ಹೆಚ್ಚು ಪ್ರಕಾಶಮಾನ ಹೆಡ್ ಲೈಟ್ ಹಾಕಿಸಿದ್ರೆ, RC-ಲೈಸೆನ್ಸ್ ರದ್ದು..!
ಸದ್ಯಕ್ಕಂತು ಷೋ ರೂಂನಿಂದ ವಾಹನಗಳು ಆಚೆ ಬರುತ್ತಿದ್ದ ಹಾಗೆ ಅದರ ಮೂಲ ಆಕೃತಿಯನ್ನೇ ಕಳೆದುಕೊಳ್ಳುತ್ತಿವೆ.. ಯಾಕಂದ್ರೆ ಈ ಕಾರ್ ಗಳನ್ನ ಮಾಲೀಕ ತನ್ನ ಆಸಕ್ತಿಗೆ ಅನುಗುಣವಾಗಿ ವಿಧವಿಧವಾದ ಸ್ಟಿಕರಿಂಗ್ ನಿಂದ ಹಿಡಿದು, ಲೈಟ್ ವರೆಗೂ ಎಲ್ಲವನು ಬದಲಿಸಿ, ರಿಚ್ ಹಾಗು ಸ್ಪೋರ್ಟ್ಸ್ ಲುಕ್ ನೀಡೋದು ಕಾಮನ್ ಆಗಿಬಿಟ್ಟಿದೆ.. ಅದರಲ್ಲು ಅತೀ ಹೆಚ್ಚು ಪ್ರಕಾಶಮಾನ ಹೆಡ್ ಲೈಟ್ ಗಳನ್ನ ಹಾಕಿಸುವ ಪರಿಪಾಠವು ಇದೆ.. ಇದರಿಂದ ಎದುರಾಗಿ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ.. ದಾರಿ ಕಾಣದಂತಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಪಘಾತ ಹೆಚ್ಚಾಗುತ್ತಿವೆ…
ಹೀಗಾಗೆ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಇಂತಹ ಬ್ರೈಟ್ ಲೈಟ್ ಗಳನ್ನ ಅಳವಡಿಸಿಕೊಂಡಿರುವ ವಾಹನಗಳ ಆರ್ ಸಿ ಹಾಗು ಲೈಸನ್ಸ್ ಗಳನ್ನ ಕ್ಯಾನ್ಸಲ್ ಮಾಡಲು ಮುಂದಾಗಿದೆ.. ಈ ಆದೇಶವನ್ನ ಈ ಹಿಂದೆಯೇ ಹೊರಡಿಸಲಾಗಿದ್ದು, ಜ.31 ರ ಒಳಗೆ ಈ ಬಗ್ಗೆ ವಾಹನ ಮಾಲೀಕರಿಗೆ ನೋಟೀಸ್ ನೀಡುವ ಮೂಲಕ, ಜಾಹೀರಾತುಗಳ ಮೂಲಕ, ನೂತನ ನಿಯಮದ ಬಗ್ಗೆ ತಿಳಿ ಹೇಳುವ ಪ್ರಯತ್ನವನ್ನ ಸಹ ಮಾಡಿತ್ತು..
ಅಕಸ್ಮತ್ ಈಗಲು ಈ ನಿಮಯವನ್ನ ಪಾಲಿಸಿದ ಅತೀ ಹೆಚ್ಚು ಪ್ರಕಾಶಮಾನ ಲೈಟ್ ಬಳಸುತ್ತಿದ್ರೆ, ಕಟ್ಟುನಿಟ್ಟಿನ ಕ್ರಮವನ್ನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕೇರಳ ಟ್ರಾಫಿಕ್ ಕಮಿಷನರ್ ಕೆ.ಪದ್ಮಕುಮಾರ್ ತಿಳಿಸಿದ್ದಾರೆ..