀರಿ ಬಾಟಲಿಲಿ‌ ಪೆಟ್ರೋಲ್ ತುಂಬಿಸೋದು ತಪ್ಪು , ಅದು‌ ಕಾನೂನು ಬಾಹಿರವೂ ಹೌದು‌ .


ಯಸ್, ಆಯಿಲ್ ಮಾರ್ಕೆಟಿಂಗ್ ಕಂಪನಿ ಮಾಜಿ ಸೇಲ್ಸ್ ಎಕ್ಸಿಕ್ಯೂಟಿವ್ ಶಿವಂ ಚಾವ್ಲಾ ಅವರು ಹೇಳುವಂತೆ ಭಾರತದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ತುಂಬಿಸೋದು ಇಲೀಗಲ್ …! ಆದರೆ, 2002ರ ಪೆಟ್ರೋಲಿಯಂ ನಿಯಮಗಳ ಸೆಕ್ಷನ್ 8 ರ ಪ್ರಕಾರ ಗ್ಲಾಸ್ವೇರ್ ಅಥವಾ ಸ್ಟೋನ್ ವೇರ್ ಬಾಟಲಿಗಳಲ್ಲಿ 1 ಲೀಟರ್ ವರೆಗೆ ಹಾಗೂ ಲೋಹದ ಕ್ಯಾನ್ (ಮೆಟಲ್ ಕ್ಯಾನ್) ಗಳಲ್ಲಿ 25 ಲೀಟರ್ ವರೆಗೆ ಖರೀದಿಸಲು ಪರವಾನಗಿ (ಲೈಸೆನ್ಸ್) ಇದೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೋಲ್ ಏಕೆ ತುಂಬಿಸಬಾರದು?

1) ಪರವಾನಗಿ ಅಥವಾ ಲೈಸೆನ್ಸ್ ಮಿತಿ ಉಲ್ಲಂಘನೆ
: ಪೆಟ್ರೋಲ್ ಬಂಕ್ ಗಳು ಪಿಇಎಸ್ಒ ( PESO) (Petroleum and Explosive Safety Organization) ನಿಯಂತ್ರಣದಲ್ಲಿವೆ. ಆದ್ದರಿಂದ ಕೆಲವು ನಿಯಮಗಳನ್ನು ಪಾಲಿಸಲೇ ಬೇಕು‌.
ಈ ಮೊದಲೇ ಹೇಳಿದಂತೆ 2002ರ ಪ್ರೆಟೋಲಿಯಂ ನಿಯಮಗಳ ಪ್ರಕಾರ ಪೆಟ್ರೋಲ್ ಪಂಪ್ ಗಳಿಗೆ ಕೇವಲ ವಾಹನಗಳ ಟ್ಯಾಂಕ್ ಗಳಿಗೆ ಮಾತ್ರ ಪೆಟ್ರೋಲ್ ಫಿಲ್ ಮಾಡುವ ಲೈಸೆನ್ಸ್ ನೀಡಲಾಗಿದೆ. ಅದೇರೀತಿ ಗ್ಲಾಸ್ವೇರ್, ಸ್ಟೋನ್ ವೇರ್ ಬಾಟಲಿಗಳಿಗೆ 1 ಲೀಟರ್ ವರೆಗೆ, ಮೆಟಲ್ ಕ್ಯಾನ್ ಗಳಿಗೆ 25 ಲೀಟರ್ ತನಕ ತುಂಬ ಬಹುದು.

2) ಪ್ಲಾಸ್ಟಿಕ್ ಕರಗುತ್ತದೆ : ನಾವು ಸಾಮಾನ್ಯವಾಗಿ ಪೆಟ್ರೋಲ್ ಅನ್ನು ಬಾಟಲಿಗೆ ತುಂಬಿಸುವುದಾದರೆ ಮಿನರಲ್ ವಾಟರ್ ಬಾಟಲ್ ಗೆ ತುಂಬಿಸ್ತೀವಿ. ಈ ಬಾಟಲ್ ಗಳು ಪಾಲಿಥೈಲೀನ್ ಟೆರಫ್ತಾಲೇಟ್ (ಪಿಇಟಿ) ನಿಂದ ಮಾಡಲ್ಪಟ್ಟಿವೆ. ಇವು ಪೆಟ್ರೋಲ್ ನಲ್ಲಿ ಕರಗುತ್ತವೆ. ಪಿಇಟಿ ಬಾಟಲ್ ನಲ್ಲಿ ತುಂಬಿಸಿದಾಗ ಅದು ಕರಗಿ ಪೆಟ್ರೋಲ್ ಲೀಕ್ ಆಗುತ್ತದೆ. ಇದು ಅಪಾಯಕಾರಿ.

3) ಅಸಾಮಾಜಿಕ ಅಂಶಗಳು ಅಥವಾ ಅನ್ ಸೋಶಿಯಲ್ ಎಲಿಮೆಂಟ್ಸ್ : ಸಮಾಜದ ಶಾಂತಿ ಕದಲುವ ಘಟನೆಗಳಲ್ಲಿ ಬಳಸಲಾಗುತ್ತದೆ. ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಸಣ್ಣಪುಟ್ಟ ಬ್ಲಾಸ್ಟ್ ಮಾಡೋದು, ವಾಹನಗಳನ್ನು ಸುಡುವುದು , ಬೆಂಕಿ ಹಚ್ಚುವುದು ಮೊದಲಾದ ದುಷ್ಕೃತ್ಯಗಳಿಗೆ ಬಳಕೆ ಮಾಡಿದವುದರಿಂದ ಬಾಟಲಿಗೆ ತುಂಬಿಸುವುದಿಲ್ಲ‌.

4) ಅಪಾಯಕಾರಿಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ತಗಲುವ ಸಂಭವ ಇರುವುದರಿಂದ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್ ತುಂಬಿಸಬಾರದು.