No menu items!
12.1 C
Munich
Saturday, May 2, 2026

ಪತಂಜಲಿ ಸಂಸ್ಥೆಗೆ 11 ಲಕ್ಷ ರೂ. ದಂಡ..!

Must read

ತಮ್ಮ ಸಂಸ್ಥೆಯ ಉತ್ಪನ್ನಗಳು ಹೆಚ್ಚೆಚ್ಚು ಮಾರಾಟವಾಗ್ಲಿ ಎಂಬ ಕಾರಣಕ್ಕಾಗಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿದ ಆರೋಪದ ಮೇರೆಗೆ ಖ್ಯಾತ ಯೋಗ ಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ ಹರಿದ್ವಾರ ಜಿಲ್ಲಾ ಮಾಜಿಸ್ಟ್ರೇಟ್ ನ್ಯಾಯಾಲಯ 11 ರೂ. ಲಕ್ಷ ದಂಡ ವಿಧಿಸಿದೆ.
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಪತಂಜಲಿ ಸಂಸ್ಥೆ ತಪ್ಪು ಮಾಹಿತಿ ನೀಡಿ ಜನರನ್ನ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಮೊತ್ತದ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ತಪ್ಪು ಮಾಹಿತಿ ನೀಡಿ ಜನರ ಜಾರಿ ತಪ್ಪಿಸುತ್ತಿರುವ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಲಲಿತ್ ನರೇನ್ ಮಿಶ್ರಾ ಅವರು 11 ಲಕ್ಷ ರೂ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 52 ಮತ್ತು 53 (ತಪ್ಪು ಜಾಹೀರಾತು ಅಥವಾ ದಾರಿ ತಪ್ಪಿಸುವ ಜಾಹೀರಾತು) ಮತ್ತು ಸೆಕ್ಷನ್ 23.1(1)ರ ಅಡಿಯಲ್ಲಿ ಒಂದು ತಿಂಗಳ ಗಡುವಿನ ಅಂತರದಲ್ಲಿ ದಂಡ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ ಈ ಕುರಿತು ಸಬಂಧಪಟ್ಟ ಜಿಲ್ಲಾ ಆಹಾರ ಸುರಕ್ಷತೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದೆ. 2012ರಲ್ಲಿ ನೀಡಿದ್ದ ದೂರಿನನ್ವಯ ಪತಂಜಲಿ ಸಂಸ್ಥೆ ವಿರುದ್ದ ಜಾಹೀರಾತಿನಲ್ಲಿ ಪ್ರಸಾರ ಮಾಡಿರುವಂತೆ ಸಂಸ್ಥೆಯ ಉತ್ಪನ್ನಗಳು ಉನ್ನತ ಗುಣಮಟ್ಟದ್ದೇನು ಅಲ್ಲ ಎಂದು ಸಾಬೀತಾಗಿದೆ ಎಂದು ಆರೋಪಿಸಲಾಗಿತ್ತು. ಉತ್ತರಖಂಡ ರುದ್ರಾಪುರದಲ್ಲಿರುವ ಏಕೈಕ ಎಫ್‍ಎಸ್‍ಎಐ ಪ್ರಮಾಣಿಕರಿಸಲ್ಪಟ್ಟ ಆಹಾರ ಗುಣಮಟ್ಟ ಪರಿಕ್ಷಾ ಕೇಂದ್ರದಲ್ಲಿ ಪತಂಜಲಿ ಸಂಸ್ಥೆಯ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸಿಲಾಗಿತ್ತು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!

ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!

ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!

ಮತ್ತೆ ಆಸ್ಕರ್ ರೇಸ್‍ನಲ್ಲಿ ಎ.ಆರ್ ರೆಹಮಾನ್..!

ವರ್ಧಾ ಚಂಡಮಾರುತ ವೇಳೆ 10 ಸಾವಿರ ಜನರನ್ನು ರಕ್ಷಣೆ ಮಾಡಿದ ಇಸ್ರೋ..!

ಮೇಟಿ ರಾಸಲೀಲೆ ವೀಡಿಯೋ ಬಹಿರಂಗ..!

ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article