No menu items!
21.5 C
Munich
Monday, September 14, 2026

ಮತ್ತೆ “ರಾಯರ ದರ್ಶನ” ನೀಡಲಿದ್ದಾರೆ: ಎಲ್ಲಿ ಗೊತ್ತಾ ?

Must read

ಮತ್ತೆ “ರಾಯರ ದರ್ಶನ” ನೀಡಲಿದ್ದಾರೆ: ಎಲ್ಲಿ ಗೊತ್ತಾ ?

ಲಕ್ಷ್ಮೀ ಗಣೇಶ ಪ್ರೋಡೆಕ್ಷನ್ TNIT ಸಹಯೋಗದಲ್ಲಿ ಮೂಡಿಬಂದ
“ರಾಯರ ದರ್ಶನ” ಆಲ್ಬಂ ಸಾಂಗ್ ಅಭೂತಪೂರ್ವವಾಗಿ ಮುನ್ನುಗ್ಗುತ್ತಿದೆ. ಈ ಭಕ್ತಿಯ ಗೀತೆಯನ್ನ ರಾಯರ ಮಕ್ಕಳು ತಬ್ಬಿಕಡಿದ್ದಾರೆ. ಎಲ್ಲರ ಬಾಯಲ್ಲೂ ಅದರದ್ದೆ ಗುನುಗು. ಸೋಷಿಯಲ್ ಮೀಡಿಯಾದಲ್ಲೂ ಅದರದ್ದೆ ಆರ್ಭಟ. ಹೀಗೆ “ರಾಯರ ದರ್ಶನ” ಆಲ್ಬಂ ಅದ್ಭುತವಾಗಿ ತನ್ನದೆ ಆದ ಛಾಪು ಮೂಡಿಸುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ರಾಯರ ಮಠದಲ್ಲಿ ಈ ಆಲ್ಬಂ ಸಾಂಗ್ ಪ್ರದರ್ಶನ ಏರ್ಪಡಿಸಲಾಗಿತ್ತು. ವಸ್ತ್ರಂ ಸಿಲ್ಕ್ಸ್‌ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಪೃಥ್ವಿ ಅಂಬರ್ , ಕಿರುತೆರೆ ಮತ್ತು ಹಿರಿತೆರೆ ನಟಿ ವಾಣಿಶ್ರೀ ಸೇರಿತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಾಗೂ ಕಲ್ಪವೃಕ್ಷ ನಾಡು ಮೈಸೂರಿನ ರಾಯರ ಮಠದಲ್ಲಿ “ರಾಯರ ದರ್ಶನ”ವನ್ನ ಮಾಡಿಸಲಾಯಿತು.

ಮತ್ತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಯರ ಮಠದಲ್ಲಿಯು ಆಲ್ಬಂ ಸಾಂಗ್ ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲಿಯೂ ಸಹ ರಾಜಕೀಯ ಗಣ್ಯರು ಮಾಧ್ಯಮದ ಸ್ನೇಹಿತರು ಚಂದನವನದ ತಾರೆಯರು ನೆರದಿದ್ದರು

ಈಗ ಮತ್ತೆ ರಾಯರು ದರ್ಶನ ನೀಡಲಿದ್ದಾರೆ. ಅದು ಅರಮನೆ ನಗರಿ ಮೈಸೂರಿನಲ್ಲಿ. ಹೌದು , ಮೈಸೂರಿನಲ್ಲಿ ಇದೇ ಗುರುವಾರ ದರ್ಶನವನ್ನ ನೀಡಲಿದ್ದಾರೆ. ಮೈಸೂರಿನಲ್ಲಿರುವ ರಾಯರ ಮಠದಲ್ಲಿ “ರಾಯರ ದರ್ಶನ” ಆಲ್ಬಂ ಸಾಂಗ್ ಪ್ರದರ್ಶನ ಏರ್ಪಡಿಸಿದ್ದ, ಮೈಸೂರಿನ ಜನತೆಗೆ “ರಾಯರ ದರ್ಶನ” ಮಾಡಿಸುವ ಆಸೆ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಟೀಂನದ್ದಾಗಿದೆ.

- Advertisement -spot_img

More articles

- Advertisement -spot_img

Latest article