15 ನಿಮಿಷದಲ್ಲಿ ಕೊರೊನಾ ಟೆಸ್ಟ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ

0
45

ನವದೆಹಲಿ: ಕೊರೊನಾ ಟೆಸ್ಟ್ ಕಳ್ಳಾಟದ ಮಧ್ಯೆ ಮತ್ತೊಂದು ಗೇಮ್ ಚೇಂಜರ್ ಬಂದಿದೆ. ಮೊನ್ನೆ ಮೊನ್ನೆಯಷ್ಟೇ ಆಕ್ಸಿಜನ್ ಮೇಲೆ ಆಧಾರಪಡಿಸುವುದನ್ನು ತಗ್ಗಿಸಲು ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2ಡಿಜಿ (2 ಡಿಯಾಕ್ಷಿ ಡಿ-ಗ್ಲೂಕೋಸ್) ಔಷದಿ ಲೋಕಾರ್ಪಣೆಯಾದ ಬೆನ್ನಲ್ಲೇ ಇದೀಗ ಹೋಂ ಟೆಸ್ಟಿಂಗ್ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ `ಕೋವಿಸೆಲ್ಫ್’ ಬಿಡುಗಡೆಯಾಗಿದೆ.

ಇದು ಪ್ರೆಗ್ನೆನ್ಸಿ ಮಾದರಿ ಹೋಂ ಕಿಟ್ ಆಗಿದ್ದರೂ, ಐಸಿಎಂಆರ್ ನೇರ ನಿಗಾ ಇಡಲಿದೆ. ಕೊರೋನಾ ವೈರಸ್ ರೋಗದ ಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸಹಾಯವಾಗುವಂಥ ಟೆಸ್ಟ್ ಕಿಟ್ ಇನ್ನೆರಡು ದಿನಗಳಲ್ಲಿ ಮೆಡಿಕಲ್ ಸ್ಟೋರ್ ಗಳಲ್ಲಿ  ಲಭ್ಯವಾಗಲಿದೆ.

ಪುಣೆಯ ಮೈಲಾಬ್ ಡಿಸ್ಕವರಿ ಸಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಹೋಂ ಟೆಸ್ಟಿಂಗ್ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ `ಕೋವಿಸೆಲ್ಫ್’ ಬಳಕೆಗೆ ಐಸಿಎಂಆರ್ ಅನುಮೋದನೆ ನೀಡಿದೆ. ಕಿಟ್ ಬಳಸಿ, 2 ನಿಮಿಷದಲ್ಲಿ ಜನರು ತಮ್ಮ ಗಂಟಲು ದ್ರವವನ್ನು ಸಂಗ್ರಹಿಸಿ, ಗರಿಷ್ಠ 15 ನಿಮಿಷಗಳಲ್ಲಿ ತಮ್ಮ ಫಲಿತಾಂಶವನ್ನು ತಾವೇ ನೋಡಿಕೊಳ್ಳಬಹುದಾಗಿದೆ.

ಸೆಲ್ಫಿ ಕೋವಿಡ್ ಟೆಸ್ಟ್ ಹೇಗೆ? 1. ಮೈ ಲ್ಯಾಬ್ ಆ್ಯಪ್ ಆ್ಯಪ್ ಅನ್ನು ಗೂಗಲ್/ ಆಪಲ್ ಪ್ಲೇ ಸ್ಟೋರ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. 2. ಆ್ಯಪ್ ಅನ್ನು ಡೌನ್‍ಲೋಡ್ ಮಾಡಿದ ಬಳಿಕ ಹೆಸರು, ಮೊಬೈಲ್ ನಂಬರ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು 3. ರಿಜಿಸ್ಟ್ರೇಷನ್ ಆದ ಬಳಿಕ ಫೋಟೋ ಅಪ್ಲೋಡ್ ಮಾಡಬೇಕು. ಆ್ಯಪ್‍ನಲ್ಲಿ ರಿಜಿಸ್ಟ್ರೇಷನ್ ಬಳಿಕ ಟೆಸ್ಟ್ ಕಿಟ್‍ನಲ್ಲಿರೋ ಫೋಟೋ ತೆಗೆದು ಕಳುಹಿಸಬೇಕು. ಅತಿ ಮುಖ್ಯವಾಗಿ ಸ್ಕ್ಯಾನಿಂಗ್ ಬಾರ್ ಕೋಡ್ ಫೋಟೋ ಕಳಿಸಬೇಕು. 4. ಟೆಸ್ಟ್ ಕಿಟ್ ಓಪನ್ ಬಳಿಕ ಟೆಸ್ಟ್ ಕಿಟ್‍ನಲ್ಲಿರುವ ಕಡ್ಡಿ ಮೂಲಕ ಮೂಗಿನಲ್ಲಿ ಇಟ್ಟು ಸ್ವಾಬ್ ತೆಗೆಯಬೇಕು. 5. ಟೆಸ್ಟ್ ಕಿಟ್ ಒಳಗಡೆ ಸ್ವಾಬ್ ಹಾಕಿ ಕಿಟ್ ಪ್ರತ್ಯೇಕವಾಗಿ ಇಡಬೇಕು. 6. ಮೂಗಿನ ಸ್ವಾಬ್ ಅನ್ನು ಕಿಟ್ ಒಳಗಡೆ ಹಾಕಿದಾಗ ಸ್ಕ್ಯಾನ್ ಮಾಡಿ ಪಾಸಿಟಿವ್ ಅಥವಾ ನೆಗೆಟಿವ್ ಅಂತ ಐಸಿಎಂಆರ್ ಗೆ ಹೋಗಲಿದೆ. 7. ಸೆಲ್ಫ್ ಟೆಸ್ಟ್ ಕಿಟ್‍ನಲ್ಲಿ ಪಾಸಿಟಿವ್ ದೃಢಪಟ್ಟರೆ ಮೈ ಲ್ಯಾಬ್ ಆ್ಯಪ್‍ನಲ್ಲಿನ ನಿಮ್ಮ ಮಾಹಿತಿ ಐಸಿಎಂಆರ್ ಗೆ  ಹೋಗಲಿದೆ. ಐಸಿಎಂಆರ್ ರಾಜ್ಯದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಿದೆ ಅಂತ ಹೇಳಲಾಗಿದೆ.

ಕಳ್ಳಾಟ ನಡೆಯಲ್ಲ: ಕೊವಿಸೆಲ್ಫ್ ಕಿಟ್‍ನಲ್ಲಿ ಸೆಲ್ಫ್ ಟೆಸ್ಟ್ ಮಾಡಿದ್ಮೇಲೆ ಟೆಸ್ಟ್ ವಿಷಯದಲ್ಲಿ ಕಳ್ಳಾಟ ನಡೆಯಲ್ಲ. ನಿಮ್ಮ ರಿಪೋರ್ಟ್ ಏನೇ ಬರಲಿ ಅದರ ಫಲಿತಾಂಶ ಮುಚ್ಚಿಡಲು ಆಗಲ್ಲ. ಯಾಕೆಂದರೆ, ನಿಮ್ಮ ರಿಪೋರ್ಟ್‍ನ ಬಾರ್ ಕೋಡ್ ಆಗಲೇಬೇಕು. ಬಾರ್ ಕೋಡ್ ಆದ ಮೇಲೆ ನೀವು ಎಲ್ಲೇ ಇದ್ದರೂ ನಿಮ್ಮನ್ನು ಹುಡುಕಿಕೊಂಡು ಸಂಬಂಧಿತ ಅಧಿಕಾರಿಗಳು, ಸಿಬ್ಬಂದಿ ಬರುತ್ತಾರೆ.

ಪಾಸಿಟಿವ್ ಗೊತ್ತಾಗುವುದು ಹೇಗೆ? > ಮೂಗಿನ ಸ್ವ್ಯಾಬ್ ಆಧರಿಸಿ ಪಾಸಿಟಿವ್ ಗೊತ್ತಾಗಲಿದೆ > ಟೆಸ್ಟ್ ಕಾರ್ಡ್‍ನ ಕ್ವಾಲಿಟಿ ಕಂಟ್ರೋಲ್ ಮೇಲೆ ಗೊತ್ತಾಗಲಿದೆ > `ಸಿ’ ಬಳಿ 1 ಗೆರೆ ಬಿದ್ದರೆ ನೆಗೆಟಿವ್ > `ಸಿ’ ಮತ್ತು `ಟಿ’ ಅಕ್ಷರದ ಪಕ್ಕ 2 ಗೆರೆ ಬಂದರೆ ಪಾಸಿಟಿವ್ > ಈ ಸೆಲ್ಫ್ ಟೆಸ್ಟ್ ಕಿಟ್‍ನ ಬೆಲೆ 250 ರೂ. ಮಾತ್ರ > 3-4 ದಿನಗಳಲ್ಲಿ ಈ ಕಿಟ್ ಸಿಗಲಿದೆ > ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿಈ ಕಿಟ್ ಸಿಗಲಿದೆ

ಯಾರು ಮಾಡಿಸಿಕೊಳ್ಳಬೇಕು? 250 ರೂಪಾಯಿಗೆ `ಸೆಲ್ಫ್’ ಕೋವಿಡ್ ಟೆಸ್ಟ್ ಸಿಗುತ್ತಿದೆ ಅಂತ ಎಲ್ಲರೂ ಟೆಸ್ಟ್ ಮಾಡಿಸುವಂತಿಲ್ಲ. ಇದಕ್ಕಾಗಿ ಐಸಿಎಂಆರ್ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಎಲ್ಲರೂ ಟೆಸ್ಟ್ ಮಾಡುವಂತೆ ಇಲ್ಲ ಅಂತ ಸ್ಪಷ್ಟಪಡಿಸಿದೆ. ಒಂದು ವೇಳೆ, ಸೆಲ್ಫ್ ಟೆಸ್ಟ್‍ನಲ್ಲಿ ನೆಗೆಟಿವ್ ಬಂದರೆ ಮತ್ತೊಮ್ಮೆ ಆರ್‍ಟಿಪಿಸಿಆರ್ ಟೆಸ್ಟ್‍ಗೂ ಸಲಹೆ ಕೊಟ್ಟಿದೆ.

ಯಾರು ಕೊವಿಸೆಲ್ಫ್ ಟೆಸ್ಟ್ ಮಾಡಿಸಿಕೊಳ್ಳಬಹುದು? > ಎಲ್ಲರೂ ಈ ಸೆಲ್ಫ್ ಟೆಸ್ಟ್ ಕಿಟ್ ಬಳಸಬಾರದು > ಸೋಂಕಿನ ಗುಣ ಲಕ್ಷಣ ಹೊಂದಿರುವವರು > ಪ್ರಾಥಮಿಕ ಸಂಪರ್ಕಿತರು ಟೆಸ್ಟ್ ಮಾಡಿಕೊಳ್ಳಬೇಕು > ರೋಗ ಲಕ್ಷಣ ಇದ್ದರೂ ನೆಗೆಟಿವ್ ಬಂದರೂ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು > ಆಂಟಿಜನ್ ಪರೀಕ್ಷೆ ವೇಳೆ ಮಿಸ್ ಆಗುವ ಪಾಸಿಟಿವ್ ಪ್ರಕರಣವನ್ನು ಆರ್ ಟಿ ಪಿಸಿಆರ್ ನಲ್ಲಿ  ಪತ್ತೆಹಚ್ಚಬಹುದು.

 

LEAVE A REPLY

Please enter your comment!
Please enter your name here