5 ಹಾಡಿಗೆ ಚಂದನ್ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?
ಚಂದನ್ ಶೆಟ್ಟಿ ನಸೀಬು ಬಿಗ್ಬಾಸ್ ನಿಂದ ಬಳಿಕ ಚೇಂಜ್ ಆಗಿ ಬಿಟ್ಟಿದ್ದೆ.. ಮುಟ್ಟಿದ್ದೆಲ್ಲ ಚಿನ್ನ ಅನ್ನೋ ಹಾಗೆ ಚಂದನ್ ಹಾಡಿದ ಹಾಡುಗಳು ಸೂಪರ್ ಹಿಟ್ ಆಗುತ್ತಿದ್ದು, ದಿನೇ ದಿನ ಈ ರ್ಯಾಪರ್ ನ ವರ್ಚಸ್ಸು ಹೆಚ್ಚಾಗುತ್ತಿದೆ.. ಅಭಿಮಾನಿ ಬಳಗವು ದೊಡ್ಡದಾಗುತ್ತಿದೆ.. ಹೀಗಿರೋವಾಗ್ಲೇ ಚಂದನ್ ಶೆಟ್ಟಿಗೆ ಪ್ರತಿಷ್ಠಿತ ಆಡಿಯೋ ಸಂಸ್ಥೆಯಾದ ಲಹರಿ ಕೋಟಿ ಆಫರ್ ನೀಡಿದೆ..
ಹೌದು, ಇದರ ಒಪ್ಪಂದದ ಪ್ರಕಾರ ಚಂದನ್ ಲಹರಿ ಸಂಸ್ಥೆಗೆ 5 ಹಾಡುಗಳನ್ನ ಮಾಡಿಕೊಡಲ್ಲಿದ್ದಾರೆ.. ಇದಕ್ಕಾಗಿ ಒಂದು ಕೋಟಿ ಮೊತ್ತದ ಬಾರೀ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ.. ಇನ್ನು ಕಷ್ಟದ ದಿನಗಳನ್ನ ದಾಟಿ ತನ್ನ ಪ್ರತಿಭೆಯ ಮೂಲಕ ಬೆಳೆಯುತ್ತಿರುವ ಚಂದನ್ ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದಾರೆ. ಜೊತೆಗೆ ಸಿನಿಮಾಗಳಿಗೆ ಮ್ಯೂಸಿಕ್ ನೀಡುವ ಜವಬ್ದಾರಿಯನ್ನ ಹೊತ್ತುಕೊಂಡಿದ್ದಾರೆ.. ಇದಿಷ್ಟೆ ಅಲ್ಲ ವಿಶ್ವದಾದ್ಯಂತ ತನ್ನ ಮ್ಯೂಸಿಕ್ ಷೋವನ್ನ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ..