No menu items!
14.1 C
Munich
Wednesday, September 9, 2026

ರಾಯರ ಮಠಕ್ಕೆ ಭಕ್ತರಿಂದ ಕೋಟ್ಯಂತರ ಕಾಣಿಕೆ; ₹3.30 ಕೋಟಿ ನಗದು, 47 ಗ್ರಾಂ ಚಿನ್ನ ಹಾಗೂ 632 ಗ್ರಾಂ ಬೆಳ್ಳಿ ಸಂಗ್ರಹ

Must read

ರಾಯರ ಮಠಕ್ಕೆ ಭಕ್ತರಿಂದ ಕೋಟ್ಯಂತರ ಕಾಣಿಕೆ; ₹3.30 ಕೋಟಿ ನಗದು, 47 ಗ್ರಾಂ ಚಿನ್ನ ಹಾಗೂ 632 ಗ್ರಾಂ ಬೆಳ್ಳಿ ಸಂಗ್ರಹ

ರಾಯಚೂರು: ಕಲಿಯುಗದ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ 16 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಮಠಕ್ಕೆ ಒಟ್ಟು ₹3,30,69,139 ಕಾಣಿಕೆ ಸಂಗ್ರಹವಾಗಿದೆ.
ಮಂತ್ರಾಲಯದ ರಾಯರ ಮಠಕ್ಕೆ 16 ದಿನಗಳ ಅವಧಿಯಲ್ಲಿ ಭಕ್ತರಿಂದ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದುಬಂದಿದೆ. ಸಂಗ್ರಹವಾದ ಒಟ್ಟು ಮೊತ್ತದಲ್ಲಿ ₹10,02,500 ಮೌಲ್ಯದ ನಾಣ್ಯಗಳು ಸೇರಿವೆ.


ಇದರ ಜೊತೆಗೆ ಭಕ್ತರು ಕಾಣಿಕೆ ರೂಪದಲ್ಲಿ 47 ಗ್ರಾಂ ಚಿನ್ನ ಹಾಗೂ 632 ಗ್ರಾಂ ಬೆಳ್ಳಿ ಸಮರ್ಪಿಸಿದ್ದಾರೆ.
ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಭಕ್ತರಿಂದ ಸಂಗ್ರಹವಾದ ಕಾಣಿಕೆಗಳನ್ನು ನಿಯಮಾನುಸಾರ ಎಣಿಕೆ ಮಾಡಿ ದಾಖಲಿಸಲಾಗಿದೆ.

- Advertisement -spot_img

More articles

- Advertisement -spot_img

Latest article