No menu items!
12 C
Munich
Saturday, April 25, 2026

ಇನ್ಸ್ಟಾಗ್ರಾಂನಲ್ಲಿ ರಮ್ಯಾಗೆ ವ್ಯಕ್ತಿಯೊಬ್ಬ ನಿಂದನೆ

Must read

ಕನ್ನಡ ಚಿತ್ರರಂಗದ ನಟಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ರಮ್ಯಾಗೆ ವ್ಯಕ್ತಿಯೊಬ್ಬ ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಸ್ವತಃ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವ್ಯಕ್ತಿಯೋರ್ವ ರಮ್ಯಾ ಕುರಿತಾಗಿ ಇನ್ಸ್ಟಾಗ್ರಾಂನಲ್ಲಿ ನಿಂದನಾತ್ಮಕ ಪದಗಳನ್ನ ಬಳಸಿದ್ದ. ಹೀಗಾಗಿ ಅವುಗಳ ಸ್ಕ್ರೀನ್ ಶಾಟ್ ತೆಗೆದುಕೊಂಡು ಬಂದಿದ್ದ ರಮ್ಯಾ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಆದರೆ ರಮ್ಯಾ ಅವರಿಗೆ ನಿಂದಿಸಿರೋ ವ್ಯಕ್ತಿ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

 

ನಿಂದನೆ ಮಾಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿರುವ ನಟಿ ರಮ್ಯಾ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನೂ ನಟಿ ರಮ್ಯಾ ದೂರು ನೀಡಿದ ಹಿನ್ನೆಲೆ, ಪೊಲೀಸರು ಆರೋಪಿ ವಿರುದ್ಧ FIR ದಾಖಲಿಸಿದ್ದು, ದೂರು ಕೊಡೋ ಮುನ್ನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಜೊತೆ ರಮ್ಯಾ ಚರ್ಚೆ ನಡೆಸಿದರು. ಸದ್ಯ ರಮ್ಯಾ ದೂರಿನ ಅನ್ವಯ ಎಫ್ ಐ ಆರ್ ದಾಖಲಿಸಿಕೊಂಡು ಆರೋಪಿಗಾಗಿ, ಸೆಂಟ್ರಲ್ ವಿಭಾಗದ ಸೈಬರ್ ಕ್ರೈಂ ಪೊಲೀಸರಿಂದ ತನಿಖೆ ಮುಂದುವರಿದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article