ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ನಿನ್ನೆ ಬೆಂಗಳೂರಿನ ಓರಾಯನ್ ಮಾಲ್ಗೆ ತೆರಳಿ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ವೀಕ್ಷಿಸಿದರು. ರಾತ್ರಿ 8 ಗಂಟೆಗೆ ಯಶವಂತಪುರದಲ್ಲಿರುವ ಓರಾಯನ್ ಮಾಲ್ನ ಮಲ್ಟಿಫ್ಲೆಕ್ಸ್ನಲ್ಲಿ ಮಂತ್ರಿಗಳಾದ ಆರ್ ಅಶೋಕ್, ಡಾ ಸುಧಾಕರ್, ಬಿ ಸಿ ನಾಗೇಶ್ ಮತ್ತು ಎಂಎಲ್ಎ ರಘುಪತಿ ಭಟ್ ಅವರೊಂದಿಗೆ 777 ಚಾರ್ಲಿ ಸಿನಿಮಾ ನೋಡಿದ ಬೊಮ್ಮಾಯಿ ಭಾವುಕರಾಗಿದ್ದಾರೆ. ಸತತ ಎರಡುವರೆ ಗಂಟೆಗಳ ಕಾಲ ಅಲುಗಾಡದೇ ಸಿನೇಮಾ ನೋಡಿದ ಬೊಮ್ಮಾಯಿ ಕಳೆದ ವರ್ಷ ಸಾವನ್ನಪ್ಪಿದ್ದ ತಮ್ಮ ಮನೆಯ ಮುದ್ದಿನ ನಾಯಿಯನ್ನು ಸ್ಮರಿಸಿಕೊಂಡಿದ್ದಾರೆ.
ಸಿನೇಮಾ ವೀಕ್ಷಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಯಿ ಕುರಿತಂತೆ ಅತ್ಯುತ್ತಮವಾಗಿ ಚಿತ್ರವನ್ನು ತೆಗೆದಿದ್ದಾರೆ. ಇದು ನನ್ನ ಭಾವನೆಯನ್ನು ಕೆರಳಿಸಿತು. ಅತ್ಯುತ್ತಮ ಚಿತ್ರ ಎಂದು ಹೇಳುತ್ತಲೇ ಕಳೆದ ವರ್ಷ ಸಾವನ್ನಪ್ಪಿದ್ದ ತಮ್ಮ ಮನೆಯ ಮುದ್ದಿನ ನಾಯಿಯನ್ನು ನೆನೆಸಿಕೊಂಡು ಮಾಧ್ಯಮಗಳ ಮುಂದೆಯೇ ಗಳಗಳನೆ ಅತ್ತಿದ್ದಾರೆ.