12 ಗಂಟೆ ಒಳಗೆ ರಿಟರ್ನ್ ಬಂದ್ರೆ ಟೋಲ್ ಕಟ್ಟುವ ಹಾಗಿಲ್ಲ..!!?
ಹೌದು, ಹೀಗೊಂದು ಸುದ್ದಿ ವಾಟ್ಸಪ್ ನಲ್ಲಿ ಓಡಾಡುತ್ತಿದೆ.. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ 12 ಗಂಟೆಯ ಅಂತರದಲ್ಲಿ ವಾಪಸ್ ಬಂದ್ರೆ ಟೋಲ್ ಕಟ್ಟುವ ಹಾಗಿಲ್ಲ ಎಂಬ ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಹೀಗೆಂದು ಹೇಳಿದ್ದಾರೆ ನಿತಿನ್ ಗಡ್ಕರಿ ಅನ್ನೋ ಸಂದೇಶ ಇದಾಗಿದೆ…
ನೀವು ಟೋಲ್ ಬೂತ್ ಗಳಲ್ಲಿ ಒಂದು ಕಡೆಯ ಪ್ರಯಾಣಕ್ಕೆ ಅಥವಾ ಎರಡೂ ಕಡೆಗೆ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ 12 ಗಂಟೆಗೆ ತೆರಿಗೆ ಪಾವತಿಸುತ್ತೇವೆ ಎಂದು ಹೇಳಿ.. ನೀವು 12 ಗಂಟೆ ಒಳಗೆ ಹಿಂದಿರುಗಿ ಬಂದರೆ ಯಾವುದೇ ಟೋಲ್ ಸುಂಕ ಕಟ್ಟುವಂತಿಲ್ಲ.. ಟಿಕೆಟ್ ನಲ್ಲಿಯೇ ಸಮಯ ನಮೂದಿಸಲಾಗಿರುತ್ತದೆ.. ಈ ಬಗ್ಗೆ ವಾಹನ ಸವಾರರಲ್ಲಿ ಅರಿವಿಲ್ಲದ ಕಾರಣ ಟೋಲ್ ಗಳಲ್ಲಿ ಲಕ್ಷಾಂತರ ರೂ ಸುಲಿಗೆ ಮಾಡಲಾಗುತ್ತಿದೆ.. ದಯವಿಟ್ಟು ಈ ಸಂದೇಶ ವನ್ನ ಹೆಚ್ಚಿನ ಜನರಿಗೆ ತಲುಪಿಸಿ ಎಂಬ ಸಂದೇಶ ಇದಾಗಿದೆ..
ಹಾಗಿದ್ರೆ ಇದು ಎಷ್ಟು ಸತ್ಯ ಎಂಬ ಬಗ್ಗೆ ಮಾಹಿತಿಯನ್ನ ಕಲೆಹಾಕಲಾಗಿ, ಇದು ಶುದ್ದ ಸುಳ್ಳು ಎಂಬುದು ಸಾಭೀತಾಗಿದೆ.. ಟೋಲ್ ಗಳಲ್ಲಿ ಸಿಂಗಲ್ ಜರ್ನಿ, ರಿಟರ್ನ್ ಜರ್ನಿ, ಒಂದು ದಿನ ಹಾಗು ತಿಂಗಳ ಲೆಕ್ಕದಲ್ಲಿ ಟೋಲ್ ಶುಲ್ಕವನ್ನ ಸಂಗ್ರಹಿಸುತ್ತದೆಯೇ ಹೊರತು 12 ಗಂಟೆಯ ಸಮಯಕ್ಕೆ ಶುಲ್ಕವನ್ನ ಪಡೆಯುವುದಿಲ್ಲ.. ಈ ಬಗ್ಗೆ ಎನ್ ಎಚ್ಎಇ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ವೈರಲ್ ಆಗಿರುವ ಈ ಸುದ್ದಿಯು ಸುಳ್ಳು ಅಂತ ಹೇಳಿದೆ.. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ 24 ಗಂಟೆಯೊಳಗೆ ರಿಟರ್ನ್ ಆದಲ್ಲಿ ಶೇ.66 ರಷ್ಟು ರಿಯಾಯಿತಿ ಲಭಿಸುತ್ತದೆಯಷ್ಟೆ ಎಂದು ಹೇಳಿದ್ದಾರೆ..






