ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಅಲ್ಲಿನ ಜನರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆಯೊಂದು ಚೆನ್ನೈನ ಕಾಸಿ ಚಿತ್ರ ಮಂದಿರದಲ್ಲಿ ಸಂಭವಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ ಮಾಡಬೇಕೆಂದು ಹೇಳಿದೆ. ಈ ಪ್ರಕಾರವಾಗಿ ಸಿನಿಮಾ ಆರಂಭಕ್ಕೂ ಮುನ್ನ ಪರದೆಯ ಮೇಲೆ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ ಪ್ರದರ್ಶನ ಮಾಡುವಾಗ ಅಂಗ ಹೂನರು ಹೊರತುಪಡಿಸಿದಂತೆ ಉಳಿದೆಲ್ಲರೂ ಎದ್ದು ನಿಂತು ಗೌರವ ಸಮರ್ಪಿಸಬೇಕು ಎಂದು ತಿಳಿಸಿದೆ. ಹೀಗಿದ್ದರೂ ಚೆನ್ನೈನ ಕಾಸಿ ಚಿತ್ರ ಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಯುವ-ಯುವತಿಯರ ಮೇಲೆ ಹಲ್ಲೆ ಮಾಡಲಾಗಿದೆ. ಚಿತ್ರ ಮಂದಿರದಲ್ಲಿ ಚೆನ್ನೈ 28 ಸಿನಿಮಾ ಪ್ರದರ್ಶನಗೊಳ್ಳೋಕು ಮುನ್ನ ರಾಷ್ಟ್ರಗೀತೆ ಪ್ರದರ್ಶನಗೊಂಡಿದೆ. ಈ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರೂ ಈ 7 ಮಂದಿ ಮಾತ್ರ ಸ್ಥಳದಿಂದ ಅಲ್ಲಾಡಲೇ ಇಲ್ಲ. ಈ ಹಿನ್ನಲೆ ರಾಷ್ಟ್ರಗೀತೆಗೆ ಅಗೌರವ ತೋರಿದ್ದರಿಂದ ಥಿಯೇಟರ್‍ನಲ್ಲಿದ್ದ ಕೆಲವರು ಗುಂಪುಗೂಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆಗೊಳಗಾದ ವಿದ್ಯಾರ್ಥಿಗಳೆಲ್ಲರೂ ಸಂಘಟನಾ ಕಾರ್ಯಕರ್ತರಾಗಿದ್ದು ರಾಷ್ಟ್ರಗೀತೆಗೆ ಗೌರವ ಸಲ್ಲಿಸೋಕೆ ಸೂಕ್ತ ಸ್ಥಳ ಇದಲ್ಲ ಎಂಬುದು ಅವರ ವಾದವಾಗಿದೆ. ಹೀಗಾಗಿ ತಾವು ಎದ್ದು ನಿಂತಿಲ್ಲ ಎನ್ನುತ್ತಾರೆ ಹಲ್ಲೆಗೊಳಗಾದ ವಿದ್ಯಾರ್ಥಿಗಳು. ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲದೇ ಅಗೌರವ ತೋರಿದ ವಿದ್ಯಾರ್ಥಿಗಳನ್ನು ಕೂಡಲೇ ಚಿತ್ರ ಮಂದಿರದಿಂದ ಹೊರ ಕಳುಹಿಸಬೇಕೆಂದು ಅಲ್ಲಿನ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ. ಈ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!
ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?
ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!
ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!